3 ತಿಂಗಳಿಂದ ಮಕ್ಕಳಲ್ಲಿ ಸೋಂಕು ಕೋವಿಡ್‌ ನಿಯಂತ್ರಣ

ಶೇ.13ರಲ್ಲೆ ಇರುವ ಸೋಂಕು ಪ್ರಮಾಣ ; ಆತಂಕದ ವಾತಾವರಣ ಇಲ್ಲ: ತಜ್ಞರ ಮñ

Team Udayavani, Aug 13, 2021, 2:57 PM IST

3 ತಿಂಗಳಿಂದ ಮಕ್ಕಳಲ್ಲಿ ಸೋಂಕು ಕೋವಿಡ್‌ ನಿಯಂತ್ರಣ

ಬೆಂಗಳೂರು: ರಾಜಧಾನಿಯಲ್ಲಿ ಮಕ್ಕಳ ಕೋವಿಡ್‌ ಪ್ರಮಾಣ ಹೆಚ್ಚು ಕಡಿಮೆ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿಯಲ್ಲಿದೆ. ದಾಖಲಾದ ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಮಕ್ಕಳ ಪಾಲು ಶೇ.12-13 ರಷ್ಟಿದೆ. ನಗರದಲ್ಲಿ ಮಕ್ಕಳಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 3ನೇ ಅಲೆಆರಂಭವಾಗುತ್ತಿದೆ. ಮಕ್ಕಳೇ ಟಾರ್ಗೆಟ್‌ ಎಂಬ ಆತಂಕ ಎದುರಾಗಿತ್ತು. ಸದ್ಯದ ಮಟ್ಟಿಗೆ ಆ ರೀತಿಯ ಸೂಚನೆಗಳು ಕಾಣಿಸುತ್ತಿಲ್ಲ ಎನ್ನುತ್ತಿವೆ ಅಂಕಿ-ಅಂಶಗಳು.

ರಾಜ್ಯ ವಾರ್‌ ರೂಂ ಅಂಶ -ಅಂಶಗಳ ಪ್ರಕಾರ, ಕೋವಿಡ್‌ 1ನೇ ಅಲೆ, 2ನೇ ಅಲೆಯ ಸಂದರ್ಭದಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣಶೇ.11 ರಷ್ಟಿತ್ತು.ಅಂದರೆ, ನಿತ್ಯ ರಾಜ್ಯದಲ್ಲಿ 100 ಪ್ರಕರಣಗಳು ವರದಿಯಾದರೆ ಆ ಪೈಕಿ ಸರಾಸರಿ 11 ಮಂದಿ 19 ವರ್ಷದೊಳಗಿನವರು. ಅಲ್ಲದೆ, ಈವರೆಗೂ ರಾಜ್ಯದಲ್ಲಿ 29.2 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 3.15 ಲಕ್ಷ ಮಕ್ಕಳಿದ್ದಾರೆ.

ಅಂದರೆ, ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಮಕ್ಕಳ ಪ್ರಮಾಣ ಶೇ.11 ರಷ್ಟಿದೆ. ಬೆಂಗಳೂರಿನಲ್ಲೂ ಮಕ್ಕಳ ಕೋವಿಡ್‌ ಪ್ರಕರಣಗಳ ಸಂಖ್ಯೆ ಮೇನಿಂದ ಜುಲೈವರೆಗೂ ನಿತ್ಯ ವರದಿಯಾಗುವ ಒಟ್ಟಾರೆ ಪ್ರಕರಣಗಳಲ್ಲಿ ಸರಾಸರಿ ಶೇ.12 ರಷ್ಟಿದೆ. ಆದರೆ, ಆಗಸ್ಟ್‌ 1 ರಿಂದ 12ರ ನಡುವೆ ಶೇ.13 ದಾಖಲಾಗಿದ್ದು, ಶೇ.1 ಮಾತ್ರ ಹೆಚ್ಚಳವಾಗಿದೆ. ಈ ಹಿಂದೆಯೂ ತಿಂಗಳ ಮೊದಲ ವಾರ ಶೇ.15ಕ್ಕೆ ಹೆಚ್ಚಳವಾಗಿ ಆನಂತರದ ವಾರಗಳಲ್ಲಿ ಮತ್ತೆ ಶೇ.10 ಇಳಿಕೆಯಾಗಿತ್ತು. ಹೀಗಾಗಿ, ಮಾಸಾಂತ್ಯದೊಳಗೆ ಆ ಪ್ರಮಾಣ ಶೇ.11 ಅಥವಾ 12 ಕ್ಕೆ ಇಳಿಕೆಯಾಗಲಿದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ:ಒನ್‍ ಪ್ಲಸ್ ನಾರ್ಡ್ ಸಿಇ 5ಜಿ: ಯೂತ್‍ಫುಲ್‍ ಫೋನ್‍!

