ಕಳಚಿತು ಅವಧೂತ ಪರಂಪರೆ ಕೊಂಡಿ


Team Udayavani, Aug 16, 2021, 8:28 PM IST

utthara kannada news

ಶಿರಸಿ: ಗುರುಗಳೇ, ಸಮಸ್ಯೆ ಆಗಿದೆ, ಏನು ಮಾಡಬೇಕುಎಂದು ನೋವಿನ ಭಾರ ಹೊತ್ತು ಬರುವ ಭಕ್ತರಿಗೆಮೊದುÉ ಊಟ ಮಾಡ್ರಾ, ಕಡಿಗೆ ನೋಡನ… ಎಂದುಸಾಂತ್ವನ ಹೇಳುತ್ತ, ಶಿಷ್ಯರು ಊಟ ಮುಗಿಸಿ ವಾಪಸ್‌ಬರುವ ತನಕವೂ ಕುಳಿತು ಸಮಸ್ಯೆ ಕೇಳಿ ಪರಿಹಾರಹೇಳುತ್ತಿದ್ದ ಮಾತೃ ಹೃದಯಿ ಸ್ವಾಮೀಜಿ ಅವಧೂತಪರಂಪರೆಯ ಶ್ರೀ ರಾಮಾನಂದರು ಇನ್ನಿಲ್ಲ.

ಮೂಲತಃ ಶಿರಸಿ ಜಾಗನಳ್ಳಿ ಕುಟುಂಬದ ಸಿದ್ದಾಪುರತಾಲೂಕಿನ ತಟ್ಟಿàಕೈನಲ್ಲಿ ಹುಟ್ಟಿ ಬೆಳೆದು, ಎಳೆಯವಯಸ್ಸಿನಲ್ಲೇ ಸೇವೆಗೆ ಹೋಗಿದ್ದ ಶ್ರೀ ಸಹಜಾನಂದಅವಧೂತರಲ್ಲಿ ದೀಕ್ಷೆಯನ್ನೂ ಪಡೆದು, ಕೊಳಗಿಬೀಸ್‌ಬಳಿಕ 1973ರ ನಂತರ ದೀವಗಿಯಲ್ಲಿ ಆಶ್ರಮಕಟ್ಟಿದ ಶ್ರೀಗಳು ನಂಬಿ ಬಂದ ಶಿಷ್ಯರಿಗೆ ಭರವಸೆಯಶಕ್ತಿ ಆಗಿದ್ದರು. ಶ್ರೀ ರಾಮಾನಂದ ಅವಧೂತರುಕೊನೇ ಕ್ಷಣದ ತನಕ ಇಷ್ಟದ ಹಾಗೂ ಆರಾಧ್ಯದೈವಹನುಮಂತನ ಪೂಜೆ- ಪುನಸ್ಕಾರ ಆರಾಧನೆಯಲ್ಲೇಬದುಕು ನಡೆಸಿ, ಸಿದ್ಧಿಗಳಿಸಿದವರು.

ಸದ್ಗುರು ಶ್ರೀಧರರ ಶಿಷ್ಯ: ಸಿದ್ದಾ ಪುರದ ತಟ್ಟಿಕೈ ಗ್ರಾಮದನಾರಾಯಣ ಹೆಗಡೆ ಮತ್ತು ಲಕೀÒ$¾ಹೆಗಡೆ ದಂಪತಿಪುತ್ರರಾಗಿದ್ದ ಅವಧೂತರ ಪೂರ್ವಾಶ್ರಮದ ಹೆಸರುರಾಮಚಂದ್ರ ಹೆಗಡೆ. ಶ್ರೀಗಳು 1930 ರಲ್ಲಿ ರಥಸಪ್ತಮಿ ದಿನದಂದು ಜನಿಸಿದ್ದರು. ಚಿಕ್ಕಂದಿನಲ್ಲೇ ತಾಯಿಕಳೆದುಕೊಂಡಿದ್ದ ಅವರು ಪ್ರಾಥಮಿಕ ಶಿಕ್ಷಣದ 1 ರಿಂದ 4ನೇ ತರಗತಿಯನ್ನು ಸರಕುಳಿಯ ಪ್ರಾಥಮಿಕ ಶಾಲೆಯಲ್ಲಿಪಡೆದರು.5 ಮತ್ತು 6ನೇ ತರಗತಿಯನ್ನು ಕಲ್ಕುಣಿಶಾಲೆಯಲ್ಲಿ ಮುಗಿಸಿದರು. ಚಿಕ್ಕ ವಯಸ್ಸಿನಲ್ಲೇ ಪಠ್ಯಪುಸ್ತಕಗಳಿಗಿಂತ ಹೆಚ್ಚಾಗಿ ಭಗವದ್ಗೀತೆ, ಯೋಗವಾಸಿಷ್ಠಇತ್ಯಾದಿಗಳನ್ನು ಓದುವುದರಲ್ಲಿ ಮತ್ತು ಯಕ್ಷಗಾನ,ಭಜನೆ ಮತ್ತು ಕೀರ್ತನೆಗಳಿಂದ ಪ್ರಭಾವಿತರಾಗಿದ್ದರು.

