ಮಹಿಳೆಯರಿಗೆ ಸಂತಾನವೃದ್ಧಿ ಆಯ್ಕೆಗಳು


Team Udayavani, Aug 15, 2021, 6:30 AM IST

ಮಹಿಳೆಯರಿಗೆ ಸಂತಾನವೃದ್ಧಿ ಆಯ್ಕೆಗಳು

ಶಿಶುವನ್ನು ಹೊಂದಲು ಅತ್ಯುತ್ತಮವಾದ ವಯಸ್ಸು 20ರಿಂದ 30 ವರ್ಷಗಳ ನಡುವಣ ಅವಧಿ. ಈ ವಯಸ್ಸಿನಲ್ಲಿ ಮಹಿಳೆಯು ಯುವತಿಯಾಗಿದ್ದು, ಶಿಶುಗಳನ್ನು ಹೊಂದಲು ಸದೃಢಳಾಗಿರುತ್ತಾಳೆ. ಇತ್ತೀಚೆಗಿನ ದಶಕಗಳಲ್ಲಿ ಮಹಿಳೆಯು 32-33 ವಯಸ್ಸಿನ ಅವಧಿಯಲ್ಲಿ ಗರ್ಭಧಾರಣೆಗೆ ಮನಸ್ಸು ಮಾಡುವುದು ಕಂಡುಬರುತ್ತಿದೆ. 35ರ ಬಳಿಕ ಶಿಶುವನ್ನು ಹೊಂದುವುದಾದರೆ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು – ಫ‌ಲವತ್ತತೆಯ ಪ್ರಮಾಣ ಕಡಿಮೆಯಾಗುತ್ತದೆ, ಮಹಿಳೆಯು ಮಧುಮೇಹ, ರಕ್ತದೊತ್ತಡದಂತಹ ಜೀವನಶೈಲಿ ಆಧರಿತ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರಬಹುದು, ತಾಯಿಮಾಸುವಿಗೆ ಸಂಬಂಧಿಸಿದ ತೊಂದರೆಗಳು ತಲೆದೋರಬಹುದು, ಶಿಶುಜನನಕ್ಕೆ ಸಂಬಂಧಿಸಿದ ಅಪಾಯಗಳು ಉಂಟಾಗುವ ಸಾಧ್ಯತೆಗಳು ಅಧಿಕ, ಅಸಹಜ ಶಿಶುಜನನವಾಗುವ ಸಾಧ್ಯತೆಗಳೂ ಹೆಚ್ಚು. 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ಕಡಿಮೆ ತೂಕದ ಶಿಶುವಿಗೆ ಜನ್ಮ ನೀಡುವ ಅಥವಾ ಅವಧಿಪೂರ್ವ ಹೆರಿಗೆಯಾಗುವ ಸಾಧ್ಯತೆಗಳು ಅಧಿಕ. 40 ವರ್ಷ ವಯಸ್ಸಿನಲ್ಲಿ ಮಹಿಳೆ ಒಂದು ವರ್ಷದೊಳಗೆ ಗರ್ಭಧಾರಣೆಯಾಗುವ ಪ್ರಮಾಣ ಶೇ. 40ರಿಂದ ಶೇ. 50 ಇದ್ದರೆ 30 ವರ್ಷ ವಯಸ್ಸಿನ ಆಸುಪಾಸಿನ ಮಹಿಳೆಯರು ಒಂದು ವರ್ಷದೊಳಗೆ ಗರ್ಭಧರಿಸುವ ಪ್ರಮಾಣ ಶೇ. 75 ಇರುತ್ತದೆ. 43 ವರ್ಷ ವಯಸ್ಸಿಗಾಗುವ ವೇಳಗೆ ಮಹಿಳೆಯು ಗರ್ಭಧರಿಸುವ ಪ್ರಮಾಣ ಶೇ. 1ರಿಂದ ಶೇ. 2ಕ್ಕೆ ಕುಸಿಯುತ್ತದೆ.

ಕೃತಕ ಗರ್ಭಧಾರಣೆಯ ಚಿಕಿತ್ಸೆಗಳು ಶಿಶುರಹಿತ ಕೋಟ್ಯಂತರ ದಂಪತಿಗಳ ಪಾಲಿಗೆ ವರವಾಗಿವೆಯಾದರೂ ಈ ಚಿಕಿತ್ಸೆಗಳ ಪ್ರಕ್ರಿಯೆಗಳು ನೈಸರ್ಗಿಕ ಗರ್ಭಧಾರಣೆಗಿಂತ ಕ್ಲಿಷ್ಟ ಮತ್ತು ಜಟಿಲವಾಗಿದ್ದು, ಸಂತೃಪ್ತಿದಾಯಕವಲ್ಲದ ಫ‌ಲಿತಾಂಶಗಳು ಉಂಟಾಗುವ ಸಾಧ್ಯತೆಗಳೂ ಇರುತ್ತವೆ.

