ಅಫ್ಘಾನ್ ನಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಸೂತ್ರದಾರರು ಯಾರು?
Team Udayavani, Aug 16, 2021, 3:58 PM IST
ಕಾಬೂಲ್: “ತಾಲಿಬ್’ ಎಂದರೆ “ವಿದ್ಯಾರ್ಥಿ ಯೋಧ’ರೆಂದು ಅರ್ಥ. 1994ರ ಸೆಪ್ಟಂಬರ್‌ನಲ್ಲಿ ಈ ಸಂಘಟನೆ ಉದಯವಾಯಿತು. 90ರ ದಶಕದ ಆರಂಭದಲ್ಲಿ ರಷ್ಯಾ ಸೇನೆ, ಅಫ್ಘಾನಿಸ್ತಾನವನ್ನು ತೊರೆಯಿತು. ಅಲ್ಲಿಂದ 2001ರವರೆಗೆ ತಾಲಿಬಾನಿಗಳ ಹಿಡಿತದಲ್ಲಿ ಕಂದಹಾರ್ ಸೇರಿದಂತೆ ಅಫ್ಘಾನಿಸ್ತಾನದ ಅನೇಕ ಪ್ರದೇಶಗಳಿದ್ದವು.
ಅಫ್ಘಾನ್ ನ ಲ್ಲಿ ಅಹ್ಮದ್ ಶಾ ಹಾಗೂ ಅಬ್ದುಲ್ ರಶೀದ್ ಎಂಬ ನಾಯಕರು ಸಮ್ಮಿಶ್ರ ಸರ್ಕಾರ ರಚಿಸಿದರಾದರೂ ತಾಲಿಬಾನಿಗಳ ಪ್ರದೇಶಗಳು ಸರ್ಕಾರದ ಹಿಡಿತದಿಂದ ಹೊರಗಿದ್ದವು. 2000ರ ಹೊತ್ತಿಗೆ, ಅಫ್ಘಾನಿಸ್ತಾನದ ಕೇವಲ ಶೇ. 10ರಷ್ಟು ಭಾಗ ಮಾತ್ರ ಸರ್ಕಾರದ ಆಡಳಿತ ಕ್ಕೊಳಪಟ್ಟಿದ್ದು, ಶೇ. 90ರಷ್ಟು ಭಾಗದಲ್ಲಿ ತಾಲಿಬಾನಿಗಳ ಆಡಳಿತವಿತ್ತು.
ತಾಲಿಬಾನ್ ಸೂತ್ರದಾರರು ಯಾರು?
ಅಮಿರ್ ಅಲ್-ಮುಮಿನಿನ್ (ಪರಮೋಚ್ಛ ನಾಯಕ): ಈತ ತಾಲಿಬಾನ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ 2016ರಿಂದ ತಾಲಿಬಾನಿಗಳ ನಾಯಕ. ರಾಜಕೀಯ, ಧಾರ್ಮಿಕ, ಉಗ್ರ ಚಟುವಟಿಕೆಗಳಲ್ಲಿ ಈತನ ನಿರ್ಧಾರವೇ ಅಂತಿಮ
ಮುಲ್ಲಾ ಅಬ್ದುಲ್ ಹಕೀಂ (ಹಿರಿಯ ನ್ಯಾಯಮೂರ್ತಿ): ತಾಲಿಬಾನ್‌ನ ನ್ಯಾಯಾಂಗ ವ್ಯವಸ್ಥೆಯ ಮೇಲ್ವಿಚಾರಕ; ದೋಹಾದಲ್ಲಿರುವ ಸಂಧಾನ ಸಮಿತಿಯ ಮುಖ್ಯಸ್ಥ
ಮುಲ್ಲಾ ಅಬ್ದುಲ್ ಘನಿ ಬರಾದರ್ (1ನೇ ಉಪ ನಾಯಕ): ತಾಲಿಬಾನ್‌ನ ಸಹ-ಸಂಸ್ಥಾಪಕ, ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ
ಮುಲ್ಲಾ ಮೊಹಮ್ಮದ್ ಯಾಕೂಬ್ (2ನೇ ಉಪನಾಯಕ): ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್‌ನ ಪುತ್ರ. ತಾಲಿಬಾನ್‌ನ ಸೇನಾ ವಿಭಾಗದ ಮುಖ್ಯಸ್ಥ
ಇದನ್ನೂ ಓದಿ:ಅಫ್ಘಾನ್ ನಲ್ಲಿ ಆತಂಕ: ಐಪಿಎಲ್ ನಲ್ಲಿ ಆಡಲಿದ್ದಾರಾ ರಶೀದ್ ಖಾನ್, ಮೊಹಮ್ಮದ್ ನಬಿ?
ರಹ್‌ಬಾರಿ ಶುರಾ (ಲೀಡರ್‌ಶಿಪ್‌ಕೌನ್ಸಿಲ್): ಇದು ತಾಲಿಬಾನ್ ಸಂಘಟನೆಯಲ್ಲಿ ಪರಮೋತ್ಛ ಸಮಿತಿ. ಸಂಘಟನೆಗೆ ಪೂರಕವಾದ ನಿರ್ಧಾರಗಳನ್ನು ಇದುಕೈಗೊಳ್ಳುತ್ತದೆಹಾಗೂ ಅಗತ್ಯವಿದ್ದಾಗ ನಾಯಕರಿಗೆ ಸಲಹೆಗಳನ್ನು ನೀಡುತ್ತದೆ. ಇದರಲ್ಲಿ 26ಜನ ಸದಸ್ಯರಿದ್ದಾರೆ
ದೋಹಾದಲ್ಲಿದೆ ರಾಜಕೀಯ ಕಚೇರಿ: ಕತಾರ್ ನ ರಾಜಧಾನಿ ದೋಹಾದಲ್ಲಿರುವ ಈ ಕಚೇರಿ, ತಾಲಿಬಾನಿಗಳ ಅಂತಾರಾಷ್ಟ್ರೀಯ ಪ್ರಾತಿನಿಧ್ಯ ವಹಿಸಿದೆ. ಯಾವುದೇ ಕಾರ್ಯನಿರ್ವಹಣೆ ಅಥವಾ ಶಾಂತಿ ಸಂಧಾನಗಳಿಗೆ ಸಂಭವಿಸಿದ ಮಾತುಕತೆಗಳು ಇದೇ ಕಚೇರಿಯಲ್ಲೇ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.