ದಾವಣಗೆರೆ ಜಿಲ್ಲಾದ್ಯಂತ ಲಾರಿ ಸಂಚಾರ ಬಂದ್
ಹಮಾಲರಿಗೆ ವರ್ತಕರೇ ಲೋಡಿಂಗ್, ಅನ್ ಲೋಡಿಂಗ್ ಕೂಲಿ ನೀಡಲು ಮಾಲೀಕರ ಪಟ್ಟು
Team Udayavani, Aug 17, 2021, 5:50 PM IST
ದಾವಣಗೆರೆ: ಹಮಾಲರಿಗೆ ಲೋಡಿಂಗ್ ಮತ್ತು ಅನ್ ಲೋಡಿಂಗ್ ಹಾಗೂ ಓವರ್ ಲೋಡಿಂಗ್ ಕೂಲಿಯನ್ನು ವರ್ತಕರೇ ಕೊಡಬೇಕು ಎಂದು
ಒತ್ತಾಯಿಸಿ ದಾವಣಗೆರೆ ಜಿಲ್ಲಾ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನನ್ನು ಸಾಬ್, ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ಸಾಗಾಣಿಕೆಗೆ ಅವಕಾಶ ಇಲ್ಲದೇ ಇರುವುದು ಮತ್ತಿತರ ಕಾರಣಗಳಿಂದ ಲಾರಿ ಮಾಲೀಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಡೀಸೆಲ್, ಯಂತ್ರೋಪಕರಣಗಳ ಬೆಲೆ ಏರಿಕೆಯಿಂದ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿ ಹಮಾಲರಿಗೆ ಲೋಡಿಂಗ್, ಅನ್‌ಲೋಡಿಂಗ್, ಓವರ್ ಲೋಡಿಂಗ್ ನೀಡುವುದು ಕಷ್ಟವಾಗುತ್ತದೆ. ಲೋಡಿಂಗ್, ಅನ್‌ಲೋಡಿಂಗ್ ಸಮಸ್ಯೆ ಬಗೆಹರಿಯುವ ತನಕ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ಲಾರಿ ಮಾಲೀಕರೇ ಹಮಾಲರಿಗೆ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೂಲಿ ನೀಡುತ್ತಾ ಬರುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಲಾರಿ ಮಾಲೀಕರು ಆದಷ್ಟು ಬೇಗ ಲೋಡಿಂಗ್, ಅನ್‌ಲೋಡಿಂಗ್ ಆಗಲಿ ಎಂದು ಹಮಾಲರಿಗೆ 20-50 ರೂಪಾಯಿ ನೀಡುತ್ತಿದ್ದರು. ಕ್ರಮೇಣ ಅದೇ ಫಿಕ್ಸ್ ಆಗಿದೆ. ವಾಸ್ತವವಾಗಿ ವರ್ತಕರೇ ಲೋಡಿಂಗ್ ಮತ್ತು ಅನ್‌ಲೋಡಿಂಗ್ ನೀಡಬೇಕು. ಸಾಮಾನು-ಸರಂಜಾಮು ಬೇರೆ ಕಡೆ ಕಳಿಸುವ, ಬೇರೆ ಕಡೆಯಿಂದ ಬಂದಂತಹ ಸಾಮಾನುಗಳ ಅನ್ ಲೋಡಿಂಗ್ ಕೂಲಿಯನ್ನು ಸಂಬಂಧಿತ ವರ್ತಕರೇ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಮೂಲ ವಿಜ್ಞಾನ ಕಲಿಕೆಗೆ ಉತ್ತೇಜನ, ವೈಜ್ಞಾನಿಕ ಸಂಸ್ಕಾರಕ್ಕೆ ಒತ್ತು : ಸಚಿವ ಅಶ್ವತ್ಥನಾರಾಯಣ
