ಉಡುಪಿಯಲ್ಲಿ 24 ತಾಸುಗಳ ಉತ್ಸವ


Team Udayavani, Aug 14, 2021, 7:10 AM IST

ಉಡುಪಿಯಲ್ಲಿ 24 ತಾಸುಗಳ ಉತ್ಸವ

1947 ಆಗಸ್ಟ್‌ 14-15 :

1919ರಿಂದ ಉಡುಪಿ ರಥಬೀದಿಯು ಸ್ವಾತಂತ್ರ್ಯ ಸಂಗ್ರಾಮ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿತ್ತು. ಆ. 14ರ ಸಂಜೆಯಿಂದ ಮರುದಿನ ಸಂಜೆವರೆಗೆ 24 ಗಂಟೆ ಕಾಲ ಉಡುಪಿ ನಗರದಲ್ಲಿ ಪ್ರಥಮ ಸ್ವಾತಂತ್ರ್ಯೋತ್ಸವ ಆಚರಣೆ. ಪ್ರಾಯಃ ಅನಂತರ ಇಷ್ಟು ದೀರ್ಘ‌ ಕಾಲದ ಆಚರಣೆ ನಡೆದಿರಲಾರದು. ಎಲ್ಲ ದೇವಸ್ಥಾನಗಳು, ಮಠಗಳು, ಮನೆಗಳು, ರಸ್ತೆಗಳು ಅಲಂಕೃತಗೊಂಡಿದ್ದವು. ಆ. 14 ರ ರಾತ್ರಿ ಪತ್ರಕರ್ತ ಎಂ.ವಿ.ಹೆಗ್ಡೆ ಅವರು ರಚಿಸಿದ “ಸ್ವರಾಜ್ಯ ವಿಜಯ’ ಯಕ್ಷಗಾನ ತಾಳಮದ್ದಲೆಯನ್ನು ಯುವಕ ಮಂಡಲದ ಸದಸ್ಯರು ಶ್ರೀಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಪ್ರಸ್ತುತಪಡಿಸಿದರು. ಸಂಭ್ರಮದ ಸಂಕೇತವಾಗಿ ಶ್ರೀಕೃಷ್ಣಮಠ ಮತ್ತು ದೇವಸ್ಥಾನಗಳ ನಗಾರಿ ಬಾರಿಸಲಾಯಿತು, ಘಂಟಾನಿನಾದ ಕೇಳಿಬಂತು. ಕದೊನಿ ಗಳನ್ನು (ಬೆಡಿ) ಸಿಡಿಸಲಾಯಿತು. ಆಗಿನ ಪರ್ಯಾಯ ಪೀಠಸ್ಥ ರಾಗಿದ್ದ ಶೀರೂರು ಮಠದ ಶ್ರೀಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿ ಮತ್ತು ಶ್ರೀಭಂಡಾರಕೇರಿ ಮಠದ ಸ್ವಾಮೀಜಿ, ಇತರ ಅಷ್ಟಮಠಗಳ ಸ್ವಾಮೀಜಿಗಳು, ಸ್ವಾತಂತ್ರ್ಯ ಹೋರಾಟ ಗಾರರು ಮೆರವಣಿಗೆಯಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜ ಅರಳಿಸಿದರು..

