ಐಷಾರಾಮಿ ಜೀವನಕ್ಕಾಗಿ ಉದ್ಯಮಿ ಅಪಹರಣ
ನಕಲಿ ಪೊಲೀಸರ ಬಂಧನ ; 10 ಲಕ್ಷ ರೂ.ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳು
Team Udayavani, Aug 11, 2021, 2:59 PM IST
ಬೆಂಗಳೂರು: ದೆಹಲಿಯಿಂದ ಬಂದಿದ್ದ ಚಿನ್ನದ ವ್ಯಾಪಾರಿ ಮತ್ತು ಲೆಕ್ಕಪರಿಶೋಧಕ(ಚಾರ್ಟೆಡೆಡ್ ಅಕೌಂಡೆಂಟ್)ನನ್ನು ಐಷಾರಾಮಿ
ಜೀವನ ನಡೆಸಲು ಅಪಹರಣ ಮಾಡಿದ್ದ ಮೂವರು ನಕಲಿ ಪೊಲೀಸರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಕಿಂಗ್‌ಪಿನ್ ಅಸ್ಗ ರ್(32), ಆತನ ಸಹಚರರಾದ ನಾಸೀರ್ ಶರೀಫ್(35) ಮತ್ತು ಸಂತೋಷ್(28) ಬಂಧಿತರು. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ದೆಹಲಿಯಲ್ಲಿ ಬುಲೀಯನ್ (ಚಿನ್ನ ಮತ್ತು ಬೆಳ್ಳಿ ವ್ಯಾಪಾರಿ) ವ್ಯಾಪಾರಿಯಾಗಿರುವ ಅರವಿಂದ್ ಕುಮಾರ್ ಮೆಹ್ತಾ ಮತ್ತು ಆತನ ಸ್ನೇಹಿತ ಲೆಕ್ಕಪರಿಶೋಧಕ(ಚಾರ್ಟೆಡೆಡ್ ಅಕೌಂಡೆಂಟ್)ನನ್ನು ದಿವಾಕರ್ ರೆಡ್ಡಿಯನ್ನು ಆ.6 ರಂದು ರಾತ್ರಿ 10.30ರ ಸುಮಾರಿಗೆ ಡೆಕೆ
ನ್ಸನ್ ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‌ನಿಂದ ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.
ಪೊಲೀಸರ ಸೋಗಿನಲ್ಲಿ ಅಪಹರಣ: ಅಪಹರಣಕ್ಕೊಳಗಾದವ ಪೈಕಿ ಅರವಿಂದ್ ಕುಮಾರ್ ಮೆಹ್ತಾ ವಿರುದ್ಧ ದೆಹಲಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಈತನಿಂದ ವಂಚನೆಗೊಳದ ವ್ಯಕ್ತಿಯೊಬ್ಬ ಅಸ್ಗರ್‌ಗೆ ಕರೆ ಮಾಡಿ ಅರವಿಂದ್ ಕುಮಾರ್ ಮೆಹ್ತಾ ಬಗ್ಗೆ ಫೋಟೋ ಸಮೇತ ಮಾಹಿತಿ ನೀಡಿದ್ದ. ಅಲ್ಲದೆ, ಆತ ಉಳಿದುಕೊಂಡಿರುವ ಹೋಟೆಲ್ ಬಗ್ಗೆಯೂ ಮಾಹಿತಿ ನೀಡಿದ್ದ.
ಇದನ್ನೂ ಓದಿ:3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು !
ಈ ಹಿನ್ನೆಲೆಯಲ್ಲಿ ಆರೋಪಿ ತನ್ನ ಸಹಚರರ ಜತೆ ಸೇರಿಕೊಂಡು ಆ.6ರಂದು ರಾತ್ರಿ ಊಟ ಮುಗಿಸಿಹೊರಗಡೆಬಂದಿದ್ದ ಇಬ್ಬರನ್ನು ಪೊಲೀ ಸರ ಸೋಗಿನಲ್ಲಿ ಪರಿಚಯಿಸಿಕೊಂಡ ಆರೋಪಿಗಳು, ಮೆಹ್ತಾನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, ದೆಹಲಿಯಲ್ಲಿ ತನ್ನ ವಿರುದ್ಧ ಇರುವ ವಂಚನೆ ಪ್ರಕರಣದ ಬಗ್ಗೆ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪತ್ರಿಕೆಗಳಲ್ಲಿಯೂ ವರದಿಯಾಗಿದೆ. ಜತೆಗೆ ಇಲ್ಲಿಗೆ ಯಾರೊಂದಿಗೆ ವ್ಯವಹಾರ ನಡೆಸಲು ಬಂದಿರುವ ಬಗ್ಗೆಯೂ ತಿಳಿದಿದೆ. ಕೂಡಲೇ ನಮ್ಮೊಂದಿಗೆ ಬಂದು ತನಿಖೆಗೆ ಸಹಕರ ನೀಡಬೇಕು ಎಂದು ಕಾರಿನೊಳಗೆ ಕೂರಿಸಿಕೊಂಡಿದ್ದಾರೆ. ಮಾರ್ಗ ಮಧ್ಯೆ ಹತ್ತು ಲಕ್ಷ ರೂ.ಕೊಟ್ಟರೆ ಬಿಟ್ಟು ಬಿಡುವುದಾಗಿಯೂ ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ಆರೋಪಿಗಳು, ಇಬ್ಬರನ್ನು ಕೋರಮಂಗಲದಲ್ಲಿರುವ ಹೋಟೆಲ್‌ವೊಂದರಲ್ಲಿ ಅಕ್ರಮ ಗೃಹಬಂಧನದಲ್ಲಿಟ್ಟಿದ್ದರು ಎಂದು ಪೊಲೀಸರು ಹೇಳಿದರು.
ಅಪಹರಣಕ್ಕೊಳಗಾದವರ ಸ್ನೇಹಿತ ಪರಮೇಶ್ವರನ್ ಎಂಬವರು ರಾಯಲ್ ಆರ್ಕಿಡ್ ಹೋಟೆಲ್‌ಗೆ ಬಂದಾಗ ಇಬ್ಬರು ಕಾಣೆಯಾಗಿದ್ದರು. ಈ ಬಗ್ಗೆ ಹೋಟೆಲ್ ಸಿಬ್ಬಂದಿ ಬಳಿ ವಿಚಾರಿಸಿ ಬಳಿಕ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಗಮನಿಸಿದ ಹಲಸೂರು ಠಾಣೆಗೆ ದೂರು ನೀಡಿದ್ದರು. ಬಳಿಕ ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿಗಳು ಕೋರಮಂಗಲದ ಹೋಟೆಲ್‌ನಲ್ಲಿರುವ ಮಾಹಿತಿ ಸಿಕ್ಕಿತ್ತು.
ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಹಲಸೂರು ಠಾಣೆ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ರವಿಂದ್ ಕುಮಾರ್ ಮೆಹ್ತಾ ಮತ್ತು ಆತನ ಸ್ನೇಹಿತ ದಿವಾಕರ್ ರೆಡ್ಡಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಪರಾರಿಯಾಗಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇತರೆ ಇಬ್ಬರು ನಾಪತ್ತೆಯಾಗಿದ್ದಾರೆ. ಆರೋಪಿಗಳು ಬರಬೇಕಿದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸಲು ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.