ನಾಳೆ 75 ಗಡಿ, ದ್ವೀಪಗಳಲ್ಲಿ ತಿರಂಗಾ!
Team Udayavani, Aug 14, 2021, 6:30 AM IST
ಹೊಸದಿಲ್ಲಿ: ಅಮೃತ ಮಹೋತ್ಸವ ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ರಕ್ಷಣ ಇಲಾಖೆ ವಿಶೇಷ ಮೆರುಗು ನೀಡಲು ಮುಂದಾಗಿದೆ. ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) 75 ತಂಡಗಳು ದೇಶದ ವಿವಿಧ ಗಡಿಪ್ರದೇಶಗಳಲ್ಲಿ ಭಾನುವಾರ ತಿರಂಗಾ ಧ್ವಜ ಹಾರಿಸಲಿವೆ.
ದೇಶದ ಐಕ್ಯತೆ, ಸಮಗ್ರತೆ ಎತ್ತಿಹಿಡಿಯುವ ಸಲುವಾಗಿ ಇಲಾಖೆಯ ಬಹುಮುಖೀ ಯೋಜನೆಗಳಿಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಚಾಲನೆ ನೀಡಿದರು. ಇದರಂತೆ, ಕೋಸ್ಟಲ್ ಗಾರ್ಡ್‌ನ ಸಿಬಂದಿ ದೇಶಾದ್ಯಂತ 100 ದ್ವೀಪಗಳಲ್ಲಿ ರಾಷ್ಟ್ರಧ್ವಜಾರೋಣ ನಡೆಸದ್ದಾರೆ.
ಕಣವೆಗಳಲ್ಲೂ ಕಹಳೆ: 75 ಯೋಧ ತಂಡಗಳು ದೇಶದ 75 ಉನ್ನತ ಪರ್ವತ, ಕಣಿವೆಗಳಲ್ಲಿ ತಿರಂಗಾ ಧ್ವಜ ಹಾರಿಸಲಿದ್ದಾರೆ. ಲಡಾಖ್‌ನ ಸಾಸೆರ್ಲಾ ಪಾಸ್, ಕಾರ್ಗಿಲ್‌ನ ಸ್ಟಾಕೊ³ಚಾನ್ ಕಣಿವೆ, ಸಾಟೋಪಂಥ್, ಹರ್ಷಿಲ್, ಉತ್ತರಾಖಂಢ್, ಫಿಮ್ ಕನಾÉì, ಸಿಕ್ಕಿಂ, ತವಾಂಗ್‌ನ ಪಾಯಿಂಟ್ 4493ಗಳಲ್ಲಿ ರಾಷ್ಟ್ರಧ್ವಜ ಹಾರಲಿದೆ.
ಕೆಂಪುಕೋಟೆಗೆ ಸರ್ಪಗಾವಲು 75ನೇ ವರ್ಷದ ಸ್ವಾತಂತ್ರೊéàತ್ಸವಕ್ಕೆ ಕೇಂದ್ರಬಿಂದು ಆಗಿರುವ ಹೊಸ ದಿಲ್ಲಿಯ ಕೆಂಪುಕೋಟೆಗೆ ಬಹುಪದರದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಎನ್‌ಎಸ್‌ಜಿ ಸ್ನಿಪರ್ಸ್, ಎಲೈಟ್ ಸ್ವಾéಟ್ ಕಮಾಂಡ್ಸ್, ಕೈಟ್ ಕ್ಯಾಚರ್ಸ್, ಶ್ವಾನ ದಳ, ವಿವಿಧ ಕಟ್ಟಡಗಳ ಮೇಲೆ ಶಾರ್ಪ್ ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ಉಗ್ರರ ಡ್ರೋನ್ ದಾಳಿಯ ಭೀತಿ ಹಿನ್ನೆಲೆಯಲ್ಲಿ ಆ್ಯಂಟಿ ಡ್ರೋನ್ ಸಿಸ್ಟಮ್ ಅನ್ನು ಕೆಂಪುಕೋಟೆಗೆ ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ.
ವಿಧ್ವಂಸಕ ಕೃತ್ಯ ತಡೆದ ಪೊಲೀಸರು :
ರಾಷ್ಟ್ರ ರಾಜಧಾನಿ ಸುತ್ತಮುತ್ತ ನಾಲ್ವರು ಕಿಡಿಗೇಡಿ ಗಳನ್ನು ಶಸ್ತ್ರಾಸ್ತ್ರ ಸಹಿತ ಶುಕ್ರವಾರ ಸೆರೆಹಿಡಿಯಲಾ ಗಿದೆ. ರಾಜ್‌ಬೀರ್, ಧೀರಜ್, ಧರ್ಮೇಂದರ್, ವಿನೋದ್ ಎಂಬುವವರು ಪೊಲೀಸರ ಬಲೆಗೆ ಬಿದ್ದಿದ್ದು, 50 ಜೀವಂತ ಸ್ಫೋಟಕಗಳ ಜತೆಗೆ 55 ಪಿಸ್ತೂಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಐಇಡಿ ಅಳವಡಿಸಲ್ಪಟ್ಟ ಸ್ಟಿಕ್ಕಿ ಬಾಂಬ್‌ಗಳನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ಒಟ್ಟಿನಲ್ಲಿ ಭಾರೀ ವಿಧ್ವಂಸಕ ಕೃತ್ಯವನ್ನು ತಡೆದಂತಾಗಿದೆ. ಈ ನಡುವೆ, ಜಮ್ಮು-ಕಾಶ್ಮೀರ ಹೆದ್ದಾರಿಯಲ್ಲಿ ಭಾರೀ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನಿ ಉಗ್ರನನ್ನು ಕುಲ್ಗಾಂನಲ್ಲಿ ಭದ್ರತಾಪಡೆ ಹೊಡೆದುರುಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.