ಅಂಡವನ್ನು ಶೈತ್ಯೀಕರಿಸಿ ಕಾಯ್ದಿರಿಸುವ ತಂತ್ರವೂ ಇದೆ; ಆದರೆ ಇದು ತುಂಬಾ ದುಬಾರಿ, ಇದರಲ್ಲಿ ಮಹಿಳೆಯು ಐವಿಎಫ್ನಿಂದ ಮಾತ್ರ ಗರ್ಭಧರಿಸುವಂತೆ ಮಾಡಬಹುದು, ಯಶಸ್ವಿಯಾಗುವುದು ಖಚಿತವಲ್ಲ.

ಚಿಕಿತ್ಸೆಯ ಆಯ್ಕೆಗಳು : 

ಸಂತಾನೋತ್ಪತ್ತಿ ಔಷಧಗಳು :

ನಿಯಮಿತವಾಗಿ ಅಂಡ ಉತ್ಪತ್ತಿ ಆಗದೆ ಇರುವ ಮಹಿಳೆಯರಿಗೆ ನೆರವಾಗುವ ಔಷಧಗಳಿವೆ. ಇವುಗಳಲ್ಲಿ ಕ್ಲೊಮಿಫೀನ್‌ ಸಿಟ್ರೇಟ್‌ ಲೆಟ್ರೊಝೋಲ್‌ ಸಾಮಾನ್ಯವಾಗಿ ಬಳಕೆಯಾಗುವ ಔಷಧ. ಇದು ಇಂಥ ಔಷಧಗಳ ಪೈಕಿ ಹೆಚ್ಚು ಪರಿಣಾಮಕಾರಿ ಮತ್ತು ಮಿತವ್ಯಯಿ.

ಚುಚ್ಚುಮದ್ದಾಗಿ ನೀಡಬಹುದಾದ ಹಾರ್ಮೋನ್‌ಗಳು :

ಮೇಲೆ ಹೇಳಲಾದ ಔಷಧಗಳನ್ನು ಆರು ತಿಂಗಳುಗಳ ಕಾಲ ಪ್ರಯೋಗಿಸಿ ನೋಡಿದ ಬಳಿಕವೂ ಗರ್ಭ ಧರಿಸದ ಮಹಿಳೆಯರಿಗೆ ಅಂಡ ಉತ್ಪತ್ತಿಯನ್ನು ಪ್ರಚೋದಿಸುವ ಹಾರ್ಮೋನ್‌ಗಳನ್ನು ಇಂಜೆಕ್ಷನ್‌ ರೂಪದಲ್ಲಿ ಒದಗಿಸುವುದನ್ನು ಶಿಫಾರಸು ಮಾಡಲಾಗುತ್ತದೆ.

ಫಾಲೊಪಿಯನ್‌ ಕೊಳವೆಯಲ್ಲಿ ಅಡೆತಡೆ ಇದ್ದರೆ ಶಸ್ತ್ರಚಿಕಿತ್ಸೆ : 

ಕೆಲವು ಮಹಿಳೆಯರಲ್ಲಿ ಫಾಲೊಪಿಯನ್‌ ಕೊಳವೆಯಲ್ಲಿ ಇರುವ ಅಡೆತಡೆ ಅಥವಾ ಗಾಯದಿಂದಾಗಿ ಗರ್ಭಧಾರಣೆ ಆಗುವುದಿಲ್ಲ. ಎಂಡೊಮೆಟ್ರಿಯೋಸಿಸ್‌ (ಗರ್ಭಕೋಶದ ಹೊರಗೆ ಯುಟೆರೈನ್‌ ಭಿತ್ತಿಯ ಅಂಗಾಂಶಗಳು ಅಧಿಕ ಬೆಳವಣಿಗೆಯಾಗುವುದು), ಹಿಂದೆ ನಡೆಸಲಾದ ಶಸ್ತ್ರಚಿಕಿತ್ಸೆಗಳು ಅಥವಾ ಹಿಂದೆ ಉಂಟಾದ ಪೆಲ್ವಿಕ್‌ ಸೋಂಕುಗಳಿಂದಾಗಿ ಆದ ಹಾನಿ ಇದಕ್ಕೆ ಕಾರಣವಾಗಿರಬಹುದು.

