ಬರಪೀಡಿತ ಪ್ರದೇಶದಲ್ಲಿ ಭರಪೂರ ನೀರು
Team Udayavani, Aug 15, 2021, 2:30 PM IST
ವಿಜಯಪುರ: “ಬರ ಪೀಡಿತ ಪ್ರದೇಶ’ ಎಂಬಕರೆಯಿಸಿಕೊಳ್ಳುತ್ತಿರುವ ಜಿಲ್ಲೆಯಲ್ಲೀಗ “ನೀರಿನಸುಗ್ಗಿ’ ಶುರುವಾಗಿದೆ.ಅದರಲ್ಲೂ ನೀರಾವರಿ ಅಸಾಧ್ಯ ಎಂಬತಿಕೋಟಾ ಪರಿಸರದಲ್ಲಿ ಇದೀಗ ಎಲ್ಲೆಲ್ಲೂ ನೀರಿನಹರಿವು ಕಂಡು ಬರುತ್ತಿದೆ. ಹಳ್ಳಗಳು ತುಂಬಿಹರಿಯುತ್ತಿದ್ದರೆ, ಬತ್ತಿದ ಬಾವಿಗಳಲ್ಲಿ ಜೀವಸೆಲೆಮೂಡಿದೆ.
ತುಬಚಿ-ಬಬಲೇಶ್ವರ ಏತ ನೀರಾವರಿಯೋಜನೆ ಮೂಲಕ ಈ ಭಾಗದ ಹಳ್ಳಗಳುಇದೀಗ ಜೀವ ಪಡೆದಿವೆ. ಇಂಥ ಹಳ್ಳಗಳಿಗೆನಿರ್ಮಿಸಿರುವ ಬಾಂದಾರಗಳು ಧುಮ್ಮಿಕ್ಕಿಹರಿಯುತ್ತಿವೆ. ತಿಕೋಟಾ ಭಾಗಕ್ಕೆ ನೀರುಹರಿಸಿದ್ದರೂ ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಕನ್ನಡ ಹಳ್ಳಿಗಳಲ್ಲೂ ಇದೀಗ ಅಂರ್ತಜಲಹೆಚ್ಚಳವಾಗಿ ಗಡಿನಾಡ ಕನ್ನಡಿಗರ ಮೊಗದಲ್ಲೂಸಂತಸ ಮೂಡಿದೆ.ತಿಕೋಟಾ ಪರಿಸರದ ಕಳ್ಳಕವಟಗಿ,ಬಾಬಾನಗರ ಭಾಗದ ಹಳ್ಳಕ್ಕೆ ನಿರ್ಮಿಸಿರುವಹಲವು ಬಾಂದಾರುಗಳು ತುಬಚಿ- ಬಬಲೇಶ್ವರ ಏತ ನೀರಾವರಿ ಮುಖ್ಯ ನಾಲೆ ಮೂಲಕ ವಿವಿಧಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಈ ಹಂತದಲ್ಲಿ ಹೆಚ್ಚುವರಿ ನೀರು ಹಳ್ಳಗಳಿಗೆಹರಿಯುತ್ತಿದ್ದು, ಬಾಬಾನಗರ-ಕಳ್ಳಕವಟಗಿಗ್ರಾಮಕ್ಕೆ ಇರುವ ಹಳ್ಳಗಳಿಗೆ ಹಲವಾರುಬಾಂದಾರಗಳನ್ನು ಅಡ್ಡಲಾಗಿ ಕಟ್ಟಲಾಗಿದೆ.ಎಲ್ಲ ಬಾಂದಾರಗಳು ಜಲಪಾತದಂತೆ ತುಂಬಿಹರಿಯುತ್ತಿವೆ.ಕುಡಿಯುವ ನೀರಿನ ಬ್ಯಾರೆಲ್‌ಗಳಿಗೆ ಬೀಗಹಾಕಿ ಸಂರಕ್ಷಿಸಿಕೊಳ್ಳುವಂಥ ದುಃಸ್ಥಿತಿಯಲ್ಲಿದ್ದತಿಕೋಟಾ ಪರಿಸರದ ಹಳ್ಳಗಳಲ್ಲಿ ಇದೀಗ”ನೀರಿನ ಸುಗ್ಗಿ’ ಶುರುವಾಗಿದೆ.
