ಚಮೋಲಿ ಜಿಲ್ಲೆಯ ಮೋಟಾರ್ ವೇ ಬಳಿ ಭಾರಿ ಗುಡ್ಡ ಕುಸಿತ : ಸಂಚಾರ ಅಸ್ತವ್ಯಸ್ಥ
Team Udayavani, Aug 13, 2021, 11:53 AM IST
ಸಾಂದರ್ಭಿಕ ಚಿತ್ರ
ಚಮೋಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯ ಹೃಷಿಕೇಶ್ -ಬದರಿನಾಥ್ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಮೋಟಾರ್ ವೇ ಬಳಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದೆ.
ಕಳೆದ ಕೆಲವು ದಿನಗಳಿಂದ ಸುರುಯುತ್ತಿರುವ ಭಾರ ಮಳೆಯ ಕಾರಣದಿಂದಾಗಿ ಗುಟ್ ಕುಸಿತ ಉಂಟಾಗಿದ್ದು, ಭಾರಿ ಗಾತ್ರದ ಬಂಡೆ ಕಲ್ಲುಗಳು ಧರಾಶಾಯಿಯಾಗಿದೆ. ಈವರೆಗೆ ಯಾವುದೇ, ಸಾವು ನೋವು ಸಂಭವಿಸಿಲ್ಲ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ : ಟ್ವೀಟರ್ ಬ್ಲಾಕ್ ಪ್ರಕರಣ : ಇದು ಪ್ರಜಾಪ್ರಭುತ್ವದ ಮೇಲೆ ವ್ಯವಸ್ಥಿತ ದಾಳಿ: ರಾಹುಲ್ ಸಿಡಿಮಿಡಿ
ಇನ್ನು, ಭಾರಿ ಪ್ರಮಾಣದ ಗುಡ್ಡ ಕುಸಿತ ಉಂಟಾಗಿರುವ ಕಾರಣದಿಂದಾಗಿ, ಹೆದ್ದಾರಿ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಹೆದ್ದಾರಿಯನ್ನು ಬಂದ್ ಮಾಡಲಾಗಿದೆ ಎಂದು ಅಲ್ಲಿನ ಸ್ಥಳೀಯಾಡಳಿತ ಮಾಹಿತಿ ನೀಡಿದೆ.
ಹೃಷಿಕೇಶ್, ಡೆಹ್ರಾಡೂನ್ ಹಾಗೂ ಇತರ ಉತ್ತರಾಖಂಡ್ ನ ಇತರೆ ಪ್ರದೇಶಗಳಿಗೆ ಹೋಗುತ್ತಿದ್ದ ಪ್ರಯಾಣಿಕರು ಹೃಷಿಕೇಶ್ -ಬದರಿನಾಥ್ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಮೋಟಾರ್ ವೇ ಬಳಿ ಸಿಲುಕಿಕೊಂಡಿರುವುದಾಗಿ ವರದಿ ತಿಳಿಸಿದೆ.
ಹೆದ್ದಾರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಕಳೆದ ವಾರ, ಉತ್ತರಾಖಂಡದ ಜೋಶಿಮಠ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿ ಎನ್ ಟಿ ಪಿ ಸಿ ಯ ಸುರಂಗದ ಮೇಲೆ ನಿರ್ಮಿಸಲಾದ ಹೋಟೆಲ್ ಕುಸಿದಿತ್ತು.
ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 40,120 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕೇಜ್ರಿವಾಲ್ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.