ಇಂಟ್ರಾ ಯುಟೆರೈನ್‌ ಕೃತಕ ಗರ್ಭಧಾರಣೆ (ಐಯುಐ) : 

ಇಂಟ್ರಾ ಯುಟೆರೈನ್‌ ಕೃತಕ ಗರ್ಭಧಾರಣೆ (ಐಯುಐ)ಯನ್ನು ವಿವಿಧ ಬಂಜೆತನಗಳಿಗೆ ಚಿಕಿತ್ಸೆಯಾಗಿ ಉಪಯೋಗಿಸಲಾಗುತ್ತದೆ. ಈ ತಂತ್ರದಲ್ಲಿ ಅಂಡ ಬಿಡುಗಡೆಯ ಸಮಯದಲ್ಲಿ ವೀರ್ಯಾಣುವನ್ನು ನೇರವಾಗಿ ಗರ್ಭಕೋಶದ ಒಳಗೆ ಇರಿಸುವ ಮೂಲಕ ವೀರ್ಯಾಣು ಅಂಡವನ್ನು ಮುಟ್ಟಲು ತೆಗೆದುಕೊಳ್ಳುವ ಅಂತರವನ್ನು ಕಡಿಮೆ ಮಾಡಲಾಗುತ್ತದೆ. ಐಯುಐ ತಂತ್ರವನ್ನು ಸಾಮಾನ್ಯವಾಗಿ ಅಂಡ ಬಿಡುಗಡೆಯನ್ನು ಪ್ರಚೋದಿಸುವ ಔಷಧಗಳ ಜತೆಗೆ ಪ್ರಯೋಗಿಸಲಾಗುತ್ತದೆ. ಈ ತಂತ್ರದಲ್ಲಿ ಗರ್ಭಧಾರಣೆಯಾಗುವ ದರ ಐವಿಎಫ್ಗಿಂತ ಕಡಿಮೆ, ಆದರೆ ಇದು ಐವಿಎಫ್ಗಿಂತ ಮಿತವ್ಯಯಿ ಮತ್ತು ಶಸ್ತ್ರಚಿಕಿತ್ಸಾತ್ಮಕ ಕ್ರಮಗಳು ಕಡಿಮೆ.

ಇನ್‌ವಿಟ್ರೊ ಫ‌ರ್ಟಿಲೈಸೇಶನ್‌ (ಐವಿಎಫ್) : 

ಇನ್‌ವಿಟ್ರೊ ಫ‌ರ್ಟಿಲೈಸೇಶನ್‌ ಅಥವಾ ಪ್ರನಾಳ ಶಿಶು ತಂತ್ರದಲ್ಲಿ ಅಂಡ ಮತ್ತು ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಸಂಯೋಜಿಸಲಾಗುತ್ತದೆ ಮತ್ತು ಇದನ್ನು ಇತರ ಕೃತಕ ಗರ್ಭಧಾರಣೆಯ ತಂತ್ರಗಳು ವಿಫ‌ಲವಾದಲ್ಲಿ ಅವಲಂಬಿಸಬಹುದಾಗಿದೆ. ಪ್ರಯೋಗಾಲಯದಲ್ಲಿ ಸೃಷ್ಟಿಸಲಾದ ಭ್ರೂಣವನ್ನು ಬಳಿಕ ಮಹಿಳೆಯ ಗರ್ಭಕೋಶದಲ್ಲಿ ಇರಿಸಲಾಗುತ್ತದೆ. ಐವಿಎಫ್ ಜತೆಗೆ ಹಾರ್ಮೋನ್‌ ಇಂಜೆಕ್ಷನ್‌ ಚಿಕಿತ್ಸೆಯನ್ನೂ ನಡೆಸಲಾಗುತ್ತದೆ, ಮಹಿಳೆಯಿಂದ ಅಂಡವನ್ನು ಪಡೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಿರುತ್ತದೆ, ಹೀಗಾಗಿ ಇದು ದುಬಾರಿಯಾಗಿರುತ್ತದೆ.

