ಕಾಂಗ್ರೆಸ್ ಪ್ರಮುಖ ಟ್ವಿಟರ್ ಖಾತೆಯೇ ಬಂದ್
ಐಎನ್ಸಿ ಇಂಡಿಯಾ ಖಾತೆಯೂ ಸ್ಥಗಿತ; 21 ನಾಯಕರು, 7 ಪಕ್ಷದ ಖಾತೆಗಳು ಸ್ತಬ್ಧ
Team Udayavani, Aug 12, 2021, 10:45 PM IST
ನವದೆಹಲಿ: ಟ್ವಿಟರ್ ಮತ್ತು ಕಾಂಗ್ರೆಸ್ ನಡುವಿನ “ಖಾತೆ’ ಕ್ಯಾತೆ ಜೋರಾಗಿದೆ. ದೆಹಲಿಯ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಸಂತ್ರ ಸ್ತೆಯ ಹೆತ್ತವರ ಫೋಟೋ ಹಾಕಿದ್ದ ಆರೋಪದ ಮೇಲೆ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಸ್ತಬ್ಧ ಮಾಡಿದ್ದ ಟ್ವಿಟರ್ ಇಂಡಿಯಾ, ಈಗ 21 ನಾಯಕರು ಮತ್ತು ಪಕ್ಷದ ಪ್ರಮುಖ ಖಾತೆ ಹಾಗೂ ಕೆಲವು ರಾಜ್ಯಗಳ ಅಕೌಂಟ್ಗಳನ್ನೂ ಬ್ಲ್ಯಾಕ್ ಮಾಡಿದೆ.
ನಿಯಮಾವಳಿಗಳ ಉಲ್ಲಂಘನೆ ಆರೋಪದ ಮೇಲೆ ಈ ಎಲ್ಲಾ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಟ್ವಿಟರ್ ಈ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದೆ.
ಮೋದಿ ಸರ್ಕಾರದ ಮಾತಿನಂತೆ ವರ್ತಿಸುತ್ತಿರುವ ಟ್ವಿಟರ್ ಸಂಸ್ಥೆ, ನಮ್ಮ ಧ್ವನಿಯನ್ನು ಅಡಗಿಸುತ್ತಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕ, ತ.ನಾಡು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ: ಸಿ.ಟಿ.ರವಿ
ಯಾವ ಖಾತೆಗಳು ಬಂದ್?
ಐಎನ್ಸಿ ಇಂಡಿಯಾ(ಕಾಂಗ್ರೆಸ್ನ ಪ್ರಮುಖ ಅಕೌಂಟ್), ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದಾಮನ್ ಆ್ಯಂಡ್ ದಿಯು, ತಮಿಳುನಾಡು ಕಾಂಗ್ರೆಸ್ ಸಮಿತಿಗಳ ಖಾತೆ ಬಂದ್ ಆಗಿವೆ. ಇನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸುರ್ಜೆವಾಲಾ, ಅಜಯ್ ಮಾಕೇನ್, ಕೆ.ಸಿ. ವೇಣುಗೋಪಾಲ್, ಮಣಿಕ್ಕನ್ ಟ್ಯಾಗೋರ್, ಸುಶ್ಮಿತಾ ದೇವ್, ಹರೀಶ್ ಸಿಂಗ್ ರಾವತ್, ಚೆಲ್ಲ ಕುಮಾರ್ ಸೇರಿದಂತೆ 21 ನಾಯಕರ ಖಾತೆಗಳೂ ಬ್ಲ್ಯಾಕ್ ಆಗಿವೆ. ಹಾಗೆಯೇ ಮಹಾರಾಷ್ಟ್ರ ಕಾಂಗ್ರೆಸ್ನ 500 ನಾಯಕರ ಖಾತೆಗಳನ್ನು ಬಂದ್ ಮಾಡಲಾಗಿದೆ.
ಎಲ್ಲರ ಪ್ರೊಫೈಲ್ನಲ್ಲೂ ರಾಹುಲ್!
ರಾಹುಲ್ ಖಾತೆ ಬ್ಲಾಕ್ ಮಾಡಿರುವುದನ್ನು ಖಂಡಿಸಿ, ಪ್ರತಿಭಟನಾರ್ಥವಾಗಿ ದೇಶಾದ್ಯಂತ ಕಾಂಗ್ರೆಸ್ನ ಬಹುತೇಕ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ತಮ್ಮ ಖಾತೆಗಳ ಪ್ರೊಫೈಲ್ನಲ್ಲಿ ರಾಹುಲ್ ಫೋಟೋಗಳನ್ನು ಹಾಕಿ ಕೊಂಡಿದ್ದಾರೆ. ಗುರುವಾರ ಪ್ರಿಯಾಂಕಾ ವಾದ್ರಾ ಅವರ ಖಾತೆಯಲ್ಲೂ ರಾಹುಲ್ ಅವರ ಪ್ರೊಫೈಲ್ ಫೋಟೋ ಪ್ರತ್ಯಕ್ಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೆ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.