ಅಷ್ಟಮಿ ದಿನ ಮಧ್ಯರಾತ್ರಿ ಕೃಷ್ಣನನ್ನು ತಂದೆ ಬುಟ್ಟಿಯಲ್ಲಿಟ್ಟು ಹೊತ್ತೂಯ್ಯುವಾಗ ಮಳೆ ಬರುತ್ತಿತ್ತು ಎಂಬಂತೆ ಪ್ರಥಮ ಸ್ವಾತಂತ್ರ್ಯೋತ್ಸವದ ಆಚರಣೆ ಸಂದರ್ಭ ಮಳೆ ಬಂತು. ಬಾಲಕರ ತರಬೇತಿ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ಭಟ್‌ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀಚಂದ್ರಮೌಳೀಶ್ವರ ದೇವ ಸ್ಥಾನದ “ಕಲಾವೃಂದ’ ಸಾಂಸ್ಕೃತಿಕ ಸಂಸ್ಥೆಯಲ್ಲಿ ಗಾಂಧೀಜಿ ಯವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ಆ. 15ರ ಬೆಳಗ್ಗೆ ಶ್ರೀಕೃಷ್ಣಮಠದಿಂದ ಶಿಸ್ತುಬದ್ಧ ಪ್ರಭಾತ್‌ಭೇರಿ ಮೆರವಣಿಗೆ ಹೊರಟು  ಅಜ್ಜರಕಾಡು ಗಾಂಧಿ ಮೈದಾನದಲ್ಲಿ ಸಮಾಪನಗೊಂಡಿತು. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ ಪಾಂಗಾಳ ನಾಯಕ್‌ ಕುಟುಂಬದ ಪಿ. ಮನೋರಮಾ ಬಾಯಿ ರಾಷ್ಟ್ರಧ್ವಜವನ್ನು ಅರಳಿಸಿದರು. ಸೇವಾದಲ ಮತ್ತು ಶಾಲಾ ಮಕ್ಕಳು ರಾಷ್ಟ್ರಗೀತೆ ಮತ್ತು ದೇಶಭಕ್ತಿಗೀತೆಗಳನ್ನು ಹಾಡಿದರು. ಶಾಲೆಗಳಲ್ಲಿ ಸಿಹಿತಿಂಡಿ ವಿತರಿಸಲಾಯಿತು. ಮುನ್ಸಿàಫ‌ರಾಗಿದ್ದ ಪಾಂಗಾಳ ಮೂಡಲಗಿರಿ ನಾಯಕ್‌ ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿದರು. ಹಿರಿಯರಾದ ಡಾ| ಕೆ.ಎಲ್‌.ಐತಾಳ್‌, ಡಾ| ಪಾಂಗಾಳ ರಾಘವೇಂದ್ರ ನಾಯಕ್‌, ನಗರಸಭೆ ಸ್ಥಾಪಕಾಧ್ಯಕ್ಷ ಆರೂರು ಲಕ್ಷ್ಮೀನಾರಾಯಣ ರಾವ್‌, ವಿಟ್ಠಲ ಕಾಮತ್‌, ಕೆ.ಕೆ. ಶಾನುಭಾಗ್‌, ಪಾಂಗಾಳ ಲಕ್ಷ್ಮೀನಾರಾಯಣ ನಾಯಕ್‌, ಪಾಂಗಾಳ ಮನೋರಮಾ ಬಾಯಿ, ಆಗಿನ ಕಾಂಗ್ರೆಸ್‌ ಅಧ್ಯಕ್ಷ ಬಾಳ್ಕಟ್ಟಬೀಡು ಕೃಷ್ಣಯ್ಯ ಹೆಗ್ಡೆ ಮತ್ತು ತಹಶೀಲ್ದಾರ್‌ ಸದಾನಂದ ಪೈ ಮತ್ತಿತರರು ಪಾಲ್ಗೊಂಡಿ ದ್ದರು. “ನವಯುಗ’ ಮತ್ತು “ರಾಷ್ಟ್ರಬಂಧು’ ವಾರಪತ್ರಿಕೆಗಳು ವರದಿ ಮಾಡಿದ್ದವು.

