3 ದಿನಕ್ಕೊಮ್ಮೆ ನೆಗೆಟಿವ್ ವರದಿ ತರುವುದು ಹೇಗೆ ಸಾಧ್ಯ?
ಕೋವಿಡ್ ಪರೀಕ್ಷೆಗೆ ಹೋದರೆ ಒಂದು ದಿನ ಸಮಯ ಬೇಕು, ರಜೆ ಹಾಕಿದರೆ ವೃತ್ತಿಗೆ ಸಮಸ್ಯೆ; ಗೂಡ್ಸ್ ವಾಹನ ಚಾಲಕರ ಅಳಲು
Team Udayavani, Aug 13, 2021, 3:52 PM IST
ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ವಾಹನ ಚಾಲಕರು, ಸಿಬ್ಬಂದಿ ನಡುವೆ ವಾಗ್ವಾದ ನಡೆಯುತ್ತಿರುವುದು.
ಗುಂಡ್ಲುಪೇಟೆ: ನೆರೆಯ ರಾಜ್ಯ ತಮಿಳುನಾಡು ಮತ್ತು ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಕಾರಣ ತಾಲೂಕಿನಲ್ಲಿ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಇದರಿಂದಾಗಿ ಗೂಡ್ಸ್ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಭಾರಿ ಲಾರಿ ಚಾಲಕರು ಹಾಗೂ ಗೂಡ್ಸ್ ವಾಹನಗಳ ಚಾಲಕರು ಅಳಲು ತೋಡಿಕೊಂಡಿದ್ದಾರೆ.
ತಮಿಳುನಾಡಿನ ಭಾಗದಿಂದ ರಾಜ್ಯಕ್ಕೆ ಪ್ರವೇಶ ಪಡೆಯಬೇಕಾದರೆ ತಾಲೂಕಿನ ಗಡಿಭಾಗ ಕೆಕ್ಕನಹಳ್ಳ ತಪಾಸಣೆ ಕೇಂದ್ರದಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕೇಳುತ್ತಿದ್ದಾರೆ. ಚಾಲಕರು ಪ್ರತಿ ಮೂರು ದಿನ ಕ್ಕೊಮ್ಮೆ(72 ಗಂಟೆ) ನೆಗೆಟಿವ್ ಸರ್ಟಿಫಿಕೇಟ್ ಮಾಡಿ ಸಲು ಹಣ ಎಲ್ಲಿಂದ ತರುವುದು ಮತ್ತು ಕೆಲಸಕ್ಕೆ ರಜೆ ಹಾಕಬೇಕಾಗುತ್ತದೆ. ಇದರಿಂದಾಗಿ ಕುಟುಂಬ ನಿರ್ವಹಣೆಮಾಡಲುಹೇಗೆಸಾಧ್ಯಎಂದುಪ್ರಶ್ನೆಮಾಡಿದರು.
ಈ ವೃತ್ತಿಯನ್ನು ನಂಬಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಚಾಲಕರು ಏನು ಮಾಡಲು ಸಾಧ್ಯ? ತಿಂಗಳಿಗೊಮ್ಮೆ, ಹದಿನೈದು ದಿನಗಳಿಕ್ಕೊಮ್ಮೆ ಆದರೂ ನೆಗೆಟಿವ್ ಸರ್ಟಿಫಿಕೇಟ್ ಕೇಳಿದರೆ ತರಬಹುದು, ಪ್ರತಿ ಮೂರು ದಿನಗಳಿಗೆ ಕೇಳಿದರೆ ಏನು ಮಾಡುವುದು? ದುಡಿದ ಹಣವನ್ನೆಲ್ಲ ಇದಕ್ಕೆ ಸುರಿಯಬೇಕಿದೆ ಎಂದು ತಮಿಳುನಾಡಿನ ಚಾಲಕ ಮೋಹನ್ ಅಳಲು ತೋಡಿಕೊಂಡರು.
ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಇದೇ ವಿಚಾರವಾಗಿ ಚಾಲಕರು ಹಾಗೂ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರವಿ ಶಂಕರ್, ಚಾಲಕರಿಗೆ15 ದಿನಕ್ಕೊಮ್ಮೆ ಆರ್‌ಟಿಪಿಸಿಆರ್ ವರದಿ ಕಡ್ಡಾಯ ಮಾಡಲಾಗಿದೆ. ಪ್ರವಾಸಿರಿಗೆ ಮಾತ್ರ 72 ಗಂಟೆ ಒಳಗಿನ ನೆಗೆಟಿವ್ ವರದಿ ತರಬೇಕು ಎಂದು ತಿಳಿಸಿದರು.
ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸೋತವರಿಗೂ ‘ಅಲ್ಟ್ರಾಜ್ ಕಾರು ಉಡುಗೊರೆ ಘೋಷಿಸಿದ ಟಾಟಾ
ಗಡಿ ಬಂದ್ ಮಾಡಿ ನಿಗಾವಹಿಸಿ, ವಾರಾಂತ್ಯಕರ್ಫ್ಯೂ ಹಿಂಪಡೆಯಿರಿ
ಗುಂಡ್ಲುಪೇಟೆ: ಕೇರಳ ಹಾಗೂ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ 3ನೇ ಅಲೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಜನತೆಗೆ ಭೀತಿ ಎದುರಾಗಿದೆ.ಈಹಿನ್ನೆಲೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಎರಡು ಗಡಿ ಚೆಕ್‌ಪೋಸ್ಟ್ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂಬ ವಿವಿಧ ಕನ್ನಡ ಪರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಕೋವಿಡ್ ಕಟ್ಟಿ ಹಾಕಲು ಕೇರಳಕ್ಕೆ ಹೊಂದಿಕೊಂಡಿರುವ ಗಡಿಜಿಲ್ಲೆಗಳಲ್ಲಿ ಸರ್ಕಾರ ವಾರಾಂತ್ಯದ ಲಾಕ್‌ಡೌನ್ ಜಾರಿಗೊಳಿಸುವ ನಿಯಮ ಅವೈಜ್ಞಾನಿಕ ವಾಗಿದೆ.ಇದರಿಂದ ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಉದ್ಯಮ ಸೇರಿದಂತೆ ಇನ್ನಿತರ ಸಣ್ಣಪುಟ್ಟ ವ್ಯವಹಾರಗಳಿಗೆ ಹೊಡೆತ ಬೀಳುವ ಹಿನ್ನೆಲೆ ಅಂತರಾಜ್ಯ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ, ಸ್ಥಳೀಯವಾಗಿ ವ್ಯಾಪಾರ ವಹಿವಾಟಿ ನಡೆಸಲು ಅನುವು ಮಾಡಿಕೊಡಬೇಕು. ಕೊರೊನಾಬರುವ ದಾರಿ ತಡೆಯಬೇಕೆ ವಿನಃ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ 2ನೇ ಅಲೆ ಹೊಡೆತಕ್ಕೆ ಸಿಲುಕಿರುವ ಅನೇಕ ಕ್ಷೇತ್ರಗಳು ಇನ್ನೂ ಚೇತರಿಕೆ ಕಾಣದಾಗಿವೆ. ಆಟೋ ಚಾಲಕರು, ಸಣ್ಣಪುಟ್ಟ ವ್ಯಾಪಾರಸ್ಥರು ಈಗಲೂ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ. ಈ ಮಧ್ಯೆ ವಾರಾಂತ್ಯದ ಲಾಕ್‌ಡೌನ್ ನಮ್ಮನ್ನು ಇನ್ನಷ್ಟು ಸಮಸ್ಯೆಗಳಿಗೆ ತಳ್ಳುತ್ತದೆ. ಕಳೆದ ವರ್ಷ ಮಾಡಿದ ಸಾಲಕ್ಕೆ ಇನ್ನೂ ಬಡ್ಡಿಕಟ್ಟಲಾಗದೆ ಪರದಾಡುವ ಪರಿಸ್ಥಿತಿಯಲ್ಲಿ ಸರ್ಕಾರ ಅವೈಜ್ಞಾನಿಕ ನಿರ್ಧಾರಗಳು ಬಡಜನರನ್ನು ಕಂಗೆಡಿಸುತ್ತಿದೆ ಎಂದು ಟೀ ಅಂಗಡಿ ಮಾಲೀಕ ಮಾದಪ್ಪ ಅಳಲು ತೋಡಿಕೊಂಡರು.
