ನದಿ ಹರಿವಿನ ಮೂಲಕ್ಕೆ ಅಡೆತಡೆ ಸಲ್ಲ
ಏಪ್ರಿಲ್-ಜೂನ್ ಒಳಗೆ ಕಾಮಗಾರಿ ನಡೆಸಿ; ಸಿಂಗಟಾಲೂರು ಯೋಜನೆ ಕುರಿತು ವಿಶೇಷ ಸಭೆ
Team Udayavani, Aug 18, 2021, 4:42 PM IST
ಕೊಪ್ಪಳ: ತುಂಗಭದ್ರಾ ಡ್ಯಾಂ ವ್ಯಾಪ್ತಿಯಲ್ಲಿನ ಕ್ಯಾಚಮೆಂಟ್ ಏರಿಯಾದಲ್ಲಿ ಅನಗತ್ಯ ನೀರಿನ ಹರಿವಿನ ಮೂಲಕ್ಕೆ ಅಡೆತಡೆ ಮಾಡುವಂತಿಲ್ಲ.
ಚೆಕ್ ಡ್ಯಾಂ, ಬ್ಯಾರೇಜ್ ನಿರ್ಮಿಸದಂತೆಯೂ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ
ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಮುನಿರಾಬಾದ್‌ನ ನೀರಾವರಿ ಇಲಾಖೆ ಕಚೇರಿಯಲ್ಲಿ ಅಧಿ ಕಾರಿಗಳ ಸಭೆ ನಡೆಸಿ, ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ
ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ತುಂಗಭದ್ರಾ ಡ್ಯಾಂಗೆ ನೀರು ಹರಿದು ಬರುವ ಸಂದರ್ಭದಲ್ಲಿ ಅಡೆತಡೆ ಮಾಡುವ ವಿಚಾರ ತಿಳಿದಿದೆ. ಅರಣ್ಯ ಇಲಾಖೆಯು ಚೆಕ್ ಡ್ಯಾಂ, ನಾಲಾ ಬಂದಿ ಮಾಡ್ತಾರೆ. ಇನ್ನೂ ಕೃಷಿ ಇಲಾಖೆಯೂ ಇಂತಹ ಕೆಲಸ ಮಾಡುತ್ತಿವೆ. ಇದರಿಂದ ಕೆರೆ ಕಟ್ಟೆಗಳಿಗೆ, ಬ್ಯಾರೇಜ್‌ಗಳಿಗೆ ನೀರು ಬರುತ್ತಿಲ್ಲ. ನಮ್ಮ ಕ್ಯಾಚಮೆಂಟ್ ಏರಿಯಾದಲ್ಲಿ ನೀರಿನ ಹರಿವಿನ ಮೂಲಕ್ಕೆ ಯಾವುದೇ ಅಡೆತಡೆ ಕೆಲಸ ನಡೆಯಬಾರದು. ಅಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳಬಾರದಂತೆ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಇದನ್ನೂ ಓದಿ:ಯಾದಗಿರಿ ಜನಾಶೀರ್ವಾದ ಯಾತ್ರೆ ವೇಳೆ ಸುಡುಮದ್ದು ಸದ್ದು: ಪ್ರಕರಣ ದಾಖಲು
ತುಂಗಭದ್ರಾ ಡ್ಯಾಂನ 11 ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದು, ಕಾಲುವೆ ನಿರ್ವಹಣೆ ಸೇರಿ ಎಲ್ಲ ವಿಚಾರ ಚರ್ಚೆಯಾಗಿದೆ. ಏಪ್ರಿಲ್‌ನಿಂದ ಜೂನ್ ತಿಂಗಳ ಒಳಗೆ 3 ತಿಂಗಳ ಕಾಲ ಕಾಲುವೆಗೆ ನೀರು ಹರಿಸುವುದು ಇರುವುದಿಲ್ಲ. ಆ ವೇಳೆ ಕಾಲುವೆಗಳ ದುರಸ್ತಿ, ನಿರ್ವಹಣೆ, ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ಮುಂದೆ ಕಾಲುವೆಗಳ ನಿರ್ವಹಣೆಗೆ ಅನುದಾನವನ್ನು ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡುತ್ತೆ. ಜನವರಿ-ಮಾರ್ಚ್ ಒಳಗಾಗಿ ಅಧಿಕಾರಿಗಳು ಟೆಕ್ನಿಕಲ್, ಆಡಳಿತಾತ್ಮಕ, ಸರ್ವೇ, ಯೋಜನೆ ಅನುಮತಿ ಪಡೆಯಬೇಕು. ಮಾರ್ಚ್ 31ರೊಳಗೆ ಕಾಮಗಾರಿ ಆರಂಭಿಸಲು ಆದೇಶ ಕೊಡಬೇಕು. ಬೇಸಿಗೆ ವೇಳೆಯೇ ಕಾಲುವೆ ಕಾಮಗಾರಿ ಮುಗಿಸಬೇಕು. ಜುಲೈ ಸೇರಿ ಇತರೆ ತಿಂಗಳಲ್ಲಿ ಅನುದಾನ ಕೊಟ್ಟರೆ ನೀರಾವರಿ ಸೀಜನ್ ಇರುವುದರಿಂದ ಆಗ ಕಾಮಗಾರಿ ನಿರ್ವಹಿಸಲು ಆಗುವುದಿಲ್ಲ. ಹಾಗಾಗಿ ಜೂನ್ ಒಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದೇನೆ ಎಂದರು.
ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಮೊದಲು ಎಸ್‌ಸಿ, ಎಸ್‌ಟಿ ಸಮುದಾಯದ ಗಂಗಾ ಕಲ್ಯಾಣ ಇತರೆ ಯೋಜನೆಗೆ ಬಳಕೆಯಾಗಬೇಕು. ಬಳಿಕ ಅಚ್ಚುಕಟ್ಟು ಪ್ರದೇಶದಲ್ಲಿ ಮೊರಾರ್ಜಿ, ಚನ್ನಮ್ಮ ವಸತಿ ನಿಲಯ, ಅಂಗನವಾಡಿ ಸೇರಿ ಇತರೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಪ್ರತಿವರ್ಷ ಚರಂಡಿ, ಸಿಸಿ ರಸ್ತೆ ಕೈ ಬಿಡಬೇಕು. ಅನಗತ್ಯ ಖರ್ಚು ಮಾಡಬಾರದು. ನಾವು ಸರ್ಕಾರದ ಅನುದಾನ ಖರ್ಚು ಮಾಡುತ್ತಿದ್ದೇವೆ ಎನ್ನುವ ಬಗ್ಗೆ
ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಇನ್ಮುಂದೆ ಭೂ ಸ್ವಾಧೀನ ಮಾಡದೇ ಯೋಜನೆಯ ಕೆಲಸ
ಪ್ರಾರಂಭಿಸಬೇಡಿ. ಸ್ವಾಧೀನ ಮಾಡಿದ ಬಳಿಕ ಕಾಮಗಾರಿ ಆರಂಭಿಸಿ ಯಾರೋ ಒಬ್ಬ ರೈತ ಅಡೆತಡೆ ಮಾಡಿದರೆ ಯೋಜನೆಯೇ ವಿಳಂಬ
ಆಗುತ್ತದೆ. ಹಾಗಾಗಿ ಎಲ್ಲ ಸ್ವಾಧೀನ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ಅಲ್ಲದೇ, ಒಂದು ಬಾರಿ ಯೋಜನೆ ಮಾಡಿದ ಬಳಿಕ ಅದಕ್ಕೆ ಮತ್ತೆ ಪರಿಷ್ಕೃತ ಯೋಜನೆ ಸಿದ್ಧಪಡಿಸಬಾರದು. ಕ್ರಮಬದ್ಧವಾಗಿ ಯೋಜನೆ ಸಿದ್ಧಪಡಿಸುವಂತೆ ಅಧಿ ಕಾರಿಗಳಿಗೆ
ಸೂಚನೆ ನೀಡಿದ್ದೇನೆ. ಎಸ್‌ಸಿಪಿ, ಟಿಎಸ್‌ಪಿಗೆ ಕೋವಿಡ್‌ನಿಂದ ಸ್ವಲ್ಪ ಅನುದಾನ ಬಿಡುಗಡೆ ವಿಳಂಬವಾಗಿರಬಹುದು. ಆದರೆ 2018ರಿಂದ
ಬಂದಿಲ್ಲ ಎನ್ನುವುದನ್ನು ನಾವು ಒಪ್ಪಲ್ಲ. ಒಂದು ವೇಳೆ ಆ ರೀತಿಯಾಗಿದ್ದರೆ, ಅಧಿಕಾರಿಗಳ ಜೊತೆ ಚರ್ಚಿಸುವೆ. ಬಜೆಟ್‌ನಲ್ಲಿ ನಮಗೆ ಮೀಸಲಿಟ್ಟ
ಅನುದಾನದಲ್ಲಿ ಕೆಲಸ ಮಾಡಬೇಕಿದೆ ಎಂದರು.