ಅನೇಕ ವರ್ಷದಿಂದ ಇರುವ ಸಮಸ್ಯೆ ಬಗ್ಗೆ ಸಾಕಷ್ಟು ಚರ್ಚಿಸಿ 2017ರಲ್ಲಿ ಲೋಡಿಂಗ್ ಮತ್ತು ಅನ್ ಲೋಡಿಂಗ್‌ನ್ನು ವರ್ತಕರೇ ನೀಡಬೇಕು ಎಂದು ಒತ್ತಾಯಿಸಿ ಲಾರಿಗಳ ಸಂಚಾರ ನಿಲ್ಲಿಸಿ ಮುಷ್ಕರ ನಡೆಸಿದ ನಂತರ ವರ್ತಕರೇ ಲೋಡಿಂಗ್ ಮತ್ತು ಅನ್ ಲೋಡಿಂಗ್ ನೀಡಲಾರಂಭಿಸಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಹೆಚ್ಚಿನ ಗಮನ ಹರಿಸಲಿಲ್ಲ. ಈಗ ಮತ್ತೆ ಹಿಂದಿನಂತೆಯೇ ಲಾರಿ ಮಾಲಿಕರೇ ಲೋಡಿಂಗ್, ಅನ್ ಲೋಡಿಂಗ್ ಹಮಾಲಿ ಕೊಡಬೇಕಾಗಿದೆ. ಕೋವಿಡ್‌ದಿಂದ ಸಾಕಷ್ಟು ಸಮಸ್ಯೆಯಲ್ಲಿ ಇರುವ ಮಾಲಿಕರು ಚಾಲಕರು, ನಿರ್ವಾಹಕರ ವೇತನ ನೀಡಲೂ ಆಗದ ಸ್ಥಿತಿಯಲ್ಲಿದ್ದಾರೆ. ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೊಡಲಾಗುತ್ತಿಲ್ಲ. ಕೊಡುವುದೂ ಇಲ್ಲ. ಹಾಗಾಗಿ ವರ್ತಕರೇ ಹಿಂದಿನಂತೆ ಲೋಡಿಂಗ್ ಮತ್ತು ಅನ್ ಲೋಡಿಂಗ್ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಎರಡೂ¾ರು ಸಾವಿರ ಲಾರಿಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಪಿಎಂಸಿ ಆವರಣದಲ್ಲಿ ಲಾರಿ ಮಾಲೀಕರ ಸಂಘದ ಪದಾಧಿ ಕಾರಿಗಳು ವರ್ತಕರ ಮನವೊಲಿಸಲು ಯತ್ನಿಸಿದರು. ಸಂಘದ ಶಾಂತಕುಮಾರ್, ಪವನ್ ಕುಮಾರ್, ಬಾಬುಸಾಬ್, ದಿನೇಶ್, ಬಸವರಾಜ್, ಶಿವಕುಮಾರ್, ಈಶ್ವರಪ್ಪ ಇತರರು ಇದ್ದರು.
ಸಮಸ್ಯೆ ಬಗೆಹರಿಯುವರೆಗೂ ಸಂಚಾರ ಸ್ಥಗಿತ
ನಾವು ಪ್ರತಿಭಟನೆ ಮಾಡುತ್ತಿಲ್ಲ. ಲೋಡಿಂಗ್, ಅನ್‌ಲೋಡಿಂಗ್ ಸಮಸ್ಯೆ ಬಗೆಹರಿಯುವವರೆಗೆ ಲಾರಿ ಸಂಚಾರ ನಿಲ್ಲಿಸಿದ್ದೇವೆ. ವರ್ತಕರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತ, ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಚೇಂಬರ್ ಆಫ್ ಕಾಮರ್ಸ್‌ಗೆ ಮನವಿ ಮಾಡಿದ್ದೇವೆ. ಎಲ್ಲರೂ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ. ಸಮಸ್ಯೆ ಬಗೆಹರಿಯುವವರೆಗೆ ಲಾರಿಗಳ ಸಂಚಾರ ನಿಲ್ಲಿಸಲಾಗುವುದು ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನನ್ನು ಸಾಬ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.