ತರಕಾರಿ ರಫ್ತು-ಆಮದಿಗೆ ಅವಕಾಶ ನೀಡಿ: ಪ್ರಸ್ತುತ ಜಿಲ್ಲೆ ಮತ್ತು ತಾಲೂಕಿನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಇದೆ. ಇದು ಹೀಗೆಯೇ ಮುಂದುವರಿಯ ಬೇಕಾದರೆ ತಾಲೂಕು ಆಡಳಿತ ಗಡಿ ಬಂದ್ ಮಾಡುವತ್ತ ಹೆಜ್ಜೆ ಇಡಬೇಕು. ನಿರ್ಲಕ್ಷ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ತರಕಾರಿ ಬೆಳೆಯುವ ತಾಲೂಕಿನ ರೈತರು ಬಹು ಮುಖ್ಯವಾಗಿ ಕೇರಳದ ವ್ಯಾಪಾರಿಗಳನ್ನೆ ಅವಲಂಬಿಸಿದ್ದಾರೆ. ಇವರು ಆಗಮಿಸದಿದ್ದರೆ
ಬೆಲೆ ಕುಸಿತ ಸೇರಿದಂತೆ ಇನ್ನಿತರ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಗದಿತ ವಾಹನಗಳಿಗೆ ಅವಕಾಶ ಮಾಡಿಕೊಡಬೇಕಾಗಿದೆ.
ಅಂತರಾಜ್ಯ ಗಡಿ ಬಂದ್ ವಿಚಾರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು, ಸರ್ಕಾರದ ನಿರ್ದೇಶನದ ಮೇರೆಗೆ ಕೆಲಸ ನಿರ್ವಹಿಸುತ್ತಿದ್ದು, ಕೋವಿಡ್ ತಡೆಗೆ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಈಗಾಗಲೇ ಕಟ್ಟಿನಿಟ್ಟಿನ ಕ್ರಮ ವಹಿಸಲಾಗಿದೆ.
– ರವಿಶಂಕರ್, ತಹಶೀಲ್ದಾರ್, ಗುಂಡ್ಲುಪೇಟೆ.
ಕೋವಿಡ್ 2ನೇ ಅಲೆಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಿದ್ದೆವು. ಇದೀಗ ವ್ಯಾಪಾರ ಚೇತರಿಕೆಕಾಣುವ ಹಂತಕ್ಕೆ ತಲುಪಿದೆ. ಸೋಮವಾರದಿಂದ ಶುಕ್ರವಾರದವರೆಗಿನ ವ್ಯಾಪಾರ ನಡೆಸಿದರೆ ಬಾಡಿಗೆ ಹಣಕ್ಕೂ ಸಾಲುವುದಿಲ್ಲ. ಶನಿವಾರ-ಭಾನುವಾರದ ಆದಾಯದಲ್ಲಿ ಲಾಭಕಾಣದಿದ್ದರು ನಷ್ಟವಾಗುತ್ತಿರಲಿಲ್ಲ. ಇದೀಗ ಸರ್ಕಾರ ವಾರಾಂತ್ಯಕರ್ಫ್ಯೂ ನಿರ್ಧಾರದಿಂದ ವ್ಯಾಪಾರ ಮತ್ತಷ್ಟು ಕುಸಿಯುತ್ತದೆ.
– ಶ್ರೀನಿವಾಸ ರಾವ್, ಗುರುಪ್ರಸಾದ್ ಹೋಟೆಲ್ ಮಾಲಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.