ಅಭಿಮಾನಿಗಳಿಂದ ನಾನು;ಅಭಿಮಾನಿಗಳಿಗಾಗಿ ನಾನು : ಸೆಲೆಬ್ರಿಟಿಗಳಿಗೆ ‘ಡಿ ಬಾಸ್’ ಧನ್ಯವಾದ
Team Udayavani, Aug 12, 2021, 5:06 PM IST
ಬೆಂಗಳೂರು: ಚಿತ್ರರಂಗದಲ್ಲಿ 24 ವರ್ಷಗಳನ್ನು ಪೂರೈಸಿದ್ದಕ್ಕೆ ತಮಗೆ ಶುಭಕೋರಿದ ಎಲ್ಲ ಅಭಿಮಾನಿಗಳಿಗೆ, ಸ್ನೇಹಿತರಿಗೆ ಹಾಗೂ ಆಪ್ತರಿಗೆ ನಟ ದರ್ಶನ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಇಂದು (ಆ.12) ಸಂಜೆ ಟ್ವೀಟ್ ಮಾಡಿರುವ ಡಿ ಬಾಸ್, ‘’ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಅಭಿಮಾನಿಗಳಿಂದ ನಾನು. ಅಭಿಮಾನಿಗಳಿಗಾಗಿ ನಾನು. ನಿಮ್ಮ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದಿದ್ದಾರೆ.
ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ಹೃದಯಪೂರ್ವಕ ಧನ್ಯವಾದಗಳು
ಅಭಿಮಾನಿಗಳಿಂದ ನಾನು.
ಅಭಿಮಾನಿಗಳಿಗಾಗಿ ನಾನು.
ನಿಮ್ಮ ಪ್ರೀತಿಯೇ ನನಗೆ ಶ್ರೀರಕ್ಷೆ ❤️
– ನಿಮ್ಮ ದಾಸ ದರ್ಶನ್— Darshan Thoogudeepa (@dasadarshan) August 12, 2021
ಡಿ ಬಾಸ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಆಗಸ್ಟ್ 11ಕ್ಕೆ 24 ವಸಂತಗಳು ತುಂಬಿದವು. ಈ ದಿನವನ್ನು ದಚ್ಚು ಅಭಿಮಾನಿಗಳು ವಿಶೇಷವಾಗಿ ಆಚರಿಸಿದರು. ಒಂದು ದಿನ ಮುಂಚಿತವಾಗಿ ಕಾಮನ್ ಡಿಪಿ ರಿಲೀಸ್ ಮಾಡಲಾಯಿತು. ಇದರಲ್ಲಿ ಇದುವರೆಗೆ ದರ್ಶನ್ ಅವರು ನಟಿಸಿರುವ ಸಿನಿಮಾ ಹಾಗೂ ಅವುಗಳು ರಿಲೀಸ್ ಆದ ದಿನಾಂಕವನ್ನು ಉಲ್ಲೇಖಿಸಲಾಗಿತ್ತು. ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ಸಿಡಿಪಿ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಯಿತು.
ನಿನ್ನೆ ದರ್ಶನ್ ಅವರು ತಮ್ಮ ಆಪ್ತರ ಸಮ್ಮುಖದಲ್ಲಿ ಸಿಂಪಲ್ ಆಗಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದರು. ಇಂದು ತಮಗೆ ಶುಭ ಕೋರಿದ ಎಲ್ಲರಿಗೂ ದರ್ಶನ್ ಅವರು ಧನ್ಯವಾದ ತಿಳಿಸಿದ್ದಾರೆ.
ಇನ್ನು ದರ್ಶನ್ ಅವರು ಸದ್ಯ ಮದಕರಿ ನಾಯಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೋವಿಡ್ ಕಾರಣ ಈ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಇದರ ನಡುವೆ ಅವರ 55 ನೇ ಸಿನಿಮಾ ಶೀಘ್ರದಲ್ಲೇ ಘೋಷಣೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.