ಚಿಕನ್‌ ಪಾಕ್ಸ್‌ ಸ್ವಚ್ಛತೆ ಪಾಲಿಸಿ, ಪಥ್ಯ ಅನುಸರಿಸಿ

ಆಳವಾದ ಕಲೆಗಳು ಉಳಿಯದ ಹಾಗೆ ಮಾಡಲು ಆದಷ್ಟು ಗುಳ್ಳೆಗಳನ್ನು ಉಗುರಿನಿಂದ ಮುಟ್ಟದೇ ಇರುವುದು ಒಳ್ಳೆಯದು

Team Udayavani, Aug 10, 2021, 3:28 PM IST

ಚಿಕನ್‌ ಪಾಕ್ಸ್‌ ಸ್ವಚ್ಛತೆ ಪಾಲಿಸಿ, ಪಥ್ಯ ಅನುಸರಿಸಿ

ಚಿಕನ್‌ ಪಾಕ್ಸ್‌ ಸಾಮಾನ್ಯವಾಗಿ ಬಾಲ್ಯದಲ್ಲಿ ಕಂಡು ಬರುವ ಒಂದು ವೈರಲ್‌ ಇನ್ಫೆಕ್ಷನ್‌. ಈ ಸೋಂಕು ಮೇಲ್ನೋಟದಲ್ಲಿ ಸಾಮಾನ್ಯವಾಗಿ ಕಂಡುಬಂದರೂ ನಾವು ಇದನ್ನು ನಿರ್ಲಕ್ಷಿಸುವಂತಿಲ್ಲ. ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಸರಿಯಾದ ಪಥ್ಯ ಹಾಗೂ ಜೀವನ ಪದ್ಧತಿ ಅನುಸರಿಸದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ:ಪಂಜಾಬ್‌ಗೆ ಪಾಕ್‌ ಡ್ರೋನ್‌ ಮೂಲಕ ಟಿಫಿನ್‌ ಬಾಕ್ಸ್‌ ಬಾಂಬ್‌?

ಕಾರಣಗಳು
ಚಿಕನ್‌ ಪಾಕ್ಸ್‌ ಸೋಂಕು ವಾರಿಸೆಲ್ಲಾ, ಜೋಸ್ಟರ್‌ ಎಂಬ ವೈರಸ್‌ನಿಂದ ಹರಡುತ್ತದೆ. ಉಸಿರಾಟದ ಮೂಲಕ, ಕಲುಷಿತ, ಅನಾರೋಗ್ಯಕರ ಆಹಾರ, ನೀರು ಸೇವನೆಯಿಂದ ಅಥವಾ ಚಿಕನ್‌ ಪಾಕ್ಸ್‌ ಇರುವ ವ್ಯಕ್ತಿಯ ನೇರ ಸಂಪರ್ಕದಿಂದ ಹರಡುತ್ತದೆ.

ಮುಖ್ಯವಾಗಿ ಈ ಸೋಂಕು ವೈರಸ್‌ ಗಾಳಿಯ ಮೂಲಕ ಹರಡುವುದರಿಂದ ಬರುತ್ತದೆ. ಚಿಕನ್‌ ಪಾಕ್ಸ್‌ ರೋಗಿಯ ಕಫ‌ ಅಥವಾ ಸೀನುವಾಗ ಹೊರಬೀಳುವ ಹನಿಗಳಿಂದ ಹರಡುತ್ತದೆ. ರೋಗ- ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಹಾಗೂ ಮಕ್ಕಳಿಗೆ ಈ ರೋಗ ನಿರೋಧಕ ಚುಚ್ಚು ಮದ್ದು ಕೊಡಿಸದೇ ಇದ್ದಲ್ಲಿ ಚಿಕನ್‌ ಪಾಕ್ಸ್‌ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗೆ ಮುಖದ ಮೇಲೆ ಮತ್ತು ಶರೀರದ ಮೇಲೆ ಗುಳ್ಳೆಗಳು 5 ರಿಂದ 6 ದಿನಗಳವರೆಗೆ
ಹರಡುವ ಸಾಧ್ಯತೆ ಇದೆ.

ಸೋಂಕು ಹರಡುವ ಕಾಲ
ಕೆಲವು ಕಾಯಿಲೆಗಳು ನಿರ್ದಿಷ್ಟ ಸಮಯ ಅಥವಾ ಋತುಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಹವಾಮಾನ ಬದಲಾವಣೆಗಳ ಸಂದರ್ಭದಲ್ಲಿ ಅಂದರೆ ಚಳಿಗಾಲ ಮತ್ತು ವಸಂತಕಾಲದಲ್ಲಿ ಕಂಡುಬರುತ್ತದೆ.

