ನರೇಗಾ ಯೋಜನೆಯಡಿ ದಿವ್ಯಾಂಗರಿಗೂ ಉದ್ಯೋಗ
18 ವರ್ಷ ಮೇಲ್ಪಟ್ಟ ಅರ್ಹರೆಲ್ಲರಿಗೂ ನರೇಗಾದಡಿ ಉದ್ಯೋಗ ನೀಡಿ: ಜಿಲ್ಲಾಧಿಕಾರಿ ಆರ್.ಲತಾ
Team Udayavani, Aug 14, 2021, 2:52 PM IST
ಚಿಕ್ಕಬಳ್ಳಾಪುರ: ಉದ್ಯೋಗ ಖಾತ್ರಿಯೋಜನೆಯಡಿ ದಿವ್ಯಾಂಗರೂ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಬಹುದಾಗಿದ್ದು,18 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹರಿಗೂ ಉದ್ಯೋಗ ಚೀಟಿ ಮಾಡಿಸಿ, ಕೂಲಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನರೇಗಾ ಯೋಜನೆಯಲ್ಲಿ ದಿವ್ಯಾಂಗರಿಗೆ ಉದ್ಯೋಗ ಚೀಟಿ ನೀಡುವ ಸಂಬಂಧ ಜಿಲ್ಲೆಯ ಎಲ್ಲಾ ತಾಲೂಕುಗಳ ಇಒ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಬಡ
ಕುಟುಂಬಗಳ ಜೀವನೋಪಾಯದ ಭದ್ರತೆ ಒದಗಿಸುವುದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು
ಹೇಳಿದರು.
ದಿವ್ಯಾಂಗರಿಗೂ 100 ದಿನ ಕೂಲಿ: ಇದರ ಜತೆಗೆ ಸಮಾಜದಲ್ಲಿರುವ ದಿವ್ಯಾಂಗರು, ಬುಡಕಟ್ಟು ಜನಾಂಗ, ವಿಶೇಷ ಸ್ಥಿತಿಯಲ್ಲಿರುವ ಮಹಿಳೆಯರು, ಎಚ್‌ಐವಿ ಪೀಡಿತರು, ಆಂತರಿಕವಾಗಿ ಸ್ಥಳಾಂತರಿ ಸಲ್ಪಟ್ಟಜನರು ಸೇರಿವಿವಿಧದುರ್ಬಲಗುಂಪುಗಳಿಗೆ ಸಾಮಾಜಿಕ ಸಂರಕ್ಷಣೆ ಒದಗಿಸಿ ಬದುಕಿನ ಬವಣೆ ನೀಗಿಸಲು ನರೇಗಾದಲ್ಲಿ ಹಲವು ಅವಕಾಶ ಒದಗಿಸಲಾಗಿದೆ. ಈ ದಿಸೆಯಲ್ಲಿ ದಿವ್ಯಾಂಗರಿಗೂ ಉದ್ಯೋಗ ಚೀಟಿಯನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ.ಅವರಿಗೆಒಂದುಆರ್ಥಿಕವರ್ಷಕ್ಕೆ 100 ದಿನಗಳ ಖಾತ್ರಿ ಉದ್ಯೋಗ ಒದಗಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಬ್ರಿಟಿಷರನ್ನು ಬೆಚ್ಚಿ ಬೀಳಿಸಿದ್ದ ವಿವಿಂಗ್ ಮಾಸ್ತರ್!
ಪ್ರತ್ಯೇಕ ಗುರುತಿಸುವಿಕೆ: ದಿವ್ಯಾಂಗರು ನಿರ್ವಹಿಸಬೇಕಾದ ಕೆಲಸದ ಕಾಮಗಾರಿಗಳನ್ನು ಅವರ ಅಂಗವೈಕಲ್ಯದ ವಿವಿಧ ಪ್ರಮಾಣಗಳನ್ನು ಆಧರಿಸಿ ಹಾಗೂ ಹಿರಿಯ ನಾಗರಿಕರ ಶಕ್ತಿ ಸಾಮರ್ಥ್ಯಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕಾದ ಕುಟುಂಬಗಳನ್ನು ಮಾರ್ಗಸೂಚಿಗಳಲ್ಲಿ ಪ್ರತ್ಯೇಕ ಗುರುತಿಸಲಾಗಿದೆ ಎಂದು ವಿವರಿಸಿದರು.
ಜಾಗೃತಿ ಮೂಡಿಸಿ: ದಿವ್ಯಾಂಗ ವ್ಯಕ್ತಿಗಳನ್ನು ಕಾರ್ಯ ಕ್ಷೇತ್ರದಲ್ಲಿ ಕಾಯಕ ಬಂಧುವಾಗಿ ವಿಶೇಷ ಆದ್ಯತೆ ನೀಡಲಾಗಿದೆ. ಇತರೆ ಕೆಲಸಗಾರರಿಗೆ ಕುಡಿಯುವ ನೀರು, ಮಹಿಳಾ ಕೆಲಸಗಾರರ ಮಕ್ಕಳಿಗೆ ಲಾಲನೆ ಪಾಲನೆ, ಸಸಿ ನೆಡುವುದು, ಬಾಂಡಲಿಗೆ ಜಲ್ಲಿ,ಮಣ್ಣು ತುಂಬುವುದು, ಹೊಸ ಕಟ್ಟಡಗಳಿಗೆ ನೀರು ಹಾಕುವುದು, ಮಣ್ಣು ಸರಿಸುವುದು, ಬಂಡಿಂಗ್ ಮಾಡುವುದು, ತ್ಯಾಜ್ಯಗಳನ್ನು ಬಾಂಡಲಿಗೆ ಹಾಕುವುದು ಸೇರಿ ವಿವಿಧ ಚಿಕ್ಕಪುಟ್ಟ ಕೆಲಸಗಳನ್ನು ಅವರಿಗೆ ನಿಡೀಡಲಾಗುತ್ತಿದೆ. ದಿವ್ಯಾಂಗರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಜಾಗೃತಿ
ಮೂಡಿಸಬೇಕು ಎಂದು ಇಒಗೆ ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಜಿಲ್ಲಾದ್ಯಂತ ಒಟ್ಟು 17,610 ಮಂದಿ 18 ವರ್ಷ ಮೇಲ್ಟಟ್ಟ ದಿವ್ಯಾಂಗರನ್ನು ಗುರ್ತಿಸಿ ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಗೆ ನರೇಗಾದಡಿ ಉದ್ಯೋಗ ನೀಡಬಹುದಾಗಿದ್ದು, ಎಲ್ಲರಿಗೂ ಉದ್ಯೋಗ ಚೀಟಿ ಮಾಡಿಸಲು ಕ್ರಮ
ವಹಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಸ್ಮಾನ್, ಜಿಪಂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.