ಪ್ರಾಥಮಿಕ ಶಿಕ್ಷಣದ ನಂತರ ಶೀಗೇಹಳ್ಳಿಯಲ್ಲಿ ವೇದಗಳಅಧ್ಯಯನ ಆರಂಭಿಸಿದರು. ಈ ವೇಳೆಗೆ ಇವರ ತಂದೆನಾರಾಯಣ ಹೆಗಡೆಯವರು ಸದ್ಗುರು ಶ್ರೀಧರರಪ್ರಭಾವಕ್ಕೆ ಒಳಗಾಗಿ ಸಹಜಾನಂದ ಅವಧೂತರಾದರು.ಅವಧೂತರಾದ ತಂದೆಯ ಮಾರ್ಗದರ್ಶನ ಮತ್ತುಪ್ರಭಾವದ ಅಡಿಯಲ್ಲಿ ಬೆಳೆಯುತ್ತಿದ್ದ ರಾಮಚಂದ್ರಪರಿಪೂರ್ಣ ನಡವಳಿಕೆಯ ಮೂರ್ತರೂಪವಾಗಿದ್ದರು.

ಕಾಶಿಯಲ್ಲಿ ಹನ್ನೆರಡು ವರ್ಷ ಘೋರ ತಪಸ್ಸು ಮಾಡಿದಸಹಜಾನಂದರು ಶ್ರೀಧರ ಸ್ವಾಮಿಗಳ ಸೂಚನೆಯಂತೆತಾಲೂಕಿನ ಕೊಳಗಿಬೀಸಿಗೆ ಬಂದು ನೆಲೆಸಿ ಅಲ್ಲಿಯೇದೇವಸ್ಥಾನ ಮತ್ತು ಮಠ ಸ್ಥಾಪಿಸಿದರು.

ರಾಮಚಂದ್ರಅವರು ತಂದೆಯ ಹೆಜ್ಜೆಗಳನ್ನು ಅನುಸರಿಸಿದರು. ವೇದಮಂತ್ರಗಳ ಅಧ್ಯಯನದ ಮೇಲೆ ತಮ್ಮ ಮನಸ್ಸನ್ನುಸಂಪೂರ್ಣವಾಗಿ ಕೇಂದ್ರೀಕರಿಸಿದರಲ್ಲದೆ ವೈದಿಕಜೀವನ ಮತ್ತು ಆಧ್ಯಾತ್ಮದ ಆಳವಾದ ಚಿಂತನೆಯಲ್ಲಿತೊಡಗಿದರು.
ತಮ್ಮ 22 ನೇ ವಯಸ್ಸಿನಲ್ಲಿ ಶ್ರೀಸಹಜಾನಂದ ಅವಧೂತ ಸ್ವಾಮೀಜಿಯವರಿಂದಸನ್ಯಾಸ ದೀಕ್ಷೆ ಪಡೆದ ರಾಮಚಂದ್ರರು ರಾಮಾನಂದಅವಧೂತರಾದರು.ಆಧ್ಯಾತ್ಮಿಕ ಜವಾಬ್ದಾರಿಯ ಸನ್ಯಾಸ ಸ್ವೀಕರಿಸಿದ್ದಅವಧೂತರು ಸ್ವಲ್ಪಕಾಲ ನೆಲಮಾವು, ಶೀಗೇಹಳ್ಳಿಮತ್ತು ನಂತರ ಗೋಕರ್ಣದಲ್ಲಿ ವಾಸಿಸುತ್ತಿದ್ದರು.

