ಅಪಾಯವನ್ನು ಆಹ್ವಾನಿಸುತ್ತಿದೆ ಅಜ್ಜರಕಾಡು ಮಕ್ಕಳ ಪಾರ್ಕ್‌


Team Udayavani, Aug 11, 2021, 7:05 AM IST

Untitled-1

ಉಡುಪಿ:  ನಗರದ ಹೃದಯ ಭಾಗದ ಅಜ್ಜರಕಾಡು ಮಕ್ಕಳ (ದೊಡ್ಡ ಪಾರ್ಕ್‌) ಪಾರ್ಕ್‌ನಲ್ಲಿ ತುಕ್ಕು ಹಿಡಿದ ಆಟಿಕೆಗಳು ಮಕ್ಕಳ ಜೀವಕ್ಕೆ ಅಪಾಯವನ್ನು ಆಹ್ವಾನಿಸುತ್ತಿವೆ.

ಅಜ್ಜರಕಾಡು ಪಾರ್ಕ್‌ನಲ್ಲಿ ಬಹಳ ವರ್ಷಗಳ ಹಿಂದೆ ಎರಡು ಮಕ್ಕಳ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಚಿಕ್ಕ ಪಾರ್ಕ್‌ ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿ ಹೊಸ ಮಕ್ಕಳ ಆಟದ ಪರಿಕರಗಳನ್ನು ಆಳವಡಿಸಲಾಗಿದೆ. ಪ್ರಸ್ತುತ ಮಕ್ಕಳಿಗೆ ತರಗತಿಗಳಿಲ್ಲದಿರುವುದರಿಂದ ಪಾರ್ಕ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಪಾರ್ಕ್‌ನಲ್ಲಿ ಆಟವಾಡಲು ಅವಕಾಶ ಸಿಗದವರು, ಸಮೀಪದ ಇನ್ನೊಂದು ಪಾರ್ಕ್‌ಗೆ(ದೊಡ್ಡ ಪಾರ್ಕ್‌) ಹೋಗುತ್ತಿದ್ದಾರೆ. ಆದರೆ ಇಲ್ಲಿನ ಆಟಿಕೆಗಳಲ್ಲಿ ಮಕ್ಕಳನ್ನು ಕೂರಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ ಇಲ್ಲಿರುವ ಕೆಲವು ಆಟಿಕೆಗಳು ತುಂಡಾಗಿದ್ದು, ತುಕ್ಕು ಹಿಡಿದು ಮುರಿದು ಬೀಳುವ ಆತಂಕವಿದೆ.

ಚೂಪಾಗಿರುವ ಜಾರುಬಂಡಿ:

ಜಾರುಬಂಡಿ ಮಕ್ಕಳ ಪ್ರಿಯವಾದ ಆಟದಲ್ಲಿ ಒಂದು. ಆದರೆ ಇಲ್ಲಿನ ಜಾರುಬಂಡಿಯಲ್ಲಿ ಕುಳಿತರೆ ಚರ್ಮವೇ ಜಾರಿ ಹೋಗುವ ಸಾಧ್ಯತೆಯಿದೆ. ಜಾರು ಬಂಡಿಯ ಕೆಳಭಾಗವನ್ನು ಸಮ ತಟ್ಟಾಗಿ ನಿರ್ಮಿಸಲಾಗುತ್ತದೆ. ಮಕ್ಕಳು ಮೇಲಿನಿಂದ ಜಾರುತ್ತಾ ಬಂದು ಸಮತಟ್ಟಿನ ಜಾಗದಲ್ಲಿ ಕುಳಿತು ಕೊಳ್ಳುವಂತಾಗಲು ಈ ಕ್ರಮ. ಆದರೆ ಇಲ್ಲಿ ಜಾರು ಬಂಡಿಯ ಕೆಳಗಿನ ಭಾಗ (ಮಕ್ಕಳ ಜಾರಿ ಬಂದು ಕುಳಿತುಕೊಳ್ಳುವ ಸ್ಥಳ) ತುಕ್ಕು ಹಿಡಿದಿದ್ದು, ಮಕ್ಕಳ ಮೃದು ಚರ್ಮವೇ ಕುಯ್ದು ಹೋಗುವಂತಿದೆ.

ತುಂಡಾದ ಕಬ್ಬಿಣದ ರಾಡ್‌ :

ಪಾರ್ಕ್‌ನಲ್ಲಿ ಸುಮಾರು ಮೂರು ಉಯ್ನಾಲೆ ಇದೆ. ಅದರಲ್ಲಿ ಒಂದು ಮಾತ್ರ ಬಳಕೆ ಮಾಡುವ ಸ್ಥಿತಿಯಲ್ಲಿದೆ. ಉಳಿದ ಎರಡರಲ್ಲಿ ಒಂದು ಉಯ್ನಾಲೆಯ ಕಬ್ಬಿಣದ ರಾಡ್‌ ತುಂಡಾಗಿದೆ. ಇನ್ನೊಂದರಲ್ಲಿ ಉಯ್ನಾಲೆ ಕಣ್ಮರೆಯಾಗಿ ರಾಡ್‌ ಮಾತ್ರ ಇದೆ. ಪ್ರಸ್ತುತ ಮಕ್ಕಳು ತುಂಡಾದ ರಾಡ್‌ನ‌ಲ್ಲಿರುವ ಉಯ್ನಾಲೆಯಲ್ಲಿ ಆಟವಾಡುತ್ತಿದ್ದು ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ.

ಚಿಕ್ಕ ಪಾರ್ಕ್‌ನಲ್ಲಿ ಸಂಜೆಯ ಮಕ್ಕಳು ವೇಳೆ ತುಂಬಿ ತುಳುಕುತ್ತಾರೆ. ಅದಕ್ಕಾಗಿ ಮಕ್ಕಳು ದೊಡ್ಡ ಪಾರ್ಕ್‌ಗೆ ಹೋಗಬೇಕಾಗಿದೆ. ಆದರೆ ಇಲ್ಲಿನ ಆಟಿಕೆ ಸಾಮಗ್ರಿಗಳು ಶಿಥಿಲಾವಸ್ಥೆಯಲ್ಲಿದೆ. ಶೀಘ್ರದಲ್ಲಿ ದುರಸ್ತಿ ಮಾಡಿ ಮಕ್ಕಳು ಆಟವಾಡಲು ಅನುಕೂಲ ಮಾಡಬೇಕು.– ವಿದ್ಯಾ, ಸ್ಥಳೀಯರು

ಪಾರ್ಕ್‌ನಲ್ಲಿ ಸಮಸ್ಯೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್‌ ಕಂಬದಲ್ಲಿ ನೇತಾಡುತ್ತಿದ್ದ ವೈರ್‌ಗಳನ್ನು ದುರಸ್ತಿ ಮಾಡಲಾಗಿದೆ. -ರಶ್ಮಿ ಚಿತ್ತರಂಜನ್‌ ಭಟ್‌,-ಅಜ್ಜರಕಾಡು ವಾರ್ಡ್‌ ಸದಸ್ಯೆ ಉಡುಪಿ ನಗರಸಭೆ.

ಟಾಪ್ ನ್ಯೂಸ್

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.