ಬೇಬಿಬೆಟ್ಟದಲ್ಲಿ 92 ಸಜೀವ ಜಿಲೆಟಿನ್‌ ಸ್ಫೋಟಕ ಪತ್ತೆ


Team Udayavani, Aug 10, 2021, 4:43 PM IST

ಬೇಬಿಬೆಟ್ಟದಲ್ಲಿ 92 ಸಜೀವ ಜಿಲೆಟಿನ್‌ ಸ್ಫೋಟಕ ಪತ್ತೆ

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಅಮೃತಮಹಲ್‌ ಕಾವಲ್‌ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಕಳೆದ ಶನಿವಾರದಿಂದ ಸ್ಫೋಟಕ ಪತ್ತೆ ಮತ್ತು ನಿಷ್ಕ್ರಿಯ ತಂಡದ (ಎಸಿ ಮತ್ತು ಬಿಡಿಡಿಎಸ್‌) ಸಿಬ್ಬಂದಿಗಳು ಸ್ಫೋಟಕಗಳ ಶೋಧಕಾರ್ಯ ನಡೆಸಿ ನಿರ್ಗಮಿಸಿದ್ದು, ಸೋಮವಾರ ಬನ್ನಂಗಾಡಿ ಸರ್ವೆ ನಂ 24ರ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಕುರಿಗಾಹಿಗಳಿಗೆ ಸುಮಾರು 92 ಸಜೀವ ಜಿಲೆಟಿನ್‌ ಸ್ಫೋಟಕ ಮತ್ತು ಅದಕ್ಕೆ ಬಳಸುವ ವಾಹಕ (ತಂತಿ)ಗಳು ಕಣ್ಣಿಗೆ ಬಿದ್ದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಲೂಕಿನ ಬೇಬಿ ಬೆಟ್ಟದ ಕಾವಲ್‌ ಪ್ರದೇಶದಲ್ಲಿ ಪದೇ ಪದೆ ಸ್ಫೋಟಕಗಳು ಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ಫೋಟಕ ಪತ್ತೆ ಮತ್ತು ನಿಷ್ಕ್ರಿಯ ದಳದ ತಂಡ ಶನಿವಾರದಿಂದ ನಿರಂತರವಾಗಿ ಶೋಧ ಕಾರ್ಯ ನಡೆಸಿದರೂ ನಿರೀಕ್ಷಿತ ಮಟ್ಟದಲ್ಲಿ ಪತ್ತೆಯಾಗದ ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಸೋಮವಾರ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆ.7 ರಿಂದ ಸತತ ಮೂರು ದಿನಗಳ ಕಾಲ ಸ್ಫೋಟಕ ಪತ್ತೆ ದಳ ಮತ್ತು ಬಾಂಬ್‌ ನಿಷ್ಕ್ರಿಯ ತಂಡದ ಅಧಿಕಾರಿಗಳು ಬೇಬಿ ಬೆಟ್ಟದ ಅಮೃತ ಮಹಲ್‌ ಕಾವಲ್‌ ಸೇರಿದಂತೆ ಚಿನಕುರಳಿ, ಹೊನಗಾನಹಳ್ಳಿ, ರಾಗಿಮುದ್ದನಹಳ್ಳಿ, ಶಿಂಡಬೋಗನಹಳ್ಳಿ ವ್ಯಾಪ್ತಿಯ ಕ್ವಾರಿ ಮತ್ತು ಕ್ರಷರ್‌ಗಳ ನಿರಂತರ ಶೋಧಕಾರ್ಯ ಕೈಗೊಂಡಿತ್ತು.

