ಬ್ರಿಟಿಷರನ್ನು ಬೆಚ್ಚಿ ಬೀಳಿಸಿದ್ದ ವಿವಿಂಗ್‌ ಮಾಸ್ತರ್‌!

ಈ ಮೂಲಕ ಕಂಪನಿಗೆ ಪರೋಕ್ಷವಾಗಿ ಸ್ಫೋಟಿಸುವ ಬೆದರಿಕೆಯ ಸಂದೇಶ ರವಾನಿಸಲಾಗುತ್ತಿತ್ತು

Team Udayavani, Aug 14, 2021, 2:51 PM IST

ಬ್ರಿಟಿಷರನ್ನು ಬೆಚ್ಚಿ ಬೀಳಿಸಿದ್ದ ವಿವಿಂಗ್‌ ಮಾಸ್ತರ್‌!

ಎಲ್ಲೆಡೆ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿರುವಂತೆ ಗದಗ ನಗರದಲ್ಲಿ ವಿವಿಂಗ್‌ ಮಾಸ್ತರರೊಬ್ಬರ ಕಂಪನಿ ವಿರೋಧಿ ಚಟುವಟಿಕೆಗಳಿಂದ ಬ್ರಿಟಿಷ್‌ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದರು. ತುರ್ತು ಸಮಯದಲ್ಲೇ ರೈಲ್ವೆ ಹಳಿ ತಪ್ಪಿಸುವ ತಂತಿ ಕೀಳುವುದು, ಬಾಂಬ್‌ ತಯಾರಿಸುವ ಮೂಲಕ ಅಧಿಕಾರಿಗಳ ತಲೆನೋವಿಗೆ ಕಾರಣರಾಗಿದ್ದರು.

1942ರಲ್ಲಿ ಗದುಗಿನ ಎನ್‌.ಸಿ. ಮಿಲ್ಲಿನಲ್ಲಿ ಶ್ರೀ ಗುಪ್ತ ಎಂಬ ಮಹಾರಾಷ್ಟ್ರದ ಯುವಕರೊಬ್ಬರು ವಿವಿಂಗ್‌ ಮಾಸ್ತರರಾಗಿದ್ದರು.ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದ ಅವರು, ಸ್ವಾತಂತ್ರ್ಯ ಚಳವಳಿಯತ್ತವಾಲಿದ್ದರು. ಹೋರಾಟಗಾರರನ್ನು ಬೆಂಬಲಿಸುವುದರೊಂದಿಗೆ ಬ್ರಿಟಿಷ್‌ ಸರಕಾರದ ಸೇವೆಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದರು.

ರೈಲ್ವೆ ಹಳಿ ತಪ್ಪಿಸುವ, ತಂತಿ ಕೀಳುವುದು, ಸಣ್ಣ ಪ್ರಮಾಣದ ಬಾಂಬ್‌ಗಳನ್ನು ತಯಾರಿಸಿ, “ಮುಟ್ಟದಿರು ಎನ್ನ’ ಎಂಬ ಗೊಂಬೆಗಳನ್ನು ಪೇಟೆಯ ಪ್ರಮುಖಸ್ಥಳಗಳಲ್ಲಿ ಇಡಲಾಗುತ್ತಿತ್ತು. ಈ ಮೂಲಕ ಕಂಪನಿಗೆ ಪರೋಕ್ಷವಾಗಿ ಸ್ಫೋಟಿಸುವ ಬೆದರಿಕೆಯ ಸಂದೇಶ ರವಾನಿಸಲಾಗುತ್ತಿತ್ತು ಎಂಬುದು ಇತಿಹಾಸ.

ಅದಕ್ಕಾಗಿ ವಿವಿಧೆಡೆಯಿಂದ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿ ಶ್ರೀ ಗುಪ್ತೆ ಬಾಂಬ್‌ ಮುಂದಾಳತ್ವದಲ್ಲಿ ಕೇಶವರಾವ್‌ ಕುಲ್ಕರ್ಣಿ ಮತ್ತು ಎಫ್‌.ಜಿ. ಫಡನಿಸ್‌ ಬಾಂಬ್‌ ತಯಾರಿಸ ಲಾಗುತ್ತಿತ್ತು. ಅದಕ್ಕಾಗಿ ಇಲ್ಲಿನ ನಗರಸಭೆಯ ಮುನ್ಸಿಪಲ್‌ ಹೈಸ್ಕೂಲ್‌ನ ಪ್ರಯೋಗಾಲಯ ವನ್ನು ಬಳಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಸುಳಿವು ಪಡೆದ ಬ್ರಿಟಿಷ್‌ ಅಧಿಕಾರಿಗಳು, ಶ್ರೀ ಗುಪ್ತೆ ಅವರನ್ನು ಬಂಧಿಸಿದ್ದರು. ಆದರೆ ಸೂಕ್ತ ಸಾಕ್ಷಾಧಾರಗಳ ಇಲ್ಲದ ಕಾರಣ ಯಾವುದೇ ರೀತಿ
ಮೊಕದ್ದಮೆ ದಾಖಲಿಸದೇ ಬಿಟ್ಟು ಕಳುಹಿಸಿದ್ದರು.

ಅದಾಗಲೇ ಎಲ್ಲೆಡೆ ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ ಚಳವಳಿ ತೀವ್ರಸ್ವರೂಪ ಪಡೆದಿತ್ತು. ಮಹಾತ್ಮ ಗಾಂಧೀಜಿ, ಜವಾಹರ್‌ ಲಾಲ್‌ ನೆಹರು, ಬಾಲಗಂಗಾಧರ ತಿಲಕ್‌ ಸೇರಿದಂತೆ ಅನೇಕ ಮಹನೀಯರು ಗದಗಿಗೆ ಭೇಟಿ ನೀಡಿದ್ದರಿಂದ ಈ ಭಾಗದಲ್ಲಿ ಚಳವಳಿ ಜೋರಾಗಿತ್ತು. ಶ್ರೀ ಗುಪ್ತ ಅವರನ್ನು ಬಿಟ್ಟು ಕಳುಹಿಸಲು ಅದೂ ಒಂದು ಕಾರಣವಾಗಿರಬಹುದು ಎಂದು ನಂಬಲಾಗಿದೆ.

● ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

3-BIGG-BOSS

BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

ISREL

Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ರಾಣಿ ಚನ್ನಮ್ಮ

ಗದಗ: ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ರಾಣಿ ಚನ್ನಮ್ಮ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Jagadish Shettar: ಕಾಂಗ್ರೆಸ್‌ನವರಿಂದಲೇ ಸಿಎಂ ಕೆಳಗಿಳಿಸಲು ಯತ್ನ

Jagadish Shettar: ಕಾಂಗ್ರೆಸ್‌ನವರಿಂದಲೇ ಸಿಎಂ ಕೆಳಗಿಳಿಸಲು ಯತ್ನ

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

3-BIGG-BOSS

BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

ISREL

Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.