ಶರಿಯಾ ಆರಂಭ


Team Udayavani, Aug 18, 2021, 7:20 AM IST

ಶರಿಯಾ ಆರಂಭ

ಕಾಬೂಲ್‌: ಇನ್ನು ಮುಂದೆ ಮಹಿಳೆಯರಿಗೆ ಶರಿಯಾ ಕಾನೂನು ಅನ್ವಯ, ಇಸ್ಲಾಂ ವಿರುದ್ಧ ಸುದ್ದಿ ಪ್ರಕಟಿಸಲು ಮಾಧ್ಯಮಗಳಿಗೆ ನಿರ್ಬಂಧ…-ಅಫ್ಘಾನಿಸ್ಥಾನದಲ್ಲಿ “ಶರಿಯಾ’ ಆರಂಭವಾಗಿರುವುದನ್ನು ಸ್ವತಃ ತಾಲಿಬಾನ್‌ ಘೋಷಿಸಿದ ರೀತಿ ಇದು.

ದೇಶವು ಉಗ್ರರ ವಶವಾದ ಬಳಿಕ ಮಂಗಳವಾರ ರಾತ್ರಿ ಮೊದಲ ಪತ್ರಿಕಾಗೋಷ್ಠಿ ನಡೆಸಿದ ತಾಲಿಬಾನ್‌ ತನ್ನ “ಕರಾಳ ಆಡಳಿತ’ದ ಗುಟ್ಟನ್ನು ಬಿಟ್ಟು ಕೊಟ್ಟಿದೆ.

ಇನ್ನು ಮುಂದೆ ಅಫ್ಘಾನಿಸ್ಥಾನದಲ್ಲಿ ಮಹಿಳೆಯರ ಹಕ್ಕು ಎನ್ನುವುದು ಶರಿಯಾ ಕಾನೂನಿನ ಅನ್ವಯವೇ ಇರುತ್ತದೆ. ಎಲ್ಲ ಸುದ್ದಿ ಮಾಧ್ಯಮ ಸಂಸ್ಥೆಗಳು ತಮ್ಮ ಕೆಲಸವನ್ನು ಮುಂದುವರಿಸಬಹುದು. ಆದರೆ ಮೂರು ಷರತ್ತುಗಳಿವೆ. ಅವುಗಳೆಂದರೆ, ಇಸ್ಲಾಂ ಮೌಲ್ಯ ಗಳಿಗೆ ವಿರುದ್ಧವಾದ ಯಾವುದೇ ಸುದ್ದಿ ಪ್ರಕಟಿಸ ಬಾರದು, ಸುದ್ದಿಗಳು ನಿಷ್ಪಕ್ಷವಾಗಿರಬೇಕು, ರಾಷ್ಟ್ರೀಯ ಹಿತಾ ಸಕ್ತಿ ಗಳಿಗೆ ವಿರುದ್ಧವಾದ ಸುದ್ದಿ ಪ್ರಕಟ  ವಾಗು ವಂತಿಲ್ಲ ಎಂದು ದೇಶವನ್ನುದ್ದೇಶಿಸಿ ಪತ್ರಿಕಾ  ಗೋಷ್ಠಿಯಲ್ಲಿ  ಮಾತನಾಡಿದ ತಾಲಿಬಾನ್‌ ವಕ್ತಾರ ಜಬೀಹುಲ್ಲ  ಮುಜಾಹಿದ್‌ ಕಠಿನ ಸೂಚನೆ ನೀಡಿದ್ದಾನೆ. ಹಿಂದಿನ ಕಟ್ಟರ್‌ ಸಂಪ್ರದಾಯದಿಂದ ಹೊರಬಂದಂತೆ ಕಾಣುತ್ತಿರುವ ತಾಲಿಬಾನ್‌ ಹಲವು ಉದಾರ ನಿಲುವುಗಳನ್ನು ಪ್ರಕಟಿಸಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಮತಿ ಇದೆ ಎಂದು ಹೇಳಿದ್ದು, ಬುರ್ಖಾ ಕಡ್ಡಾಯವಲ್ಲ. ಆದರೆ ಹಿಜಬ್‌ (ಶಿರೋವಸ್ತ್ರ) ಕಡ್ಡಾಯ ಎಂದಿದೆ.