ಐಸಿಎಸ್‌ಐ ಜತೆಗೆ ಐವಿಎಫ್ : 

ಪುರುಷ ಸಂಗಾತಿಯ ವೀರ್ಯಾಣುಗಳಲ್ಲಿ ಸಮಸ್ಯೆ ಇರುವುದು ತಿಳಿದುಬಂದಿದ್ದರೆ ಐವಿಎಫ್ ಜತೆಗೆ ಇಂಟ್ರಾಸೈಟೊಪ್ಲಾಸ್ಮಿಕ್‌ ಸ್ಪರ್ಮ್ ಇಂಜೆಕ್ಷನ್‌ (ಐಸಿಎಸ್‌ಐ) ಎನ್ನುವ ಚಿಕಿತ್ಸೆಯನ್ನು ಐವಿಎಫ್ ಜತೆಗೆ ಶಿಫಾರಸು ಮಾಡಲಾಗುತ್ತದೆ. ಇದು ಪ್ರಯೋಗಾಲಯ ಆಧಾರಿತ ಕೃತಕ ಗರ್ಭಧಾರಣೆ ತಂತ್ರಜ್ಞಾನವಾಗಿದ್ದು, ಅಂಡದ ಒಳಗೆ ಒಂದು ವೀರ್ಯಾಣುವನ್ನು ನೇರವಾಗಿ ಇರಿಸಲಾಗುತ್ತದೆ. ಬಳಿಕ ಉತ್ಪತ್ತಿಯಾಗುವ ಭ್ರೂಣವನ್ನು ಐವಿಎಫ್ ತಂತ್ರದಂತೆಯೇ ಮಹಿಳೆಯ ಗರ್ಭಕೋಶದೊಳಗೆ ಇರಿಸಲಾಗುತ್ತದೆ.

ದಾನಿಯಿಂದ ಪಡೆದ ಅಂಡದೊಂದಿಗೆ ಐವಿಎಫ್ : 

ಹಿರಿಯ ಮಹಿಳೆಯರು, ಅಂಡದ ಗುಣಮಟ್ಟ ಕಳಪೆಯಾಗಿರುವವರು, ಈ ಹಿಂದಿನ ಐವಿಎಫ್ ಪ್ರಕ್ರಿಯೆಗಳಿಂದ ಗರ್ಭ ಧರಿಸಲು ವಿಫ‌ಲರಾದವರು ದಾನಿಯಿಂದ ಪಡೆದ ಅಂಡದೊಂದಿಗೆ ತನ್ನ ಪುರುಷ ಸಂಗಾತಿಯ ವೀರ್ಯಾಣುವನ್ನು ಸಂಯೋಜಿಸುವ ಐವಿಎಫ್ ಪ್ರಯತ್ನಿಸಬಹುದು. ಇದರ ಪರಿಣಾಮವಾದ ಶಿಶುವಿನ ಗರ್ಭವನ್ನು ತಾಯಿ ತನ್ನ ಗರ್ಭದಲ್ಲಿ ಹೊತ್ತರೂ ಜೀವಶಾಸ್ತ್ರೀಯವಾಗಿ ಅದು ಆಕೆಗೆ ಸಂಬಂಧಿಸಿರದೆ ತಂದೆಗೆ ಮಾತ್ರ ಸಂಬಂಧಿಸಿರುತ್ತದೆ. ದಾನಿಯಿಂದ ಪಡೆದ ತಾಜಾ ಅಂಡವನ್ನು ಉಪಯೋಗಿಸಿ ನಡೆಸುವ ಐವಿಎಫ್ನ ಯಶಸ್ಸಿನ ದರ ಹೆಚ್ಚಿದ್ದು, ಶೇ. 55ರಷ್ಟು ಸಜೀವ ಶಿಶು ಜನನವಾಗುತ್ತದೆ.

ಬಾಡಿಗೆ ತಾಯ್ತನ (ಸರೊಗೇಟ್‌ ಪ್ರಗ್ನೆನ್ಸಿ) : 

ಅವಧಿಪೂರ್ಣ ಗರ್ಭಧಾರಣೆಯ ಸಮಸ್ಯೆಯುಳ್ಳ ಮಹಿಳೆಯರು ಬಾಡಿಗೆ ತಾಯ್ತನದ ಆಯ್ಕೆಯನ್ನು ಪ್ರಯತ್ನಿಸಬಹುದಾಗಿದೆ. ಸಾಂಪ್ರದಾಯಿಕ ಬಾಡಿಗೆ ಗರ್ಭಧಾರಣೆಯಲ್ಲಿ ಪುರುಷ ಸಂಗಾತಿಯ ವೀರ್ಯಾಣುವನ್ನು ಬಾಡಿಗೆ ತಾಯಿಗೆ ಕೃತಕ ಗರ್ಭಧಾರಣೆ ಮಾಡಿಸುವುದು ಒಳಗೊಂಡಿರುತ್ತದೆ.