ಹೀಗಾಗಿ ರಫ್ತುಗುಣಮಟ್ಟದ ದ್ರಾಕ್ಷಿ, ದಾಳಿಂಬೆ ಬೆಳೆಯುತ್ತಿರುವತಿಕೋಟಾ ಭಾಗದ ರೈತರ ಮೊಗದಲ್ಲೀಗಮಂದಹಾಸ ಮೂಡಿದೆ.ಕೇವಲ ಕೆರೆ ತುಂಬಿಸುವ ಹಾಗೂ ಹಳ್ಳಗಳಿಗೆನೀರು ಹರಿಸುವ ಕಾರ್ಯದಿಂದ ತಿಕೋಟಾಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಬತ್ತಿದ್ದತೆರೆದ ಹಾಗೂ ಕೊಳವೆ ಬಾವಿಗಳು ಮರುಜೀವಪಡೆದಿವೆ. ಅಲ್ಪ ಸ್ವಲ್ಪ ನೀರು ಚಿಮ್ಮುತ್ತಿದ್ದ ಕೊಳವೆಬಾವಿಗಳ ಪಂಪ್‌ಗ್ಳು ಇದೀಗ ಸ್ವಯಂ ತುಂಬಿಹರಿಯುವಷ್ಟು ಸಜೀವವಾಗಿವೆ.
ಪರಿಣಾಮವಿದ್ಯುತ್ ಅಗತ್ಯವೇ ಇಲ್ಲದಂತೆ ಕೊಳವೆಬಾವಿಗಳು ತುಂಬಿ ಹರಿಯುತ್ತಿವೆ.ಈ ನೀರು ಕರ್ನಾಟಕ ಅಲ್ಲದೇ ಅಲ್ಲದೇಮಹಾರಾಷ್ಟ್ರದ ಕೆಲ ಗ್ರಾಮಗಳಿಗೆ ಹಳ್ಳದ ಮೂಲಕಹೋಗುತ್ತವೆ. ಇದರಿಂದ ಅಲ್ಲಿಯ ರೈತರಿಗೂಅನುಕೂಲವಾಗಿದೆ. ಬಬಲೇಶ್ವರ ಕ್ಷೇತ್ರದಶಾಸಕ ಎಂ.ಬಿ.ಪಾಟೀಲ ಅವರ ರಾಜಕೀಯಇಚ್ಛಾಶಕ್ತಿಯಿಂದ ನಾವು ನೀರು ಕಾಣುವಂತಾಗಿದೆ.ಸಿದ್ದೇಶ್ವರ ಶ್ರೀಗಳು ಈ ಭಾಗಕ್ಕೆ ಬೊಗಸೆನೀರು ನೀಡಿದರೆ ಕ್ಯಾಲಿಫೋನಿರ್ಯಾಗಿಂತಹೆಚ್ಚು ಶಕ್ತಿಶಾಲಿಯಾಗಿ ಹೊರ ಹೊಮ್ಮಲಿದೆಎಂದಿದ್ದ ಮಾತನ್ನು ಎಂ.ಬಿ.ಪಾಟೀಲ ಅವರುನಿಜವಾಗಿಯೂ ಅನುಷ್ಠಾನಕ್ಕೆ ತಂದಿದ್ದಾರೆ.ಪರಿಣಾಮ ಬಂಜರಾಗಿದ್ದ ಕಲ್ಲು ನೆಲವೂ ಇದೀಗಸಸ್ಯ ಶ್ಯಾಮಲೆಯಾಗಿ ರೂಪುಗೊಂಡಿದೆ ಎಂದುರೈತರು ಸಂತಸ ವ್ಯಕ್ತಪಡಿಸುತ್ತಾರೆ.
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.