ರೈತರು ಹೂಳು ಬಳಸಲಿ: ಹಿರೇಹಳ್ಳ ಡ್ಯಾಂನಲ್ಲಿ ಹೂಳು ಸಂಗ್ರಹವಾದ ಕುರಿತು ಸಭೆಯಲ್ಲಿ ಚರ್ಚೆಯಾಗಿದ್ದು, ಆ ಹೂಳನ್ನು ರೈತರು
ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದೇವೆ. ಹಿರೇಹಳ್ಳದಿಂದ 20,500 ಎಕರೆಗೆ ನೀರು ಕೊಡಬೇಕು. ಆದರೆ ಕೊಡಲು ಆಗಿಲ್ಲ. ಕಾಲುವೆ ಕಾಮಗಾರಿ ಸಕಾಲಕ್ಕೆ ಆಗಿಲ್ಲ. ಆದರೆ ಹಳ್ಳದ ಪಾತ್ರದ ಸಮತಟ್ಟಾದ ಕೆರೆಗಳಿಗೆ ನೀರು ತುಂಬಿಸಲು ಹೇಳಿದ್ದೇನೆ. ಲಿಫ್ಟ್ ಮೂಲಕ ನೀರು ತುಂಬಿಸುವ ಯೋಜನೆ ಬೇಡವೆಂದು ಹೇಳಿದ್ದೇನೆ. ಉಳಿದ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳಲಿದ್ದಾರೆ ಎಂದರು.
ಸಿಂಗಟಾಲೂರು ನೀರಾವರಿ ಸುದೀರ್ಘ ಸಭೆ: ಸಿಂಗಟಾಲೂರು ಏತ ನೀರಾವರಿ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಸಲು ಜನಪ್ರತಿನಿ ಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಅಲ್ಲಿ ಏನು ಸಮಸ್ಯೆಯಿದೆ? ಏನು ಅಡೆತಡೆಯಿದೆ? ಗುಣಮಟ್ಟದ ಬಗ್ಗೆ ತೊಂದರೆಯಿದೆಯೋ
ಎನ್ನುವ ಕುರಿತು ಚರ್ಚಿಸಲು ಅ ಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವು ಕಡೆ ಹನಿ ನೀರಾವರಿ, ಡ್ರಿಫ್ ಯೋಜನೆ ವಿಫಲವಾಗಿದೆ. ಇದರಿಂದ ರೈತರಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಅದರ ಬದಲು ರೈತರೊಂದಿಗೆ ಬೆರೆತು ಹೊಲದ ಕೃಷಿ ಹೊಂಡ, ಕೆರೆ, ಕಟ್ಟೆಗಳಿಗೆ ನೀರು ಹರಿಸಿದರೆ ಆತನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಲಿದ್ದಾನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಕಾಡಾ ಅಧ್ಯಕ್ಷ ತಿಪ್ಪೆರುದ್ರ ಸ್ವಾಮಿ, ಸಂಸದರಾದ ಸಂಗಣ್ಣ ಕರಡಿ, ವೈ.
ದೇವೇಂದ್ರಪ್ಪ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ವೆಂಕಟರಾವ್ ನಾಡಗೌಡ, ಕೆಎನ್‌ಎನ್‌ಎಲ್ ಎಂಡಿ ಮಲ್ಲಿಕಾರ್ಜುನ ಗುಂಗೆ,
ಸಿಇ ಕೃಷ್ಣಾಜಿ ಚವ್ಹಾಣ, ವೃತ್ತ ಅಧಿಧೀಕ್ಷಕ ಬಸವರಾಜ ಸೇರಿ ವಿವಿಧ ಅ ಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Saira Banu: ಎ.ಆರ್.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ
Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
UV Fusion: ನಿಸ್ವಾರ್ಥ ಜೀವ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.