ಆಗಸ್ಟ್‌ನಲ್ಲಿ ಇಳಿಕೆ: ಜುಲೈ ಕೊನೆಯ ವಾರ (ಜುಲೈ25-31) 390 ಮಕ್ಕಳಿಗೆ ಸೋಂಕು ತಗುಲಿತ್ತು. ಆಗಸ್ಟ್‌ ಮೊದಲ ವಾರ(ಆ.1 ರಿಂದ 7) 361 ಮಕ್ಕಳು ಸೋಂಕಿತರಾಗಿದ್ದಾರೆ. ಎರಡೂ ಅವಧಿಯಲ್ಲಿಯೂ ಒಟ್ಟಾರೆ ಪ್ರಕರಣಗಳಲ್ಲಿ ಮಕ್ಕಳಲ್ಲಿ ಸೋಂಕು ಶೇ.13 ರಷ್ಟೇ ಇದೆ. ಪ್ರಸಕ್ತ ವಾರ ಇಳಿಕೆ ಇನ್ನಷ್ಟು ಇಳಿಕೆಯಾಗಿದ್ದು, ನಾಲ್ಕು ದಿನಗಳಲ್ಲಿ (ಆ.9 ರಿಂದ ಆ.12)166ಮಕ್ಕಳಿಗೆ ಸೋಂಕು ತಗುಲಿದ್ದು, ಒಟ್ಟಾರೆ ಪ್ರಕರಣಗಳಲ್ಲಿ ಶೇ.12.5 ರಷ್ಟಿವೆ. ಜುಲೈ- ಆಗಸ್ಟ್‌ನಲ್ಲಿ ಮಕ್ಕಳ ಸಾವಿಲ್ಲ: ಒಂದೂವರೆ ತಿಂಗಳಲ್ಲಿ ಕೋವಿಡ್‌ ಸೋಂಕಿಗೆ ನಗರದಲ್ಲಿ 19 ವರ್ಷದೊಳಗಿನವರು ಮೃತಪಟ್ಟಿಲ್ಲ ಎಂದು ಬಿಬಿಎಂಪಿ ವಾರ್‌ ರೂಂ ದಾಖಲೆಗಳು ಹೇಳುತ್ತಿವೆ. ಜೂನ್‌ನಲ್ಲಿ 5, ಏಪ್ರಿಲ್‌, ಮೇನಲ್ಲಿ ತಲಾ ಮೂವರು ಮಕ್ಕಳು ಸಾವಿಗೀಡಾಗಿದ್ದರು.ಈ ಪ್ರಮಾಣತಗ್ಗಿದೆ ಎಂದು ತಜ್ಞರು ಹೇಳಿದ್ದಾರೆ.

ಮಾರ್ಗಸೂಚಿ ಪಾಲಿಸಿ
ಮಕ್ಕಳಿಗೆ ಲಸಿಕೆ ಹಾಕುವವರೆಗೂ ಪೋಷಕರು ಕಡ್ಡಾಯವಾಗಿ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸಲಹೆ ನೀಡಿದರು. ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಮಕ್ಕಳಿಗೆ ಇದುವರೆಗೂ ಲಸಿಕೆ ನೀಡಿಲ್ಲ. ಆದರೆ, ನೀಡುವ ಕುರಿತು ರಾಜ್ಯ ಸರ್ಕಾರ, ಆರೋಗ್ಯ ತಜ್ಞರು ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ, ಲಸಿಕೆ ತಲುಪುವರೆಗೂ ಪೋಷಕರು ತಪ್ಪದೆ,ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಬೇಕು. ಇಲ್ಲದಿದ್ದರೆ, ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ಕೋವಿಡ್‌ ಸೋಂಕಿನ ಪ್ರಮಾಣಕಳೆದ ವರ್ಷವೂಕಂಡುಬಂದಿದೆ. ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿಕಂಡು ಬರುವ ಸಾಧ್ಯತೆಯಿದೆ. ಎಲ್ಲ ವಯಸ್ಸಿನವರಲ್ಲಿ ಕೋವಿಡ್‌ ಸೋಂಕು ಕಡಿಮೆ ಆಗಬೇಕು ಎನ್ನುವ ಉದ್ದೇಶದಿಂದ ಬಿಬಿಎಂಪಿ ಸೂಕ್ತಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾಳೆಯಿಂದ ಸರಣಿ ಹಬ್ಬಗಳು, ರಜೆ ದಿನಗಳು ಇರುವ ಹಿನ್ನೆಲೆ ವಲಯವಾರು ಅಧಿಕಾರಿಗಳನ್ನು ನೇಮಿಸಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಕ್ರಮವಹಿಸುವಂತೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು

ಬೆಂಗಳೂರಿನ ಶೇಕಡಾ ಮಕ್ಕಳ ಪ್ರಕರಣಗಳಲ್ಲಿ ಯಾವುದೇ ದೊಡ್ಡ ವ್ಯತ್ಯಾಸಗಳಿಲ್ಲ. ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿಲ್ಲ. ಗಂಭೀರ ಸ್ಥಿತಿಯಲ್ಲಿ ಯಾರೂ ಇಲ್ಲ.ಅಲ್ಲದೆ, ಒಂದೂವರೆ ತಿಂಗಳಿಂದ ಕೋವಿಡ್‌ ಸೋಂಕಿಗೆ ಮಕ್ಕಳ ಸಾವಾಗಿಲ್ಲ.ಅನಗತ್ಯ
ಆತಂಕಒಳಗಾಗುವುದು ಬೇಡ. ಮುಂಜಾಗ್ರತಾಕ್ರಮ ಪಾಲಿಸಿದರೆ ಸಾಕು.
-ಡಿ. ರಂದೀಪ್‌, ವಿಶೇಷಆಯುಕ್ತರು, ಬಿಬಿಎಂಪಿ

ಲಸಿಕೆ ಪಡೆಯದ ವರ್ಗಕ್ಕೆ ಸೋಂಕು ತಗುಲುವ ಸಾಧ್ಯತೆಹೆಚ್ಚಿರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಸದ್ಯ ಮಕ್ಕಳಿಗೆ ಲಸಿಕೆ ಇಲ್ಲದ ಕಾರಣ ಅವರುಗಳು ಕಡ್ಡಾಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಪೋಷಕರು ಈ ಬಗ್ಗೆ ಕ್ರಮ ವಹಿಸಬೇಕೇ ಹೊರತು ಆತಂಕಕ್ಕೊಳಗಾಗಿ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗಬಾರದು.
– ಡಾ.ಎಚ್‌.ಅಂಜನಪ್ಪ, ಖ್ಯಾತ ವೈದ್ಯರು

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

7

Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.