![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 15, 2021, 7:52 AM IST
ಮೇಷ: ಸರಕಾರಿ ಕಾರ್ಯಗಳಲ್ಲಿ ಸಫಲತೆ. ಪ್ರಯಾಣದಿಂದ ಸಂತೋಷ. ಜನಮನ್ನಣೆ ಹೆಚ್ಚಿದ ಸ್ಥಾನಮಾನ ಕೀರ್ತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ಒಳ್ಳೆಯ ಸಂಬಂಧ ಒದಗಿ ಬರುವ ಅವಕಾಶ. ದಾಂಪತ್ಯದಲ್ಲಿ ಸುಖ ವೃದ್ಧಿ.
ವೃಷಭ: ಆರೋಗ್ಯ ವೃದ್ಧಿ. ಗೃಹ, ವಾಹನ, ಭೂಮಿ ಇತ್ಯಾದಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದರಿಂದ ಸಂತೋಷ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಗುರುಹಿರಿಯರ ಉತ್ತಮ ಸಹಕಾರ ಮಾರ್ಗದರ್ಶನದ ಲಾಭ.
ಮಿಥುನ: ಸಣ್ಣ ಪ್ರಯಾಣ ಭಾಗ್ಯ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ತಿಳಿದು ನಿರ್ಣಯಿಸಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಉದ್ಯೋಗ ವ್ಯವಹಾರಗಳಲ್ಲಿ ಸಣ್ಣ ಬದಲಾವಣೆ ಸಂಭವ.
ಕರ್ಕ: ಧನಾರ್ಜನೆಗೆ ಸರಿಯಾಗಿ ಖರ್ಚಿನ ದಾರಿ ಗಳು ತೋರಿಯಾವು. ಕುಟುಂಬದಿಂದ ಉತ್ತಮ ಪ್ರೋತ್ಸಾಹ. ಆರೋಗ್ಯದ ವಿಚಾರದಲ್ಲಿ ಸರಿಯಾದ ನಿಯಮ ಪಾಲಿಸುವುದರಿಂದ ಅಭಿವೃದ್ಧಿ. ದೀರ್ಘ ಪ್ರಯಾಣಕ್ಕೆ ಅವಕಾಶ.
ಸಿಂಹ: ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಮುನ್ನಡೆ. ಅನಿರೀಕ್ಷಿತ ಧನಾಗಮನ. ಅನ್ಯರ ಮೇಲೆ ಅವಲಂಬಿತರಾಗದೇ ಕಾರ್ಯ ನಿರ್ವಹಿಸಿದರಿಂದ ಪ್ರಗತಿ. ಗುರುಹಿರಿಯರಲ್ಲಿ ಚರ್ಚೆಗೆ ಅವಕಾಶ ನೀಡದಿರಿ.
ಕನ್ಯಾ: ಆರೋಗ್ಯದ ಬಗ್ಗೆ ಗಮನಿಸಿ. ದೀರ್ಘ ಪ್ರಯಾಣ ದಿಂದ ದೇಹಾಯಾಸ ಸಂಭವ. ದಂಪತಿಗಳು, ಪಾಲುದಾರರು ಪರಸ್ಪರ ಪ್ರೋತ್ಸಾಹದಿಂದ ನೆಮ್ಮದಿ ಕಾರ್ಯ ಸಫಲತೆ. ಧನಾರ್ಜನೆಗೆ ಕೊರತೆಯಾಗದು. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ತುಲಾ: ಮನೋರಂಜನೆಯಿಂದ ಕೂಡಿದ ದಿನ. ಅನಿರೀಕ್ಷಿತ ಧನಾಗಮನ ಹೆಚ್ಚಳದ ಲಾಭ. ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಆಸ್ತಿ ವಿಚಾರಗಳಲ್ಲಿ ಪರಿಶ್ರಮ ದಿಂದ ಮುನ್ನಡೆ. ಶುಭ ಫಲ. ದಾಂಪತ್ಯದಲ್ಲಿ ಅನುರಾಗ ವೃದ್ಧಿ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಸರಕಾರಿ ಉದ್ಯೋಗ ದಲ್ಲಿ ಸಫಲತೆ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಲಾಭ. ಮಿತ್ರರ ಸಹಾಯ. ಗುರುಹಿರಿಯರ ಪ್ರೋತ್ಸಾಹ ಆಶೀರ್ವಾದ. ವಿದ್ಯಾರ್ಥಿಗಳಿಗೆ ಸಣ್ಣ ಪ್ರಯಾಣ ಸಂಭವ.
ಧನು: ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿ. ಕಾರ್ಯ ಸಾಧನೆ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಹಣಕಾಸಿನ ವಿಚಾರ ದಲ್ಲಿ ದುಡುಕ ಬೇಡಿ. ಸಾಂಸಾರಿಕ ಸುಖಕ್ಕೆ ಹೆಚ್ಚು ಪ್ರಯತ್ನಿಸಿ.
ಮಕರ: ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ. ಅಧಿಕ ಧನಾರ್ಜನೆ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ಖರ್ಚಿಗೆ ಅವಕಾಶ ನೀಡದಿರಿ. ಆಸ್ತಿ ವಿಚಾರದಲ್ಲಿ ಮುನ್ನಡೆ.
ಕುಂಭ: ಆರೋಗ್ಯ ವೃದ್ಧಿ . ಗುರುಹಿರಿಯರ ಉತ್ತಮ ಮಾರ್ಗದರ್ಶನ ಪ್ರೋತ್ಸಾಹ. ದೂರದ ವ್ಯವಹಾರದಿಂದ ಅಭಿವೃದ್ಧಿ . ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಸಹಕಾರ ನಿರೀಕ್ಷಿತ ಗುರಿ ಸಾಧನೆ. ಮನೆಯಲ್ಲಿ ಸಂತಸದ ವಾತಾವರಣ.
ಮೀನ: ಮಕ್ಕಳಿಂದ ಸಂತೋಷ, ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಗೃಹ ಆಸ್ತಿಯ ವಿಚಾರದಲ್ಲಿ ಎಚ್ಚರಿಕೆಯ ನಡೆಯಿಂದ ಶ್ರೇಯಸ್ಸು. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಶ್ರಮ. ಗುರುಹಿರಿಯರ ಆರೋಗ್ಯ ತೃಪ್ತಿದಾಯಕ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.