ವಿಂಡೀಸಿಗೆ ಮುನ್ನಡೆ ತಂದಿತ್ತ ಬ್ರಾತ್‌ವೇಟ್
Team Udayavani, Aug 14, 2021, 10:14 PM IST
ಕಿಂಗ್‌ಸ್ಟನ್ (ಜಮೈಕಾ): ಪ್ರವಾಸಿ ಪಾಕಿಸ್ಥಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡು ರನ್ನಿಗೆ ಎರಡು ವಿಕೆಟ್ ಕಳೆದುಕೊಂಡು ತೀವ್ರ ಒತ್ತಡದಲ್ಲಿದ್ದ ವೆಸ್ಟ್ ಇಂಡೀಸಿಗೆ ನಾಯಕ ಕ್ರೆಗ್ ಬ್ರಾತ್‌ವೇಟ್ ಇನ್ನಿಂಗ್ಸ್ ಲೀಡ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 251 ರನ್ ಮಾಡಿರುವ ವಿಂಡೀಸ್, 34 ರನ್ನುಗಳ ಅಲ್ಪ ಮುನ್ನಡೆಯಲ್ಲಿದೆ. ಪಾಕ್ 217ಕ್ಕೆ ಆಲೌಟ್ ಆಗಿತ್ತು.
ಆರಂಭಕಾರನೂ ಆಗಿರುವ ಬ್ರಾತ್‌ವೇಟ್ ಪಾಕ್ ಬೌಲಿಂಗ್ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 97 ರನ್ ಬಾರಿಸಿದರು. ಶತಕಕ್ಕೆ ಇನ್ನೇನು 3 ರನ್ ಬೇಕೆನ್ನುವಾಗ ರನೌಟ್ ದುರದೃಷ್ಟಕ್ಕೆ ಸಿಲುಕಿದರು. ಆಗಷ್ಟೇ ವಿಂಡೀಸ್ ಪಾಕಿಸ್ಥಾನದ ಮೊತ್ತವನ್ನು ಹಿಂದಿಕ್ಕಿತ್ತು.
ಬ್ರಾತ್‌ವೇಟ್ 221 ಎಸೆತಗಳಿಂದ ಕಪ್ತಾನನ ಇನ್ನಿಂಗ್ಸ್ ಕಟ್ಟಿದರು. ಹೊಡೆದದ್ದು 12 ಬೌಂಡರಿ. 100 ರನ್ ತಲಪುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಮತ್ತೂಮ್ಮೆ ಸಂಕಟಕ್ಕೆ ಸಿಲುಕಿದ ತಂಡವನ್ನು ಬ್ರಾತ್‌ವೇಟ್-ಜಾಸನ್ ಹೋಲ್ಡರ್ ಸೇರಿಕೊಂಡು ಮೇಲೆತ್ತಿದರು. 31 ಓವರ್‌ಗಳನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಈ ಜೋಡಿ 6ನೇ ವಿಕೆಟಿಗೆ 96 ರನ್ ಪೇರಿಸಿತು. ಹೋಲ್ಡರ್ 108 ಎಸೆತ ಎದುರಿಸಿ 58 ರನ್ ಕೊಡುಗೆ ಸಲ್ಲಿಸಿದರು (10 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-217. ವೆಸ್ಟ್ ಇಂಡೀಸ್-8 ವಿಕೆಟಿಗೆ 251 (ಬ್ರಾತ್‌ವೇಟ್ 97, ಹೋಲ್ಡರ್ 58, ಚೇಸ್ 21, ಅಬ್ಟಾಸ್ 42ಕ್ಕೆ 3, ಅಫ್ರಿದಿ 59ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Cricket; ವೇಗಿ ಸಿದ್ದಾರ್ಥ್ ಕೌಲ್ ನಿವೃತ್ತಿ
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.