![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 10, 2021, 6:31 PM IST
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿ ನಾಳೆಗೆ (ಆ.11) 24 ವರ್ಷಗಳು ತುಂಬಲಿದ್ದು, ಈ ದಿನವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕಾಗಿ ಇಂದು ಸಂಜೆ ಹೊಸ ಕಾಮನ್ ಡಿಪಿ ( cdp) ರಿಲೀಸ್ ಮಾಡಲಾಗಿದೆ.
ಲೈಟ್ ಬಾಯ್ ಆಗಿ ಕಾಲಿಟ್ಟು ಚಂದನವನಕ್ಕೆ ಯಜಮಾನ ಪಟ್ಟಕ್ಕೆ ಏರಿದ ದರ್ಶನ್ ಅವರ ಸಿನಿ ಪಯಣವನ್ನು ಕಾಮನ್ ಡಿಪಿಯಲ್ಲಿ ಚಿತ್ರಿಸಲಾಗಿದೆ. ವಿಭಿನ್ನವಾಗಿ ಸಿದ್ಧಪಡಿಸಲಾದ ಈ ಲುಕ್ ನಲ್ಲಿ ದರ್ಶನ್ ಅವರು ಇದುವರೆಗೆ ನಟಿಸಿರುವ ಎಲ್ಲ ಸಿನಿಮಾಗಳ ಹೆಸರುಗಳು ಹಾಗೂ ಅವು ಬಿಡುಗಡೆಯಾದ ವರ್ಷಗಳನ್ನು ಉಲ್ಲೇಖಿಸಲಾಗಿದೆ. ಲಕ್ಷಾಂತರ ಅಭಿಮಾನಿಗಳ ಪಾಲಿಗೆ ‘ಡಿ ಬಾಸ್’ ಅವರು ಛೇರ್ ಮೇಲೆ ಕುಳಿತಿರುವ ಫೋಟೊ ಡಿಪಿಯಲ್ಲಿ ಮತ್ತೊಂದು ಹೈಲೆಟ್ ಆಗಿದೆ.
ಅಂದಿನ ಮಹಾಭಾರತ ದಿಂದ ಇಂದಿನ ರಾಬರ್ಟ್ ವರೆಗೆ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರು ೨೪ ವರ್ಷಗಳ ಸಿನಿಮಾ ಪಯಣ ನಡೆಸಿದ್ದಾರೆ.
ಲೈಟ್ ಬಾಯ್ ಆಗಿ ಬಂದು ಚಾಲೆಂಜಿಂಗ್ ಸ್ಟಾರ್ ಆಗಿ ನಿಂತಿರುವ ನಿಮಗೆ ನಿಮ್ಮ ಪ್ರೀತಿಯ ಸೆಲೆಬ್ರಿಟಿಗಳಿಂದ ಶುಭಾಶಯಗಳು
ನಿಮ್ಮ ಅಭಿಮಾನಿಯಾಗಿರೋದಕ್ಕೆ ನಮಗೆ ಹೆಮ್ಮೆ ಇದೆ #24YearsOfBOSSismCDP pic.twitter.com/QK4qZ664oX— Thoogudeepa ‘D’ Team – R (@DTEAM7999) August 10, 2021
ಚಂದನವನದ ಯಜಮಾನ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳನ್ನು ಸದ್ದಿಲ್ಲದೆ ಪೂರೈಯಿಸಿದ್ದಾರೆ. ಸಾಕಷ್ಟು ಏಳು-ಬೀಳುಗಳ ನಡುವೆ ಸ್ಯಾಂಡಲ್ವುಡ್ ನಲ್ಲಿ ಭದ್ರ ನೆಲೆ ಕಂಡುಕೊಂಡಿರುವ ದಾಸ, ಇಂದು ಟಾಪ್ ನಟರುಗಳಲ್ಲಿ ಒಬ್ಬರಾಗಿದ್ದಾರೆ.
ಮೆಜೆಸ್ಟಿಕ್, ಕರಿಯಾ, ನನ್ನ ಪ್ರೀತಿಯ ರಾಮು, ಸಂಗೋಳ್ಳಿ ರಾಯಣ್ಣ, ಕುರುಕ್ಷೇತ್ರ ಹಾಗೂ ಇತ್ತೀಚಿಗಷ್ಟೆ ತೆರೆ ಕಂಡ ರಾಬರ್ಟ್ ಸೇರಿದಂತೆ ಸುಮಾರು 52 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದರ್ಶನ್, ಕೋಟ್ಯಂತರ ಅಭಿಮಾನಿಗಳ ಪಾಲಿಗೆ ನೆಚ್ಚಿ ದಾಸ, ಡಿ ಬಾಸ್ ಆಗಿದ್ದಾರೆ.
ದರ್ಶನ್ ಕೇವಲ ಬೆಳ್ಳಿ ಪರದೆ ಮೇಲೆ ಮಾತ್ರ ನಾಯಕರಾಗದೆ ನೀಜ ಜೀವನದಲ್ಲೂ ಅವರು ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಕಷ್ಟ ಎಂದು ಬಂದವರಿಗೆ ಕೈಲಾದಷ್ಟು ಸಹಾಯ ಮಾಡುವ ಡಿ ಬಾಸ್ ಅವರು ದಾನಸೂರ ಕರ್ಣನಂತಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.