ಸ್ವಾತಂತ್ರ್ಯ @ 75 ಅಮೃತ ಉತ್ಸವ: ದಶಕದ ಹೆಜ್ಜೆಗಳು
Team Udayavani, Aug 11, 2021, 6:20 AM IST
ಮೊದಲೆರಡು ದಶಕಗಳ ಅನಂತರ ಭಾರತ, ಈ ದಶಕ ದಲ್ಲಿ ಕೆಲವೊಂದು ಮಹತ್ತರ ಬದಲಾವಣೆಗಳಿಗೆ ಸಾಕ್ಷಿಯಾಯಿತು. ಅದು ಹಸುರು ಕ್ರಾಂತಿಯಿಂದ ಹಿಡಿದು, ತುರ್ತು ಪರಿಸ್ಥಿತಿಯಂಥ ಕೆಟ್ಟ ಗಳಿಗೆಗಳನ್ನೂ ಭಾರತ ಕಾಣುವಂತಾಯಿತು. ಇದರಿಂದಾಗಿಯೇ ಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರವೊಂದು ಬಂದಿತು.
- 1971ರಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಯುದ್ಧ – ಭಾರತಕ್ಕೆ ದೊಡ್ಡ ಗೆಲುವು – ಬಾಂಗ್ಲಾದೇಶ ವಿಮೋಚನೆ.
- ಗರೀಬಿ ಹಠಾವೋ ಘೋಷಣೆ, ಕೃಷಿಗೆ ಒತ್ತು ನೀಡುವ ಸಲುವಾಗಿ ಹಸುರು ಕ್ರಾಂತಿ ಯೋಜನೆ ಘೋಷಣೆ.
- 1974ರಲ್ಲಿ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ.
- 1975ರಲ್ಲಿ ಭಾರತದ 22ನೇ ರಾಜ್ಯವಾಗಿ ಸಿಕ್ಕಿಂ ಭಾರತಕ್ಕೆ ಸೇರ್ಪಡೆ.
- 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿಕೆ – ಜನರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸರಕಾರವನ್ನು ವಿರೋಧಿಸಿದವರು ಜೈಲು ಪಾಲು.
- ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. ಬಳಿಕ ತುರ್ತು ಪರಿಸ್ಥಿತಿ ವಾಪಸ್.
- 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭಾರೀ ಸೋಲು. ಮೊರಾರ್ಜಿ ದೇಸಾಯಿ ಅವರು ಮೊದಲ ಕಾಂಗ್ರೆಸೇತರ ಪ್ರಧಾನಿಯಾಗಿ ಆಯ್ಕೆ. ಶಾ ಸಮಿತಿ ವರದಿ ಆಧಾರದ ಮೇಲೆ ಇಂದಿರಾ ಗಾಂಧಿ ಮತ್ತು ಪುತ್ರ ಸಂಜಯ್ ಗಾಂಧಿ ಬಂಧನ.
- ಮೊರಾರ್ಜಿ ದೇಸಾಯಿ ಸರಕಾರ ಪತನ. ಚರಣ್ ಸಿಂಗ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.