ಕ್ಷಮಾದಾನ ಘೋಷಣೆ :

ನಾವು ಎಲ್ಲರನ್ನೂ ಕ್ಷಮಿಸಿದ್ದೇವೆ. ವಿದೇಶಿ ಸೇನೆಯೊಂದಿಗೆ ಕೆಲಸ ಮಾಡಿದವರು ಮತ್ತು ಮಾಜಿ ಸೈನಿಕರ ಸಹಿತ ಯಾರ ವಿರುದ್ಧವೂ ಪ್ರತೀಕಾರ ತೀರಿಸುವುದಿಲ್ಲ. ಎಲ್ಲ ವಿದೇಶಿ ರಾಯಭಾರ ಕಚೇರಿಗಳೂ ನಮಗೆ ಬಹಳ ಮುಖ್ಯ. ಅವುಗಳಿಗೆ ನಾವು ಭದ್ರತೆ ನೀಡುತ್ತೇವೆ ಎಂದೂ ತಾಲಿಬಾನ್‌ ಹೇಳಿದೆ.

ಇನ್ನೊಂದೆಡೆ, ಕಾಶ್ಮೀರವನ್ನು ನಾವು ದ್ವಿಪಕ್ಷೀಯ ಮತ್ತು ಆಂತರಿಕ ವಿಚಾರ ಎಂದು ಪರಿಗಣಿಸುತ್ತೇವೆ. ಹಾಗಾಗಿ ನಾವು ಕಾಶ್ಮೀರದ ಬಗ್ಗೆ ಗಮನಹರಿಸುವುದಿಲ್ಲ ಎಂದೂ ತಾಲಿಬಾನ್‌ ಸ್ಪಷ್ಟಪಡಿಸಿದೆ.

ಏನಿದು ಶರಿಯಾ ಕಾನೂನು? :

ಶರಿಯಾ ಎಂದರೆ ಇಸ್ಲಾಂ ಧರ್ಮದ ಕಾನೂನು ವ್ಯವಸ್ಥೆ. ಪ್ರಾರ್ಥನೆ, ಉಪವಾಸ, ದಾನ ಸಹಿತ ಮುಸ್ಲಿಮರ ಜೀವನಕ್ರಮ ಹೇಗಿರಬೇಕೆಂದು ತಿಳಿಸುವ ಸಂಹಿತೆ. ಕೌಟುಂಬಿಕ ಕಾನೂನು, ಹಣಕಾಸು, ಉದ್ದಿಮೆ ಸಹಿತ ಪ್ರತಿಯೊಂದು ವಿಚಾರದ ಬಗ್ಗೆ ಶರಿಯಾದಲ್ಲಿ ಪ್ರಸ್ತಾವವಿರುತ್ತದೆ. ಅಪರಾಧಿಗಳಿಗೆ ಕಠಿನ ಶಿಕ್ಷೆಯನ್ನೂ ಉಲ್ಲೇಖೀಸಲಾಗಿರುತ್ತದೆ. ಕಳ್ಳತನ ಮಾಡಿದವರು,  ವ್ಯಭಿಚಾರಿಗಳು ಇತ್ಯಾದಿ ಅಪರಾಧಿಗಳನ್ನು ಅತ್ಯಂತ ಕಠಿನ ಶಿಕ್ಷೆಗಳಿಂದ ದಂಡಿಸಲಾಗುತ್ತದೆ.

ಭಯ ಬಿಡಿ, ನಮ್ಮೊಂದಿಗೆ ಸೇರಿ! :

ಇಡೀ ಅಫ್ಘಾನಿಸ್ಥಾನವು ಅರಾಜಕತೆ ಮತ್ತು ಅಸ್ಥಿರತೆಯ ಭೀತಿ ಎದುರಿಸುತ್ತಿರುವಂತೆಯೇ ತನ್ನ ನಾಗರಿಕರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನಕ್ಕೆ ತಾಲಿಬಾನ್‌ ಕೈಹಾಕಿದೆ. ಭಯ ಬಿಟ್ಟು ಎಲ್ಲ ಸರಕಾರಿ ಉದ್ಯೋಗಿಗಳೂ ಕೆಲಸಕ್ಕೆ ಹಾಜರಾಗುವಂತೆ ಕರೆ ನೀಡಿದೆ. ವಿಶೇಷವೆಂದರೆ, ಇಸ್ಲಾಮಿಕ್‌ ಎಮಿರೇಟ್ಸ್‌ (ಅಫ್ಘಾನ್‌ಗೆ ತಾಲಿಬಾನಿ ಹೆಸರು) ಮಹಿಳೆಯರನ್ನು ಬಲಿಪಶುಗಳಾಗಬೇಕೆಂದು ಬಯಸುವುದಿಲ್ಲ. ಮಹಿಳೆಯರು ಕೂಡ ಶರಿಯಾ ಕಾನೂನಿನ ಪ್ರಕಾರ ನಮ್ಮ ಸರಕಾರದ ಭಾಗವಾಗಬಹುದು ಎಂದೂ ತಾಲಿಬಾನ್‌ ಸಾಂಸ್ಕೃತಿಕ ಆಯೋಗದ ಸದಸ್ಯ ಇನಾಮುಲ್ಲಾ ಸಮನ್‌ಗಾನಿ ಹೇಳಿದ್ದಾನೆ.