ಕಾರ್ಯವೈಖರಿ ಬಗ್ಗೆ ಅನುಮಾನ: ಶೋಧ ಕಾರ್ಯದಲ್ಲಿ ಮೊದಲನೇ ದಿನ ಹಲವು ಸ್ಫೋಟಕಗಳು ಪತ್ತೆಯಾದರೂ ಎರಡನೇ ಮತ್ತು ಮೂರನೇ ದಿನ ಸ್ಫೋಟಕಗಳು ನಿರೀಕ್ಷೆ ಮಟ್ಟದಲ್ಲಿ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಸನ, ಮೈಸೂರು ಹಾಗೂ ಮಂಡ್ಯದಿಂದ ಆಗಮಿಸಿದ್ದ ಸ್ಫೋಟಕ ಪತ್ತೆ ದಳ ವಾಪಸ್ಸಾಗಿತ್ತು. ಆದರೆ, ಅವರು ಶೋಧ ನಡೆಸದ ಹಲವು ಸ್ಥಳಗಳಲ್ಲಿ ಸೋಮವಾರ ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಬಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದು ಸ್ಫೋಟಕ ಪತ್ತೆ ದಳದ ಕಾರ್ಯವೈಖರಿ ಬಗ್ಗೆ ಹಲವು ಅನುಮಾನ ಮೂಡಿಸಿದೆ.

ಸ್ಫೋಟಕಗಳು ವಶಕ್ಕೆ: ಸೋಮವಾರ ಬನ್ನಂಗಾಡಿ ವ್ಯಾಪ್ತಿಯ ಸರ್ವೆನಂ 24ರ ಗೋಮಾಳದಲ್ಲಿ 92 ಜಿಲೆಟಿನ್‌ ಟ್ಯೂಬ್‌ಗಳು ಹಾಗೂ 50 ಮೀ.ಉದ್ದದ ಮೆಗ್ಗರ್‌ ಬ್ಲಾಸ್ಟ್‌ಗೆ ಬಳಸುವ ವಾಹಕ (ತಂತಿ) ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಪೊಲೀಸರು, ಸ್ಥಳಕ್ಕೆ ತೆರಳಿ ಸ್ಫೋಟಕಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಬಿಡಿಡಿಎಸ್‌ ತಂಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತೆರಳಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಗಂಭೀರ ಶೋಧ ಕಾರ್ಯ ಅಗತ್ಯ
ಮೂರು ದಿನಗಳ ಕಾಲ ಸ್ಫೋಟಕ ಪತ್ತೆ ಮತ್ತು ನಿಷ್ಕ್ರಿಯ ದಳದವರು ನಿರಂತರವಾಗಿ ಶೋಧ ಕಾರ್ಯ ನಡೆಸಿದ್ದರೂ, ನಿರೀಕ್ಷಿತ ಮಟ್ಟದಲ್ಲಿ
ಸ್ಫೋಟಕಗಳನ್ನು ಪತ್ತೆ ಹಚ್ಚಲು ಕಾರಣವಾಗದ ಪರಿಣಾಮ ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಬೀಳುತ್ತಿವೆ. ನೆಪ ಮಾತ್ರಕ್ಕೆ ಶೋಧ ನಡೆಸುವುದನ್ನು ಬಿಟ್ಟು ಗಂಭೀರವಾಗಿ ಶೋಧ ಕಾರ್ಯ ನಡೆಸಿದರೆ ಸಾವಿರಗಟ್ಟಲೇ ಸ್ಫೋಟಕಗಳು ಪತ್ತೆಯಾಗುವುದು ನಿಶ್ಚಿತ ಎನ್ನಲಾಗುತ್ತಿದೆ

