ಕೋವಿಡ್: ರಾಜ್ಯದಲ್ಲಿಂದು 1365 ಪಾಸಿಟಿವ್ ಪ್ರಕರಣ ಪತ್ತೆ ;1558 ಸೋಂಕಿತರು ಗುಣಮುಖ
Team Udayavani, Aug 18, 2021, 7:12 PM IST
ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1365 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 22 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
1558 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 28,74,839 ಕ್ಕೆ ತಲುಪಿದೆ.
ರಾಜ್ಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 21,266 ಇದೆ. ಸೋಂಕಿನ ಪಾಸಿಟಿವಿಟಿ ದರ 0.76% ಇದ್ದು, ಡೆತ್ ರೇಟ್ 1.61% % ಇದೆ.
ಇದನ್ನೂ ಓದಿ :ಕೋವಿಡ್ ಇಳಿಮುಖವಾದರೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಸಾಧ್ಯ
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-2, ಬಳ್ಳಾರಿ- 2, ಬೆಳಗಾವಿ-37, ಬೆಂಗಳೂರು ಗ್ರಾಮಾಂತರ-11, ಬೆಂಗಳೂರು ನಗರ-327, ಬೀದರ್-2, ಚಾಮರಾಜನಗರ-7, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-47, ಚಿತ್ರದುರ್ಗ-11, ದಕ್ಷಿಣ ಕನ್ನಡ-268, ದಾವಣಗೆರೆ-11, ಧಾರವಾಡ-10, ಗದಗ-1, ಹಾಸನ-107, ಹಾವೇರಿ-1, ಕಲಬುರಗಿ -11, ಕೊಡಗು-86 , ಕೋಲಾರ-21, ಕೊಪ್ಪಳ-0, ಮಂಡ್ಯ-25, ಮೈಸೂರು-123, ರಾಯಚೂರು-5, ರಾಮನಗರ-0, ಶಿವಮೊಗ್ಗ-45, ತುಮಕೂರು – 52, ಉಡುಪಿ-97, ಉತ್ತರ ಕನ್ನಡ-51, ವಿಜಯಪುರ-0, ಯಾದಗಿರಿ-0.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.