ಮಂಗಳವಾರ ಕಾಬೂಲ್‌ ಹೇಗಿತ್ತು? :

  • ಎಪಿ ನ್ಯೂಸ್‌ ಏಜೆನ್ಸಿ ಪ್ರಕಾರ ತಾಲಿಬಾನಿಗಳ ಹಿರಿಯ ಮುಖಂಡ ಅಮೀರ್‌ ಖಾನ್‌ ಮುತಖೀ ಕಾಬೂಲ್‌ನ ರಾಜಕಾರಣಿಗಳೊಂದಿಗೆ ಸರಕಾರ ರಚಿಸುವ ಸಂಧಾನ ಸೂತ್ರಕ್ಕೆ ಮುಂದಾಗಿದ್ದಾನೆ.
  • ಕಾಬೂಲ್‌ ವಿಮಾನ ನಿಲ್ದಾಣದ ರನ್‌ ವೇ ಈಗ ವಿಮಾನಗಳ ಆಗಮನ -ನಿರ್ಗಮನಕ್ಕೆ ಸಿದ್ಧವಾಗಿದೆ. ವಿಮಾನಗಳಲ್ಲಿ ತೆರಳಲು ನೂಕುನುಗ್ಗಲು ಮಂಗಳವಾರವೂ ಕೆಲವೆಡೆ ನಡೆದಿದೆ.
  • ಪ್ರಸ್ತುತ ಕಾಬೂಲ್‌ನ ಮೇಯರ್‌ ಹಾಗೂ ಆರೋಗ್ಯ ಸಚಿವರು ಕೆಲಸಕ್ಕೆ ಹಾಜರಾಗಿದ್ದಾರೆ. ಹಾಗಾಗಿ ಜನರು ಬಹಳ ಎಚ್ಚರಿಕೆ ಮತ್ತು ಹಿಂಜರಿಕೆಯಿಂದ ರಸ್ತೆಗಿಳಿದರು. ಮಹಿಳೆಯರೂ ಮನೆಯಿಂದ ಹೊರಗೆ ಬಂದಿದ್ದಾರೆ. ಹಾಗೆಂದು ಭಯ ಪೂರ್ತಿಯಾಗಿ ಹೋಗಿಲ್ಲ.
  • ಕೆಲವು ಅಂಗಡಿ ಮುಂಗಟ್ಟುಗಳು ತೆರೆದಿವೆ. ಸಂಚಾರಿ ಪೊಲೀಸರು ಕರ್ತವ್ಯಕ್ಕೆ ಇಳಿದಿದ್ದಾರೆ.
  • ಶಾಲೆ-ಕಾಲೇಜು ಸದ್ಯ ಆರಂಭ ಸಾಧ್ಯತೆ ಇಲ್ಲ.
  • ಯಾರೂ ಕಾರುಗಳನ್ನು ಕದಿಯಬಾರದು ಮತ್ತು ವಸತಿ ಪ್ರದೇಶಗಳನ್ನು ಹಾನಿಗೊಳಿಸಬಾರದು ಎಂದು ತಾಲಿಬಾನಿಗಳ ನಾಯಕರು ತಮ್ಮ ತಂಡದವರಿಗೆ ತಿಳಿಸಿದ್ದಾರಂತೆ. ಮಿಲಿಟರಿ ಕಾರ್ಯಾಚರಣೆಯ ಮುಖ್ಯಸ್ಥ ಮುಲ್ಲಾ ಯಾಕೂಬ್‌ ಲೋಕಲ್‌ ಟಿವಿ ಟೋಲೋ ನ್ಯೂಸ್‌ ಮೂಲಕ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.