ಅನಧಿಕೃತ 10 ಕ್ರಷರ್‌ ವಿರುದ್ಧಕ್ರಮ: ಪ್ರಕರಣ ದಾಖಲು
ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜಾnನ ಇಲಾಖೆಯಿಂದ ಯಾವುದೇ ಪರವಾನಗಿ ಹಾಗೂ ಅರ್ಜಿ ಸಲ್ಲಿಸದೆ ಅನಧಿಕೃತವಾಗಿ ಸ್ಥಾಪಿಸಲಾಗಿದ್ದ 10 ಕ್ರಷರ್‌ ಘಟಕಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಗಣಿ ಮತ್ತು ಭೂವಿಜ್ಞಾನಿ ಎಂ.ವಿ.ಪದ್ಮಜಾ ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ, ಆಲಗೋಡು, ಗಣಂಗೂರು, ಹಂಗರಹಳ್ಳಿ, ಗೌಡಹಳ್ಳಿ, ಮುಂಡುಗದೊರೆ, ನೀಲನಕೊಪ್ಪಲು ಗ್ರಾಮಗಳ ವ್ಯಾಪ್ತಿಯಲ್ಲಿ ಯಾವುದೇ ಪರವಾನಗಿ ಪಡೆಯದೇ ಹಾಗೂ ಅರ್ಜಿ ಸಲ್ಲಿಸದೆ ಅನಧಿಕೃತವಾಗಿ ಕ್ರಷರ್‌ ಘಟಕಗಳನ್ನು ಸ್ಥಾಪಿಸಿದ್ದ 10 ಕ್ರಷರ್‌ಗಳ ಮೇಲೆ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಮತ್ತು ಲೈಸೆನ್ಸಿಂಗ್‌ ಪ್ರಾಧಿಕಾರದ ಸೂಚನೆಯಂತೆ 17 ಮಂದಿ ಮೇಲೆ ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ(ಪಿಸಿಆರ್‌) ದಾಖಲಿಸಲಾಗಿದೆ.

ಇದನ್ನೂ ಓದಿ:ಎಲ್ ಐ ಸಿಯ ಈ ಪಾಲಿಸಿ ನೀವು ಪಡೆದರೇ, ಇಷ್ಟು ಪ್ರಮಾಣದಲ್ಲಿ ನಿಮಗೆ ಪಿಂಚಣಿ ಲಭ್ಯವಾಗುತ್ತದೆ.!?

ಕ್ರಷರ್‌ ಮಾಲೀಕರಾದ ಜಕ್ಕನಹಳ್ಳಿ ವ್ಯಾಪ್ತಿಯ ಜೆ.ದೇವರಾಜು, ಜೆ.ಮಹದೇವು, ಶ್ರೀಕಾಂತ್‌, ಆಲಗೋಡು ವ್ಯಾಪ್ತಿಯ ಚೆನ್ನವೆಂಕಟಯ್ಯ,
ಜಿ.ಆರ್‌.ನಂದೀಶ್‌, ಗಣಂಗೂರು ವ್ಯಾಪ್ತಿಯ ವೆಂಕಟಸ್ವಾಮಿ, ಎಂ.ವಿ.ಸತೀಶ್‌, ಹಂಗರಹಳ್ಳಿ ವ್ಯಾಪ್ತಿಯ ಸಿ.ಆರ್‌.ರಮೇಶ್‌, ಪುನೀತ್‌ಗೌಡ
ಗೌಡಹಳ್ಳಿ ವ್ಯಾಪ್ತಿಯ ಕೃಷ್ಣಯ್ಯ ಭಾಸ್ಕರ, ಲಿಂಗೇಗೌಡ, ಮುಂಡುಗದೊರೆ ವ್ಯಾಪ್ತಿಯ ಸಿ.ಬಿ.ನಾರಾಯಣಗೌಡ, ಸಿ.ಎನ್‌.ಸೋನಿಯಾ,
ಕೆ.ಶಿವಕುಮಾರ್‌, ನೀಲನಕೊಪ್ಪಲು ವ್ಯಾಪ್ತಿಯ ಮೋಟಯ್ಯ, ಸೋಮಶೇಖರ್‌ ಅವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ಜಂಟಿ ತಂಡ ರಚನೆ: ಜಿಲ್ಲೆಯಾದ್ಯಂತ ಅನಧಿಕೃತ ಗಣಿಗಾರಿಕೆ ಹೊಂಡಗಳಲ್ಲಿ ಹೊರ ತೆಗೆದಿರುವ ಕಟ್ಟಡ ಕಲ್ಲಿನ ಪ್ರಮಾಣವನ್ನು ಅಂದಾಜಿಸಿ ನಕ್ಷೆಯೊಂದಿಗೆ ವರದಿ ನೀಡಲು ಜಂಟಿ ತಂಡವನ್ನು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ರಚಿಸಿದ್ದಾರೆ.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

2

Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.