![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 16, 2021, 10:00 PM IST
ಕೊಚ್ಚಿ: “ಐವಿಎಫ್ ಮಾದರಿಯ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ(ಎಆರ್‌ಟಿ)ದ ಮೂಲಕ ಮಕ್ಕಳನ್ನು ಪಡೆಯುವ ಹಕ್ಕನ್ನು ಅವಿವಾಹಿತ ಅಥವಾ ಸಿಂಗರ್ ಪೇರೆಂಟ್‌ಗೆ ನೀಡಲಾಗಿದೆ. ಆದರೆ, ಇಂಥ ಮಕ್ಕಳ ಜನನ ಹಾಗೂ ಮರಣ ಪ್ರಮಾಣಪತ್ರದ ಅರ್ಜಿಯಲ್ಲಿ ತಂದೆಯ ಹೆಸರನ್ನು ನಮೂದಿಸಬೇಕೆಂದು ಕಡ್ಡಾಯಗೊಳಿಸುವುದು ಆ ತಾಯಿಯ ಹಾಗೂ ಮಗುವಿನ ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ.’
ಹೀಗೆಂದು ಹೇಳಿರುವುದು ಕೇರಳ ಹೈಕೋರ್ಟ್. ಐವಿಎಫ್ ವಿಧಾನದ ಮೂಲಕ ಮಗುವನ್ನು ಪಡೆದಿದ್ದ ಕೇರಳದ ವಿಚ್ಛೇದಿತ ಮಹಿಳೆಯೊಬ್ಬರ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇರಳದ ಜನನ ಮತ್ತು ಮರಣ ನೋಂದಣಿ ನಿಯಮಗಳು, 1970ರ ಅನ್ವಯ ಮಗುವಿನ ತಂದೆಯ ವಿವರಗಳನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿರುವ ನಿಯಮವನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ, ಇಂಥ ಪ್ರಕ್ರಿಯೆಯ ಮೂಲಕ ಹುಟ್ಟಿರುವಂಥ ಮಕ್ಕಳ ಜನನ ಮತ್ತು ಮರಣಗಳ ನೋಂದಣಿಗೆ ಸಮರ್ಪಕವಾದ ಪ್ರತ್ಯೇಕ ಅರ್ಜಿಯನ್ನು ಒದಗಿಸುವಂತೆರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಎಆರ್‌ಟಿ ತಂತ್ರಜ್ಞಾನದ ಮೂಲಕ ಮಕ್ಕಳನ್ನು ಪಡೆದಾಗ ಮಗುವಿನ ತಂದೆಯ ವಿವರವನ್ನು ಅನೇಕರು ಗೌಪ್ಯವಾಗಿಡುತ್ತಾರೆ. ಅದನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸುವುದು ತಾಯಿ, ಮಗುವಿನ ಖಾಸಗಿತನ, ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ ಎಂದು ಹೈಕೋರ್ಟ್ ಹೇಳಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.