ಆಧಾರ್ ತಿದ್ದುಪಡಿಗೆ ಬೀಡಿ ಕಾರ್ಮಿಕರ ಪರದಾಟ
Team Udayavani, Aug 15, 2021, 7:20 AM IST
ಮಂಗಳೂರು: ಆಧಾರ್ ಕಾರ್ಡ್‌ನಲ್ಲಿ ಜನ್ಮದಿನಾಂಕ ತಿದ್ದುಪಡಿ ಮಾಡಲು ಅವಿದ್ಯಾವಂತ ಬೀಡಿ ಕಾರ್ಮಿಕರು ಪರದಾಡುತ್ತಿದ್ದು ಪಿಎಫ್ ಹಣ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
ಪಿಎಫ್ (ಕಾರ್ಮಿಕರ ಭವಿಷ್ಯನಿಧಿ) ಕಚೇರಿಯಲ್ಲಿರುವ ದಾಖಲೆಗಳು ಮತ್ತು ಬೀಡಿ ಕಾರ್ಮಿಕರ ಆಧಾರ್ ಕಾರ್ಡ್ ನಲ್ಲಿರುವ ಹುಟ್ಟಿದ ದಿನಾಂಕದಲ್ಲಿ ವ್ಯತ್ಯಾಸ ಇರುವುದರಿಂದ ಸಮಸ್ಯೆ ಉಂಟಾಗಿದೆ. ನೋಂದಣಿ ಮಾಡಿಕೊಳ್ಳುವಾಗ ಅನೇಕ ಮಂದಿ ಅಂದಾಜಿಗೆ ಜನ್ಮದಿನಾಂಕ ದಾಖಲಿಸಿದ್ದರು. ಬಳಿಕ ಆಧಾರ್‌ನಲ್ಲಿ ಇನ್ನೊಂದು ಜನ್ಮದಿನಾಂಕ ನಮೂದಿಸಿದ್ದರು. ಇದೀಗ ಪಿಎಫ್ ಖಾತೆಯ ವ್ಯವಹಾರಕ್ಕೆ ಆಧಾರ್ ಕಡ್ಡಾಯ ಮಾಡಿರುವುದರಿಂದ ಸಂಕಷ್ಟ ಎದುರಾಗಿದೆ.
ತಿದ್ದುಪಡಿಗೆ ಅಲೆದಾಟ :
ಶಾಲೆಯ ದಾಖಲೆಗಳಿದ್ದರೆ ಅದರ ಆಧಾರದಲ್ಲಿ ಗೆಜೆಟೆಡ್ ಅಧಿಕಾರಿಗಳು ನೀಡುವ ದೃಢೀಕರಣ ಪತ್ರಗಳನ್ನು ಆಧಾರ್ ಕೇಂದ್ರಗಳಿಗೆ ನೀಡಿದರೆ ಆಧಾರ್ ತಿದ್ದುಪಡಿಯಾಗುತ್ತದೆ. ಆದರೆ ಬೀಡಿ ಕಾರ್ಮಿಕರಲ್ಲಿ ಅನೇಕ ಮಂದಿ ಅವಿದ್ಯಾವಂತರು. ಅಂಥವರು ಆಧಾರ್ ತಿದ್ದುಪಡಿಗಾಗಿ ಕಚೇರಿಯಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಪಿಎಫ್ ಕಚೇರಿಯಲ್ಲಿರುವ ದಾಖಲೆಗಳಲ್ಲಿ ಇರುವಂತೆ ತಿದ್ದುಪಡಿ ಮಾಡಿದ ಆಧಾರ್‌ಗಳನ್ನು ನೀಡಲು ಆಗಸ್ಟ್ ಗಡುವು ನೀಡಲಾಗಿದೆ. ಇದು ಬೀಡಿ ಕಾರ್ಮಿಕರಲ್ಲಿ ಆತಂಕ ಉಂಟು ಮಾಡಿದೆ.
ದಾಖಲೆ ನೀಡಿದರೆ ತಿದ್ದುಪಡಿ :
ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕೃತ ದಾಖಲೆ ನೀಡಿದವರಿಗೆ ಆಧಾರ್‌ನಲ್ಲಿ ಜನ್ಮದಿನಾಂಕ ತಿದ್ದುಪಡಿ ಮಾಡಿಕೊಡಲಾಗುತ್ತಿದೆ. ಕೆಲವರು ಈ ಹಿಂದೆ ಬೇರೆ ಕಾರಣಕ್ಕಾಗಿ ಜನ್ಮದಿನಾಂಕ ತಿದ್ದುಪಡಿ ಮಾಡಿಸಿಕೊಂಡಿದ್ದು ಮತ್ತೆ ತಿದ್ದುಪಡಿಗೆ ಅವಕಾಶವಿಲ್ಲ. – ರಾಮಕೃಷ್ಣ , ನೋಡೆಲ್ ಅಧಿಕಾರಿ, ದಕ್ಷಿಯ ಕನ್ನಡ ಜಿಲ್ಲೆ
ಗಡುವು ವಿಸ್ತರಿಸಿ :
ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಬೀಡಿಕಾರ್ಮಿಕರಿದ್ದು ಸಾವಿರಾರು ಮಂದಿಗೆ ಸಮಸ್ಯೆಯಾಗಿದೆ. ಕೊನೆಯ ದಿನಾಂಕವನ್ನು ಡಿಸೆಂಬರ್ ವರೆಗೆ ವಿಸ್ತರಿಸಿದರೆ ಹೆಚ್ಚಿನವರ ಸಮಸ್ಯೆ ಬಗೆಹರಿಯಬಹುದು. ಬೀಡಿ ಕಟ್ಟುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಧಾರವಾಗಿಟ್ಟು ಅಧಿಕಾರಿಗಳು ದೃಢೀಕರಣ ಪತ್ರ ನೀಡಿದರೆ ಸಮಸ್ಯೆ ಬಗೆಹರಿಯಬಹುದು. – ಬಾಲಕೃಷ್ಣ ಶೆಟ್ಟಿ , ಪ್ರಧಾನ ಕಾರ್ಯದರ್ಶಿ, ದ.ಕ. ಬೀಡಿ ವರ್ಕರ್ ಫೆಡರೇಶನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.