![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 17, 2021, 5:30 PM IST
ಕೊರಟಗೆರೆ: ಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಫ್ಲೆಕ್ಸ್ ವಿಚಾರಕ್ಕೆ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಪರಿಸ್ಥಿತಿ ಅರಿತ ಪೋಲೀಸರು ಮಧ್ಯ ಪ್ರವೇಶದಿಂದ ಎಲ್ಲವೂ ಬಗೆ ಹರಿಯಿತು.
ಆಗಸ್ಟ್ 6ರಂದು ಶಾಸಕ ಡಾ.ಜಿ. ಪರಮೇಶ್ವರ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಜನ್ಮ ದಿನಕ್ಕೆ ಶುಭ ಕೋರಿ ಪಟ್ಟಣದ ಹಲವು ಕಡೆ ಪ್ಲೆಕ್ಸ್ ಹಾಕಿದ್ದರು. 10 ದಿನಗಳು ಕಳೆದರೂ ಫ್ಲೆಕ್ಸ್ ತೆರವುಗೊಳಿಸಿರಲಿಲ್ಲ. ಅದೇ ರೀತಿ ಮಾಜಿ ಶಾಸಕ ಸುಧಾಕರ್ ಲಾಲ್ ಅವರ ಜನ್ಮ ದಿನ ಆಗಸ್ಟ್18 ರಂದು ಇರುವುದರಿಂದ ಪರಮೇಶ್ವರ ಜನ್ಮ ದಿನಕ್ಕೆ ಶುಭ ಕೋರಿದ ಫ್ಲೆಕ್ಸ್ ತೆರವು ಮಾಡುವಂತೆ ಪ.ಪಂ ಅಧಿಕಾರಿಗಳು ನೌಕರರಿಗೆ ತಿಳಿಸಿದ್ದರು. ನೌಕರರು ಫ್ಲೆಕ್ಸ್ ಗಳನ್ನು ತೆರವುಗೊಳಿಸುವ ವೇಳೆ ಫ್ಲೆಕ್ಸ್ ಹರಿದಿದೆ ಇದರಿಂದ ಕೆಂಡಾ ಮಂಡಲರಾದ ಕಾಂಗ್ರೆಸ್ ಕಾರ್ಯಕರ್ತರು ಪ.ಪಂ ಮುಖ್ಯಾಧಿಕಾರಿ ಕಛೇರಿಗೆ ಬಂದು ಅಧಿಕಾರಿ ವಿರುದ್ದ ಹರಿಹಾಯ್ದರು. ಇದನ್ನು ತಿಳಿದ ಜೆಡಿಎಸ್ ಕಾರ್ಯಕರ್ತರು ಪ.ಪಂ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರ ನಡೆ ಪ್ರಶ್ನಿಸಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ. ಪಂ ಕಛೇರಿ ಕೆಲಹೊತ್ತು ರಣರಂಗವಾಯಿತು.
ಇದನ್ನೂ ಓದಿ :ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 210 ಅಂಕ ಏರಿಕೆ
ಪೊಲೀಸರ ಜಾಣ ನಡೆ
ಪಿಎಸ್ಐ ಮುತ್ತುರಾಜು ಮತ್ತು ತಂಡ ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ ಕಛೇರಿಯಿಂದ ಹೊರ ಕಳುಹಿಸಿದರು. ಅಲ್ಲದೇ ಜನಪ್ರತಿನಿಧಿಗಳಾಗಿ ಈ ರೀತಿ ವರ್ತಿಸಬಾರದು ಎಂದು ಸಲಹೆ ನೀಡಿ ತಾತ್ಕಾಲಿಕವಾಗಿ ಸಮಸ್ಯೆ ಶಮನ ಮಾಡಿದರು.
ಕೋರ್ಟ್ ಆದೇಶದಂತೆ ಫ್ಲೆಕ್ಸ್ ಕಟ್ಟುವಂತಿಲ್ಲ. ಆದರೂ ಸ್ಥಳೀಯವಾಗಿ ಫ್ಲೆಕ್ಸ್ ಕಟ್ಟಲು ಕೆಲವು ದಿನಗಳಿಗಷ್ಟೇ ಅವಕಾಶ ನೀಡಲಾಗಿತ್ತು. ಸರ್ಕಾರದ ಮಾರ್ಗ ಸೂಚಿಯಂತೆ ಒಂದು ಫ್ಲೆಕ್ಸ್ ಹಾಕಲು ಇಂತಿಷ್ಟು ದರವಿದ್ದು, ಹಣವನ್ನು ಕಾರ್ಯಕರ್ತರಿಂದ ಕಟ್ಟಿಸಿ ಕೊಂಡು ಅನುಮತಿ ನೀಡಲು ಅವಕಾಶವಿದೆ. ಕೆಲವೊಂದು ಸ್ಥಳಗಳಲ್ಲಿ ಮಾತ್ರ ಫ್ಲೆಕ್ಸ್ ಹಾಕಲು ಅವಕಾಶವಿದೆ. ಅದರೆ ಎಲ್ಲೆಂದರಲ್ಲಿ ಫ್ಲೆಕ್ಸ್ ಹಾಕುವಂತಿಲ್ಲ. ಅದರೆ ಘಟನೆಯಲ್ಲಿ ವೈಯಕ್ತಿಕ ದ್ವೇಷದಿಂದ ಈ ರೀತಿ ಆಗಿರಬೇಕು, ಇದಕ್ಕಾಗಿ ರೆಸಲ್ಯೂಷನ್ ಮಾಡಿ ಮುಂದಿನ ದಿನದಲ್ಲಿ ಸಮಸ್ಯೆ ಬರದಂತೆ ಎಚ್ಚರ ವಹಿಸುತ್ತೇನೆ.
– ಲಕ್ಷ್ಮಣ್ ಕುಮಾರ್ ಪ. ಪಂ ಮುಖ್ಯಾಧಿಕಾರಿ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.