ಗೋಕರ್ಣದ ಬಳಿಯ ಗುಹೆಯಲ್ಲಿ ವಾಸಿಸುತ್ತಿದ್ದರು.ಪ್ರತಿದಿನ ಒಮ್ಮೆ, ಅವರು ಮಹಾಬಲೇಶ್ವರದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಮಾರುತಿಯನ್ನುಕಂಬದಲ್ಲಿ ಪೂಜಿಸುತ್ತಿದ್ದರು. ಕನಸಿನಲ್ಲಿ ಸ್ಪೂರ್ತಿಪಡೆದ ಭಕ್ತರೊಬ್ಬರು ದೀವಗಿ ಮಲ್ಲಿಕಾರ್ಜುನದೇವಸ್ಥಾನದ ಪಕ್ಕದಲ್ಲಿ ಭೂಮಿಯನ್ನು ದಾನಮಾಡಿದರು.

ಅಲ್ಲಿ, ಒಂದು ಆಶ್ರಮವನ್ನುಸ್ಥಾಪಿಸಿದರು ಮತ್ತು ಸದ್ಗುರು ಶ್ರೀ ಶ್ರೀಧರ ಸ್ವಾಮೀಜಿಪಾದುಕೆಗಳನ್ನು ಪೀಠಗಳಲ್ಲಿ ಇರಿಸಲಾಯಿತು.ಸುಮಾರು 1973 -74 ರಲ್ಲಿ, ವೀರ ಮಾರುತಿಮಂದಿರ ವನ್ನು ಸ್ಥಾಪಿಸಲಾಯಿತು.ಅದೇ ಭಕ್ತರ ಕೇಂದ್ರವಾಗಿತ್ತು. ಎಷ್ಟೋ ಸಂಕೀರ್ಣಸಮಸ್ಯೆಗೆ ದೀವಗಿ ಒಂದು ಆಧ್ಯಾತ್ಮಿಕ, ಧಾರ್ಮಿಕಉತ್ತರದ ನೆಲೆಯೂ ಆಗಿತ್ತು. ಹೃದಯ ಸಂಬಂಧಿಸಮಸ್ಯೆ ಉಂಟಾದಾಗಲೂ ಎದೆಗುಂದದೇ ಶ್ರೀಗಳುತಮ್ಮ ದಿನಚರಿ ಬಿಟ್ಟಿರಲಿಲ್ಲ.

ಗಾಲಿ ಖುರ್ಚಿ ಮೇಲೆಕುಳಿತು ಜೀವನೋತ್ಸಾಹದಲ್ಲಿ ಇರುತ್ತಿದ್ದ ಶ್ರೀಗಳುಶಿಷ್ಯರ ಮನೆಗಳಿಗೆ ಬರುತ್ತೇನೆ ಎಂದರೆ ಎಂಥ ದೈಹಿಕನೋವು, ಕಷ್ಟ ಇದ್ದರೂ, ರಸ್ತೆ ಸರಿ ಇಲ್ಲದೇ ಇದ್ದರೂತೆರಳುತ್ತಿದ್ದರು. ಅವರ ಶಿಷ್ಯ ಪ್ರೀತಿಗೆ ಇವುಗಳುಸಾಕ್ಷಿಯಾಗುತ್ತಿದ್ದವು. ಶ್ರೀರಾಮಾನಂದ ಅವಧೂತರುಎಲ್ಲ ಮಠಾಧೀಶರ ಜೊತೆ ಅನ್ಯೋನ್ಯ ಸಂಬಂಧಇಟ್ಟುಕೊಂಡು ಪ್ರಚಾರ ಬಯಸದೇ ಆಧ್ಯಾತ್ಮಿಕ ಸಾಧನೆಮೂಲಕವೇ ಶಿಷ್ಯರ ಸಮೂಹ ಕಟ್ಟಿಕೊಂಡವರು.ಅವರಿಲ್ಲದೇ ಶಿಷ್ಯರು ಇಂದು ಅನಾಥರಾಗಿದ್ದಾರೆ.

 

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.