ಕೆಜಿಎಫ್ ಪೊಲೀಸ್ ಜಿಲ್ಲೆಗೆ ನೂತನ ಠಾಣೆ, ಸರ್ಕಲ್‌ಗಳು ಅಸ್ವಿತ್ವಕ್ಕೆ
ಎಲ್ಲಾ ನೂತನ ಠಾಣೆಗಳಲ್ಲಿ ಪೂಜೆ ನೆರವೇರಿಸಿ ಶುಕ್ರವಾರದಿಂದಲೇ ಕಚೇರಿ ಕಾರ್ಯಾರಂಭ ; ಜನರಿಗೆ ಮತ್ತಷ್ಟುಕಾನೂನು ರಕ್ಷಣೆ
Team Udayavani, Aug 14, 2021, 3:41 PM IST
ಕೆಜಿಎಫ್: ರಾಜ್ಯದ ಪ್ರಥಮ ಎಸ್ಪಿಯನ್ನು ಹೊಂದಿದ ಕೀರ್ತಿಯನ್ನು ಹೊಂದಿರುವ ಕೆಜಿಎಫ್ ಪೊಲೀಸ್ ಜಿಲ್ಲೆಗೆ ನೂತನ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಠಾಣೆಗಳು ಮತ್ತು ಸರ್ಕಲ್ ಗಳು ಶುಕ್ರವಾರದಿಂದ ಅಸ್ವಿತ್ವಕ್ಕೆ ಬಂದಿದೆ.
ಇದರ ಜೊತೆಗೆ ಬೇತಮಂಗಲ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಕಾಮ ಸಮುದ್ರ ಇನ್ಸ್ ಪೆಕ್ಟರ್ ಕಚೇರಿ ಕೂಡ ಕಾರ್ಯಾರಂಭ ಮಾಡಿತು.
ಹೊಸ ದಾಗಿ ಬೆಮಲ್‌ನಗರ ಮತ್ತು ರಾಜಪೇಟೆ ರೋಡ್‌ನಲ್ಲಿ ಔಟ್‌ಪೋಸ್ಟ್ ತೆಗೆಯಲಾಗಿದೆ.
ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಚಿನ್ನದ ಗಣಿಯಲ್ಲಿ ಸಾವಿರಾರು ಕಾರ್ಮಿಕರು ಇದ್ದು, ಪ್ರತ್ಯೇಕ ಸೂಪರಿನ್ ಟೆಂಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ರಚಿಸಲಾಗಿತ್ತು. ಸ್ವಾತಂತ್ರ್ಯ ನಂತರವೂ ಈ ಹುದ್ದೆ ಮುಂದುವರಿಯಿತು. ಒಂಬತ್ತು ಪೊಲೀಸ್ ಠಾಣೆಗಳ ಸರಹದ್ದನ್ನು ನೀಡಲಾಯಿತು.
ಬಂಗಾರಪೇಟೆ,ಬೆಮಲ್‌ನಗರ,ಬೇತಮಂಗಲ, ಕಾಮಸಮುದ್ರ,ಆಂಡರಸನ್‌ಪೇಟೆ,ರಾಬರ್ಟಸನ್ ಪೇಟೆ, ಚಾಂಪಿಯನ್ ರೀಫ್ಸ್ , ಊರಿಗಾಂ ಮತ್ತು ಮಾರಿಕುಪ್ಪಂ ಪೊಲೀಸ್ ಠಾಣೆಗಳು ಇದ್ದವು. ಚಿನ್ನದ ಗಣಿ ಮುಚ್ಚಿದ ಮೇಲೆ ಮಾರಿಕುಪ್ಪಂ ಮತ್ತು ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆ ಮತ್ತು ಚಾಂಪಿಯನ್ ರೀಫ್ಸ್ ಸರ್ಕಲ್ ನಲ್ಲಿ ಪೊಲೀಸರು ಸುಮ್ಮನೆ ಕಾಲ ಕಳೆಯುವ ಪರಿಸ್ಥಿತಿ ಒದಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯನ್ನು ಪುನರ್ ರಚಿಸಬೇಕೆಂದು ಹಲವಾರು ಪ್ರಸ್ತಾವಗಳು ಸರ್ಕಾರದ ಮುಂದೆ ಹೋಗಿದ್ದವು. ಅದಕ್ಕೆ ಈಗ ಸರ್ಕಾರ ಒಪ್ಪಿಗೆ ಸೂಚಿಸಿದ್ದು,ಜೂ.6ನೇ ತಾರೀಕಿನಂದು ಅಧಿಕೃತ ಆದೇಶ ಹೊರಡಿಸಲಾಗಿತ್ತು. ಶುಕ್ರವಾರ ಎಲ್ಲಾ ಠಾಣೆಗಳಲ್ಲಿ ಪೂಜೆ ನೆರವೇರಿಸಿ
ಕಚೇರಿಗಳನ್ನು ತೆರೆಯಲಾಯಿತು.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಲಿಪ್ ಲಾಕ್
ಎರಡು ಔಟ್‌ಪೋಸ್ಟ್ ಸೇರ್ಪಡೆ: ಬಂಗಾರಪೇಟೆ ಮತ್ತು ಚಾಂಪಿಯನ್ ರೀಫ್ಸ್ ಸರ್ಕಲ್‌ಗಳು ಇನ್ನು ಮುಂದೆ ಇರುವುದಿಲ್ಲ. ಅದರ ಬದಲಿಗೆ
ಕಾಮಸಮುದ್ರ, ಬೇತಮಂಗಲ ಸರ್ಕಲ್‌ಗಳು ಇರಲಿದೆ.ಕಾಮಸಮುದ್ರ ಸರ್ಕಲ್‌ಗೆ ನೂತನವಾಗಿ ಆರಂಭವಾಗಲಿರುವ ಬೂದಿಕೋಟೆ, ಕಾಮಸಮುದ್ರ ಪೊಲೀಸ್ ಠಾಣೆ ಸೇರಲಿದೆ. ಬೇತಮಂಗಲಕ್ಕೆನೂತನವಾಗಿಆರಂಭವಾಗಲಿರುವ ಕ್ಯಾಸಂಬಳ್ಳಿ ಮತ್ತು ರಾಜಪೇಟೆ ರೋಡ್ ಔಟ್
ಪೋಸ್ಟ್ ಸೇರ್ಪಡೆಯಾಗಲಿದೆ.
ರಾಬರ್ಟಸನ್‌ಪೇಟೆ ಇನ್ಸ್‌ಪೆಕ್ಟರ್ ಉಸ್ತುವಾರಿ: ರಾಬರ್ಟಸನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಇಡೀ ಕೆಜಿಎಫ್ ನಗರದ ಉಸ್ತುವಾರಿ ವಹಿಸಲಿದ್ದಾರೆ. ಬಂಗಾರ ಪೇಟೆ ಉನ್ನತೀಕರಣವಾಗಲಿದ್ದು, ಹೊಸದಾಗಿ ಇನ್ಸ್‌ಪೆಕ್ಟರ್ ಹುದ್ದೆ ರಚಿತವಾಗಲಿದೆ. ನಾಲ್ವರು ಪಿಎಸ್‌ಐಗಳು ಬರಲಿದ್ದಾರೆ. ಭಾರತ್ ನಗರದಲ್ಲಿ ಹೊಸದಾಗಿ ಔಟ್‌ಪೋಸ್ಟ್ ರಚನೆಯಾಗಲಿದೆ. ಮಾರಿಕುಪ್ಪಂ, ಚಾಂಪಿಯನ್ ರೀಫ್ಸ್ ಠಾಣೆಗಳು ಕ್ರಮವಾಗಿ ಅಸ್ವಿತ್ವ ಕಳೆದುಕೊಂಡು ಕ್ಯಾಸಂಬಳ್ಳಿ ಮತ್ತು ಬೂದಿಕೋಟೆ ಠಾಣೆಗಳಾಗಿ ಪರಿವರ್ತನೆಯಾಗಲಿದೆ. ಊರಿಗಾಂ ಪೊಲೀಸ್ ಠಾಣೆ ನವೀಕರಣ ಗೊಂಡಿದ್ದು,ಅದನ್ನುತಾತ್ಕಾಲಿಕವಾಗಿ ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.