ಗಣಿಯಿಂದ ಧ್ವಜಾರೋಹಣ :

ಪ್ರಥಮ ಸ್ವಾತಂತ್ರ್ಯೋತ್ಸವದಲ್ಲಿ ಗಿಣಿ ಯೊಂದು ರಾಷ್ಟ್ರಧ್ವಜಾರೋಹಣ ಮಾಡಿತ್ತು. ಒಂದೆಡೆ ದೇಶ ಭಕ್ತರು ಧ್ವಜಾ ರೋಹಣ ಮಾಡಿದರೆ ಇನ್ನೊಂದೆಡೆ ಸಾಕು ಗಿಣಿಯೊಂದು ಅದಕ್ಕೆ ತಕ್ಕುದಾದ ರಾಷ್ಟ್ರಧ್ವಜದ ಪ್ರತೀಕವನ್ನು ಅರಳಿಸಿತು. ಗಿಣಿ ಯೊಂದು ಧ್ವಜಾರೋಹಣ ಮಾಡುತ್ತದೆ ಎಂದು ಕರಪತ್ರದಲ್ಲಿ ತಿಳಿಸಲಾಗಿತ್ತು. ಇದು ಕಾರ್ಯ ಕ್ರಮದ ಆಕರ್ಷಣೆ. ಇದೇ ರೀತಿ ಹಲ ವೆಡೆ ಸಾಕು ಗಿಣಿಗಳು ಧ್ವಜಾ ರೋಹಣ ಮಾಡಿದ್ದವಂತೆ.

ಪೇಜಾವರ ಶ್ರೀಗಳ ಪ್ರಥಮ- ಕೊನೆಯ ಸ್ವಾತಂತ್ರ್ಯ ಸಂದೇಶ :

ರಥಬೀದಿಯಲ್ಲಿ 1947ರಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ 16 ವರ್ಷ. ಅಂದು ಶ್ರೀಪಾದರು “ಅನೇಕರ ಬಲಿ ದಾನ ದಿಂದ ದೇಶಕ್ಕೆ ಸ್ವಾತಂತ್ರ್ಯಸಿಕ್ಕಿದೆ. ಇದನ್ನು ಮುಂದಿನ ಪೀಳಿಗೆ ಯವರು, ಆಡಳಿತಾರೂಢರು ಉಳಿಸಿ ಕೊಂಡು ದೇಶ ವನ್ನು ಸದೃಢ ಗೊಳಿಸ ಬೇಕು. ಬಂದ ಜವಾಬ್ದಾರಿಯನ್ನು ಸರಕಾರ ಉಳಿಸಿಕೊಳ್ಳುವುದು ಮುಖ್ಯ’ ಎಂದಿದ್ದರು. 2019ರ ಆ. 14ರಂದು “ಉದಯವಾಣಿ’ ಜತೆ ಮಾತನಾಡಿದ 89ರ ಶ್ರೀಗಳು “1947ರಲ್ಲಿ ಗಾಂಧೀಜಿ ಪ್ರಭಾವದಿಂದ ರಾಜ ಕಾರಣಿಗಳು ಭ್ರಷ್ಟರಾಗಿರ ಲಿಲ್ಲ. ಆಗ ಮುಂದೊಂದು ದಿನ ಇಷ್ಟು ಅಗಾಧ ಪ್ರಮಾಣದಲ್ಲಿ ಅಪ್ರಾಮಾಣಿಕತೆ, ಅಧಿಕಾರ ಸ್ವಾರ್ಥ ನಡೆಯುತ್ತದೆಂದು ಕಲ್ಪಿಸಿಕೊಂಡಿರಲೂ ಇಲ್ಲ. ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ಆರಂಭವಾಯಿತು. ಈಗ ಪ್ರಜಾಪ್ರಭುತ್ವ ಅಪಮೌಲ್ಯಕ್ಕೆ ಒಳಗಾಗುತ್ತಿದೆ. ಜನಪ್ರತಿನಿಧಿಗಳು ಭ್ರಷ್ಟಾಚಾರಕ್ಕೆ ಒಳಗಾಗದೆ ದೇಶಭಕ್ತಿ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು’  ಎಂದಿದ್ದರು.2019ರ ಡಿ. 29ರಂದು ಶ್ರೀಗಳು  ಇಹಲೋಕ ತ್ಯಜಿಸಿದರು.

ಟಾಪ್ ನ್ಯೂಸ್

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.