ಪುತ್ತೂರು : ತಡರಾತ್ರಿ ಜಾತಿ ನಿಂದನೆ ಮಾಡಿ ಹಲ್ಲೆ : ಮಹಿಳೆಯ ಆರೋಪ
Team Udayavani, Aug 17, 2021, 11:57 AM IST
ಪುತ್ತೂರು: ತಡ ರಾತ್ರಿ ಅನ್ಯ ಕೋಮಿನ ತಂಡವೊಂದು ಮನೆಗೆ ಅಕ್ರಮವಾಗಿ ನುಗ್ಗಿ ನನ್ನ ಕೈ ಹಿಡಿದು ಎಳೆದಿದ್ದಲ್ಲದೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಗಾಳಿಮುಖದ ದಿ. ರಾಜು ಮಾದಿಗ ಎಂಬವರ ಪತ್ನಿ ಆಶಾ (35ವ,) ಎಂಬವರು ಸಂತ್ರಸ್ತೆಯಾಗಿದ್ದು. ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ಆ.16ರ ರಾತ್ರಿ ಊಟಕ್ಕೆ ಕೂತ್ತಿದ್ದ ವೇಳೆ ಗಾಳಿಮುಖದ ಖಾದರ್ , ಮಹಮ್ನದ್, ಶಾಬೀರ್, ಶಾಪಿ, ಅಶ್ರಪ್ ಕೊಟ್ಯಾಡಿ ಸೇರಿದಂತೆ ಸುಮಾರು 20 ಮಂದಿಯ ತಂಡವೊಂದು ಅಕ್ರಮವಾಗಿ ನಮ್ಮ ಮನೆಗೆ ನುಗ್ಗಿ ನನ್ನ ಕೈ ಹಿಡಿದು ಎಳೆದಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ನನ್ನ ಮಗ ಗುರುಪ್ರಸಾದ್, ಅಕ್ಕನ ಮಗ ಸೀತಾರಾಮ, ಅಳಿಯ ಚಂದ್ರಶೇಖರ್ ಎಂಬವರು ತಡೆಯಲು ಬಂದಾಗ ಅವರನ್ನು ದೂಡಿ ಹಾಕಿದ್ದಲ್ಲದೆ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಗೆ ಆಸ್ಪತ್ರೆಗೆ ಹೋಗಲು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ನೆರವಾದರು.
ರಕ್ಷಣೆ ಮಾಡಬೇಕಾದ ಪೊಲೀಸರಿಂದಲೇ ಹಲ್ಲೆ ಆರೋಪ:
ನಮ್ಮ ಮನೆಗೆ ಅಕ್ರಮವಾಗಿ ನುಗ್ಗಿದ ಅನ್ಯಕೋಮಿನ ತಂಡ ದಾಂದಲೆ ನಡೆಸಿದಾಗ ರಕ್ಷಣೆ ಕೊಡಬೇಕಾಗಿದ್ದ ಪೊಲೀಸರೇ ನನ್ನ ಅಳಿಯನಿಗೆ ಹಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ಮನೆಗೆ ನುಗ್ಗಿ ನನ್ನ ಕೈ ಹಿಡಿದು ಎಳೆದ ತಂಡಕ್ಕೆ ಬೆದರಿಸಲು ಅಳಿಯ ಕತ್ತಿ ಹಿಡಿದು ಎಚ್ಚರಿಕೆ ನೀಡಿದ್ದ. ಕತ್ತಿ ಹಿಡಿದಿರುವುದನ್ನು ನೆಪವಾಗಿರಿಸಿ ಆರೋಪಿಗಳ ಪೊಲೀಸರು ನನ್ನ ಅಳಿಯನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಯಿ ಕಚ್ಚಿದ ವಿಚಾರ:
ಆಶಾ ಅವರ ಮನೆಯ ಸಾಕು ನಾಯಿ ಬೀದಿಯಲ್ಲಿ ಓಡಾಡುತ್ತಿದ್ದವರಿಗೆ ಕಚ್ಚಿದ್ದು ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪೊಲೀಸರು ಕೂಡ ಆಶಾ ಅವರಿಗೆ ಸಾಕು ನಾಯಿಯನ್ನು ಬೀದಿಗೆ ಬಿಡದಂತೆ ಸೂಚಿಸಿದರೆನ್ನಲಾಗಿದೆ. ಆದರೆ ಸಾಕು ನಾಯಿ ಮತ್ತೆ ಬೀದಿಯಲ್ಲಿ ಓಡಾಡುವ ಜನರಿಗೆ ತೊಂದರೆ ಕೊಡುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ನಮ್ಮ ಮನೆಯ ಸಾಕು ನಾಯಿಯನ್ನು ನಾವು ಕಟ್ಟಿ ಹಾಕಿ ಸಾಕುತ್ತಿದ್ದೇವೆ. ಆದರೆ ಇತರ ಬೀದಿ ನಾಯಿಗಳನ್ನು ನೋಡಿ ನಮ್ಮ ನಾಯಿ ಎಂದು ತಪ್ಪು ತಿಳುವಳಿಕೆಯಿಂದ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆಶಾ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.