ಜ್ವರ, ಶೀತ, ತಲೆನೋವು, ಎಲ್ಲ ಚಿಕನ್‌ ಪಾಕ್ಸ್‌ನ ಮೊದಲು ಕಂಡುಬರುವ ಸೂಚನೆಗಳು. ಎರಡನೇ ದಿನ ಮುಖ ಮತ್ತು ಶರೀರದಲ್ಲಿ ಸಣ್ಣ ಸೆಕೆ ಬೊಕ್ಕೆಗಳಂತೆ ಕಂಡು ಬರುತ್ತದೆ. ಹೊಟ್ಟೆ, ಬೆನ್ನು, ಮುಖದ ಮೇಲೆ ಹೆಚ್ಚಿನ ಗುಳ್ಳೆಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಮಕ್ಕಳು ಯಾವುದೇ ತೊಂದರೆಯಿಲ್ಲದೇ ಚಿಕನ್‌ ಪಾಕ್ಸ್ ಅನ್ನು ಸಹಿಸುತ್ತಾರೆ.

ಮುಂಜಾಗ್ರತೆ ಕ್ರಮಗಳು
ಈ ರೋಗ ಬಾರದೇ ಇರುವ ಹಾಗೆ ಮಕ್ಕಳಿಗೆ ಎಂಎಂಆರ್‌ ವಾಕ್ಸಿನ್‌ ಕೊಡಿಸಬೇಕು. ಮಕ್ಕಳಿಗೆ ಬಂದಲ್ಲಿ ಶಾಲೆಗೆ ಹೋಗದೆ ವಿಶ್ರಾತಿ ತೆಗೆದುಕೊಂಡು ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಚರ್ಮದ ನೈರ್ಮಲ್ಯ, ಉತ್ತಮ ಆರೈಕೆ ಮತ್ತು ವೈದ್ಯರ ಸಲಹೆಗಳನ್ನು ಪಡೆದು, ಆಂಟಿಸೆಪ್ಟಿಕ್‌ ಕ್ರಮಗಳನ್ನು ಅನುಸರಿಸಬೇಕು. ಆಳವಾದ ಕಲೆಗಳು ಉಳಿಯದ ಹಾಗೆ ಮಾಡಲು ಆದಷ್ಟು ಗುಳ್ಳೆಗಳನ್ನು ಉಗುರಿನಿಂದ ಮುಟ್ಟದೇ ಇರುವುದು ಒಳ್ಳೆಯದು. ಚರ್ಮದ ಗಾಯದಿಂದ ರೋಗ ಉಲ್ಬಣವಾಗದಂತೆ ಜಾಗೃತೆ ವಹಿಸಬೇಕು.

ಪಥ್ಯ ಅಗತ್ಯ
ಕರಿದ ಹಾಗೂ ಖಾರವಾದ ತಿಂಡಿ ಸಂಪೂರ್ಣವಾಗಿ ತ್ಯಜಿಸಬೇಕು. ಕಹಿಬೇವಿನ ಕಷಾಯದಲ್ಲಿ ಸ್ನಾನ ಮಾಡುವುದು, ಎಳನೀರು ಹಾಗೂ ನೀರನ್ನು ಧಾರಾಳವಾಗಿ ಕುಡಿಯುವುದು, ರೋಗವನ್ನು ಶೀಘ್ರವಾಗಿ ಗುಣಮುಖ ಮಾಡುವುದು. ಗರ್ಭಿಣಿಯರು, ವೃದ್ಧರಿಗೆ, ಚಿಕನ್‌ ಪಾಕ್ಸ್ ಬಂದಾಗ ವೈದ್ಯರ ಸಲಹೆ ಅಗತ್ಯ. ಆಗಾಗ ತುರಿಕೆಯಿಂದ ಇನ್‌ಫೆಕ್ಷನ್‌ ಆಗುವ ಸಾಧ್ಯತೆ ಇರುವುದರಿಂದ ಉಗುರುಗಳನ್ನು ಕತ್ತರಿಸುವುದು ಉತ್ತಮ.

ಇನ್‌ಫೆಕ್ಷನ್‌ ಇದ್ದಲ್ಲಿ ಆ್ಯಂಟಿ ಬಯೋಟಿಕ್  ಔಷಧಗಳ ಆವಶ್ಯಕತೆ ಇರುತ್ತದೆ. ಒಬ್ಬ ವ್ಯಕ್ತಿಗೆ ಒಮ್ಮೆ ಚಿಕನ್‌ ಪಾಕ್ಸ್ ಬಂದರೆ ಆ ವ್ಯಕ್ತಿಯು ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತಾನೆ. ಚಿಕನ್‌ ಪಾಕ್ಸ್ ಎರಡನೇ ಸಲ ಬಂದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಚಿಕನ್‌ ಪಾಕ್ಸ್ ಬಂದ ಮೂರನೇ ದಿನ ಕಣ್ಣು ಕೆಂಪು ಆಗಿರಬಹುದು. ಯಾವುದೇ ತೊಂದರೆ ಇದ್ದಲ್ಲಿ ವೈದ್ಯರ ಸಂಪರ್ಕ ಅಗತ್ಯ.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.