“ಪ್ಲಾಸ್ಟಿಕ್ ಮುಕ್ತ ಭಾರತ’ಕ್ಕೆ ಮುನ್ನುಡಿ
Team Udayavani, Aug 15, 2021, 6:30 AM IST
2022ರ ಹೊತ್ತಿಗೆ ಭಾರತವನ್ನು ಮರುಬಳಕೆಯಾಗದ ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಲು ಕೇಂದ್ರ ಸರಕಾರ ಹೊಸ ಹೆಜ್ಜೆಗಳನ್ನಿಟ್ಟಿದೆ. ಅದಕ್ಕಾಗಿ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಾವಳಿಗಳಲ್ಲಿ ತಿದ್ದುಪಡಿ ತರಲಾಗಿದೆ. ಈ ಮೂಲಕ, 2019ರ ವಿಶ್ವಸಂಸ್ಥೆಯ ಪರಿಸರ ಸಂರಕ್ಷಣಾ ಮಹಾ ಸಮ್ಮೇಳನದಲ್ಲಿ ಭಾರತ, ವಿಶ್ವಸಮುದಾಯಕ್ಕೆ ನೀಡಿದ್ದ ಆಶ್ವಾಸನೆ ಅನುಷ್ಠಾನಕ್ಕೆ ಸಜ್ಜಾಗಿದೆ.
ಪ್ಲಾಸ್ಟಿಕ್ ಬ್ಯಾಗ್‌ಗೆ 2 ಹಂತದ ನಿರ್ಬಂಧ :
ಬ್ಯಾಗ್‌ಗಳ ದಪ್ಪ 50 ಮೈಕ್ರಾನ್ಸ್ ಗಿಂತ 75 ಮೈಕ್ರಾನ್‌ಗೆ ಏರಿಕೆ ಈ ಮಾರ್ಗಸೂಚಿಗಳು ಎರಡು ಹಂತಗಳಲ್ಲಿ ಜಾರಿಗೊಳ್ಳಲಿದೆ. ಮೊದಲ ಹಂತದಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ 50 ಮೈಕ್ರಾನ್ಸ್‌ನಷ್ಟು ದಪ್ಪವಾಗಿರುವ ಪ್ಲಾಸ್ಟಿಕ್ ಬ್ಯಾಗುಗಳು ಇದೇ ಸೆ.30ರ ನಂತರ ನಿಷೇಧಕ್ಕೊಳಗಾಗಲಿವೆ. ಈ ಬ್ಯಾಗ್‌ಗಳ ಕನಿಷ್ಠ ದಪ್ಪವನ್ನು 75 ಮೈಕ್ರಾನ್ಸ್‌ಗಳಿಗೆ ಹೆಚ್ಚಿಸಲಾಗಿದ್ದು, ಅ.1ರಿಂದ ಆ ಗುಣಮಟ್ಟದ ಬ್ಯಾಗುಗಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಮಾರಾಟಬೇಕೆಂದು ಆದೇಶಿಸಲಾಗಿದೆ.
ಮುಂದಿನ ವರ್ಷದಿಂದ 120 ಮೈಕ್ರಾನ್ಸ್ ಬ್ಯಾಗುಗಳಿಗೆ ಆದ್ಯತೆ :
75 ಮೈಕ್ರಾನ್ಸ್ ದಪ್ಪದ ಬ್ಯಾಗುಗಳ ಮಾರಾಟಕ್ಕೆ 2022ರ ಡಿ.31ರವರೆಗೆ ಮಾತ್ರವೇ ಅವಕಾಶವಿದ್ದು, 2023ರ ಜ. 1ರಿಂದ ಕೇವಲ 120 ಮೈಕ್ರಾನ್ಸ್‌ಗಳುಳ್ಳ ಬ್ಯಾಗುಗಳನ್ನೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ.
50-75 ಮೈಕ್ರಾನ್ಸ್ :
ಪ್ಲಾಸ್ಟಿಕ್ ಬ್ಯಾಗುಗಳ ದಪ್ಪ 50ರಿಂದ 75 ಮೈಕ್ರಾನ್ಸ್‌ಗೆ ಏರಿಕೆ
120 ಮೈಕ್ರಾನ್ಸ್ :
2023ರಿಂದ ಕಡ್ಡಾಯವಾಗಲಿರುವ ಪ್ಲಾಸ್ಟಿಕ್ ಬ್ಯಾಗ್‌ಗಳ ದಪ್ಪ
100 ಮೈಕ್ರಾನ್ಸ್ :
2022ರ ಜು. 1ರಿಂದ ನಿಷೇಧಕ್ಕೊಳಗಾಗಲಿರುವ ಪಿವಿಸಿ ಪೋಸ್ಟರ್‌ಗಳು
ತಿನಿಸುಗಳ ಆಕ್ಸೆಸ್ಸರಿಗೆ ನಿಷೇಧ :
ಒಮ್ಮೆ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಪರಿಕರಗಳ ಮಾರಾಟಕ್ಕೆ 2022ರ ಜು. 1ರಿಂದ ಸಂಪೂರ್ಣ ನಿಷೇಧ ಹೇರಲಾಗಿದೆ. ಕಿವಿ ಸ್ವತ್ಛಗೊಳಿಸುವ ಪ್ಲಾಸ್ಟಿಕ್ ಸ್ಟಿಕ್ ಬಡ್ಸ್, ಬಲೂನುಗಳಿಗೆ ಕಟ್ಟುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಬಾವುಟ, ಲಾಲಿಪಾಪ್ ಸ್ಟಿಕ್, ಐಸ್‌ಕ್ರೀಮ್ ಪ್ಲಾಸ್ಟಿಕ್ ಸ್ಟಿಕ್, ಅಲಂಕಾರಗಳಿಗಾಗಿ ಬಳಸುವ ಥರ್ಮೋಕೋಲ್ ಮುಂತಾದವು ಸಂಪೂರ್ಣವಾಗಿ ನಿಷೇಧಿಸಲ್ಪಡಲಿವೆ.
ತಟ್ಟೆ, ಲೋಟಕ್ಕೂ ಬಂತು ಸಂಚಕಾರ! :
ಸಮಾರಂಭಗಳಲ್ಲಿ ಊಟ- ತಿಂಡಿಗಳಿಗೆ ಬಳಸುವ ತೆಳು ಪ್ಲಾಸ್ಟಿಕ್‌ನಿಂದ ತಯಾರಾದ ಪ್ಲೇಟ್, ಲೋಟ, ಫೋರ್ಕ್, ಚಮಚ, ಚಾಕು, ಎಳನೀರು ಸ್ಟ್ರಾ, ಟ್ರೇ, ತಿನಿಸು – ಸ್ವೀಟ್ ಪ್ಯಾಕಿಂಗ್‌ಗೆ, ಬಳಸುವ ರ್ಯಾಪಿಂಗ್‌ಗೆ ಬಳಸುವ ಹಾಳೆ, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕ್‌ಗಳ ಮೇಲಿನ ಪ್ಲಾಸ್ಟಿಕ್ ರ್ಯಾಪರ್ ಹಾಗೂ 100 ಮೈಕ್ರಾನ್ಸ್‌ಗಿಂತ ಕಡಿಮೆ ಗಾತ್ರದ ಪಿವಿಸಿ ಪೋಸ್ಟರ್‌ಗಳು ಕೂಡ 2022ರ ಜು. 1ರಿಂದ ನಿಷೇಧಿಸ ಲ್ಪಡಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.