ಜೆಸ್ಟೇಶನಲ್‌ ಸರೋಗೆಸಿಯು ಇನ್ನೊಂದು ಆಯ್ಕೆಯಾಗಿದೆ. ಇದರಲ್ಲಿ ಐವಿಎಫ್ ಮೂಲಕ ದಂಪತಿಯದೇ ಭ್ರೂಣವನ್ನು ಸೃಷ್ಟಿಸಿ ಅದನ್ನು ಬಾಡಿಗೆ ತಾಯಿಯ ಗರ್ಭದಲ್ಲಿ ಸ್ಥಾಪಿಸಲಾಗುತ್ತದೆ. ಈ ತಂತ್ರದಲ್ಲಿ ಶಿಶುವು ಜೀವಶಾಸ್ತ್ರೀಯವಾಗಿ ದಂಪತಿಗೆ ಸಂಬಂಧಿಸಿದುದೇ ಆಗಿರುತ್ತದೆ.

ಗರ್ಭಧಾರಣೆಯ ಆಯ್ಕೆಗಳು :

ಗರ್ಭಧಾರಣೆಯ ಸಮಸ್ಯೆ ಹೊಂದಿರುವವರಿಗೆ ನೆರವಾಗಬಲ್ಲ ಅನೇಕ ಆಯ್ಕೆಗಳಿವೆ. ದಂಪತಿಯ ವೈಯಕ್ತಿಕ ಸ್ಥಿತಿಗತಿ ಮತ್ತು ಯಾವ ಕಾರಣದಿಂದ ಬಂಜೆತನ ಉಂಟಾಗಿದೆ ಎಂಬುದನ್ನು ಈ ಆಯ್ಕೆಗಳು ಅವಲಂಬಿಸಿರುತ್ತವೆ. ಕೆಲವೊಮ್ಮೆ ಒಬ್ಬರಿಗೆ ಮಾತ್ರ ಚಿಕಿತ್ಸೆಯ ಅಗತ್ಯವಿರುತ್ತದೆ, ಇನ್ನು ಕೆಲವೊಮ್ಮೆ ಇಬ್ಬರಿಗೂ ಸಂಯೋಜಿತ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ.

ಪುರುಷ ಬಂಜೆತನ : 

ಬಂಜೆತನ ಹೊಂದಿರುವ ಸಂಗಾತಿಗಳ ಶೇ. 40ರಷ್ಟು ಪ್ರಕರಣಗಳಲ್ಲಿ ಪುರುಷ ಬಂಜೆತನವೇ ಕಾರಣವಾಗಿರುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು, ವೀರ್ಯ ಅಸಹಜವಾಗಿ ಉತ್ಪತ್ತಿಯಾಗುವುದು, ವೀರ್ಯಾಣು ಮಾರ್ಗದಲ್ಲಿ ಅಡೆತಡೆ ಇರುವುದು ಅಥವಾ ವೀರ್ಯಾಣುಗಳ ಚಲನಶೀಲತೆ ಕಡಿಮೆ ಇರುವುದು ಪುರುಷ ಬಂಜೆತನದ ಕಾರಣಗಳಲ್ಲಿ ಕೆಲವು.

ಸ್ತ್ರೀ ಬಂಜೆತನ : 

ಬಂಜೆತನದ ಶೇ. 40 ಪ್ರಕರಣಗಳಲ್ಲಿ ಸ್ತ್ರೀ ಸಂಬಂಧಿ ಕಾರಣಗಳಿರುತ್ತವೆ. ಅಂಡ ಉತ್ಪತ್ತಿ ಅಸಹಜವಾಗಿರುವುದು ಅಥವಾ ಆಗದೆ ಇರುವುದು, ಫಾಲೊಪಿಯನ್‌ ಕೊಳವೆಯಲ್ಲಿ ಅಡಚಣೆ ಅಥವಾ ಪ್ರಜನನ ಅಂಗಗಳಲ್ಲಿ ಅಸಹಜತೆಗಳಿರುವುದು ಕೆಲವು ಕಾರಣಗಳು. ಇನ್ನುಳಿದ ಶೇ. 20ರಷ್ಟು ಪ್ರಕರಣಗಳಲ್ಲಿ ಬಂಜೆತನಕ್ಕೆ ನಿರ್ದಿಷ್ಟ ಕಾರಣಗಳು ಇರುವುದಿಲ್ಲ.

(ಮುಂದಿನ ವಾರಕ್ಕೆ)

ಡಾ| ವಿದ್ಯಾಶ್ರೀ  ಕಾಮತ್‌

ಕನ್ಸಲ್ಟಂಟ್‌, ಒಬಿಜಿವೈ ಮತ್ತು ಲ್ಯಾಪರೊಸ್ಕೊಪಿಕ್‌ ಸರ್ಜನ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

 

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.