ಭತ್ತದ ಗದ್ದೆಯಲ್ಲಿ ತ್ರಿವರ್ಣ ಧ್ವಜಾರೋಹಣ
Team Udayavani, Aug 16, 2021, 4:36 PM IST
ಬಂಗಾರಪೇಟೆ: ಗೋಮಾಳದಲ್ಲಿ ಸಾಗುವಳಿಮಾಡುತ್ತಿರುವ ಗಡಿಭಾಗದ ರೈತರಮೇಲೆ ಅರಣ್ಯ ಇಲಾಖೆಅಧಿಕಾರಿಗಳ ದಬ್ಟಾಳಿಕೆ,ಕಾಡಾನೆಗಳ ಹಾವಳಿಗೆ ಶಾಶ್ವತಪರಿಹಾರ ಒದಗಿಸುವಲ್ಲಿವಿಫಲವಾಗಿರುವ ಸರ್ಕಾರದವಿರುದ್ಧ ರೈತರು ದಂಗೆಹೇಳಬೇಕಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿಮಂಜುನಾಥ್ ಸಲಹೆ ನೀಡಿದರು.
ಕಾಡಾನೆ ದಾಳಿಗೆ ನಾಶವಾದ ಕದರಿನತ್ತ ಗ್ರಾಮದರೈತರ ಭತ್ತದ ಗದ್ದೆಯಲ್ಲಿ ಧ್ವಜಾರೋಹಣ ಮಾಡಿಆಕ್ರೋಶ ವ್ಯಕ್ತಪಡಿಸಿದ ಅವರು, ದೇಶಕ್ಕೆ ಸ್ವಾತಂತ್ರÂಬಂದು ದಶಕಗಳೇ ಕಳೆದರೂ ಗಡಿಭಾಗದ ರೈತರಿಗೆಸ್ವಾತಂತ್ರÂ ಸಿಕ್ಕಲ್ಲ. ಒಂದು ಕಡೆ ಜನ ಪ್ರತಿನಿಧಿಗಳನಿರ್ಲಕ್ಷ್ಯ, ಮತ್ತೂಂದೆಡೆ ಕಾಡುಪ್ರಾಣಿಗಳಹಾವಳಿಗೆ ಶಾಶ್ವತ ಪರಿಹಾರ ಸಿಗದೆ ಜೀವಅಂಗೈಯಲ್ಲಿಟ್ಟುಕೊಂಡು ಜೀವನಮಾಡಬೇಕಾದ ಪರಿಸ್ಥಿತಿ ರೈತರದ್ದಾಗಿದೆಎಂದು ಹೇಳಿದರು.
ನೊಂದ ರೈತ ಗುಲ್ಲಟ್ಟಿಮಾತನಾಡಿ, ಬ್ರಿಟೀಷರ ಆಳ್ವಿಕೆಯಲ್ಲಿಬೆವರಿಗೆ ತಕ್ಕ ಪ್ರತಿಫಲ ಸಿಗುತ್ತಿತ್ತು. ಆದರೆ,ಸ್ವಾತಂತ್ರ್ಯ ಬಂದರೂ ಗಡಿಭಾಗಗಳಲ್ಲಿಸಮರ್ಪಕ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ,ಶೌಚಾಲಯಗಳ ವ್ಯವಸ್ಥೆಯಿಲ್ಲ, ಶಿಕ್ಷಣವ್ಯವಸ್ಥೆಯಂತೂ ಕೇಳುವಂತಿಲ್ಲ. ಆರೋಗ್ಯ ಬೇಕಾದರೆ15 ಕಿ.ಮೀ ಕಾಡಿನಲ್ಲಿ ನಡೆದು ಹೋಗಬೇಕು ಎಂದುಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.