ಕಿನ್ಯಾ: ಸಾಂತ್ಯದಲ್ಲಿ ಅಭಿವೃದ್ಧಿ ಮರೀಚಿಕೆ
Team Udayavani, Aug 19, 2021, 3:50 AM IST
ಸಾಂತ್ಯ ಸಂಪರ್ಕಿಸುವ ರಸ್ತೆಗೆ ಸೇತುವೆ ನಿರ್ಮಾಣವಾದರೆ ಇಡೀ ಗ್ರಾಮ ಅಭಿವೃದ್ಧಿಯಾದಂತಾಗುತ್ತದೆ. ಗ್ರಾಮದಲ್ಲಿ ನೀರಿನ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಇದ್ದು, ಇದನ್ನು ಪರಿಹರಿಸಬೇಕಿದೆ. ಈ ಬಗ್ಗೆ ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಸಂಬಂಧಪಟ್ಟವರನ್ನು ಗಮನಸೆಳೆಯಲು ಪ್ರಯತ್ನಿಸಲಾಗಿದೆ.
ಕಿನ್ಯಾ: ಕೃಷಿ ಪ್ರಧಾನ ಕಿನ್ಯಾ ಗ್ರಾಮವು ಕೇರಳಗಡಿ ಪ್ರದೇಶದೊಂದಿಗೆ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಸರಹದ್ದನ್ನು ಹೊಂದಿದೆ. ಕೋಟೆಕಾರು, ತಲಪಾಡಿ, ಮಂಜನಾಡಿ, ಕೊಣಾಜೆ ಗ್ರಾಮಗಳ ಗಡಿಯನ್ನು ಹೊಂದಿದೆ. ಶೇ. 70ರಷ್ಟು ಕೃಷಿ ಭೂಮಿಯನ್ನು ಹೊಂದಿರುವ ಕಿನ್ಯಾ ಗ್ರಾಮದ ಅಭಿವೃದ್ಧಿ ಮುಖ್ಯ ರಸ್ತೆ ಮತ್ತು ಅದಕ್ಕೆ ತಾಗಿಕೊಂಡಿರುವ ಒಳರಸ್ತೆಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಮದಲ್ಲಿ ಈವರೆಗೆ ಅಭಿವೃದ್ಧಿ ಕಾಣದಿರುವ ಪ್ರದೇಶ ಇದ್ದರೆ ಸಾಂತ್ಯ ಮಾತ್ರ.
ಅತ್ಯಧಿಕ ಕೃಷಿಕರನ್ನು ಹೊಂದಿರುವ ಸಾಂತ್ಯದ ಜನರು ಬೇಸಗೆಯಲ್ಲಿ ತಾವೇ ನಿರ್ಮಿಸಿರುವ ಕಚ್ಛಾರಸ್ತೆಯಲ್ಲಿ ಸಂಚರಿಸುವ ಅನಿವಾರ್ಯ ಇದ್ದರೆ, ಮಳೆಗಾಲದಲ್ಲಿ ತಲಪಾಡಿ ಹೊಳೆ ಹರಿಯುವುದರಿಂದ ಈ ರಸ್ತೆ ಸಂಪೂರ್ಣ ಕೃತಕ ನೆರೆಗೆ ಒಳಗಾಗಿ ದ್ವೀಪದಲ್ಲಿ (ನಡುಗುಡ್ಡೆ) ವಾಸಿಸುವ ಭಾಗ್ಯ ಇಲ್ಲಿನ ಜನರದ್ದು.
10 ವರ್ಷಗಳಲ್ಲಿ ಕಿನ್ಯಾ ಗ್ರಾ.ಪಂ.ಹಲವಾರು ಕೋಟಿ ರೂ.ಗಳನ್ನು ವ್ಯಯಿಸಿ ಮೂಲ ಸೌಕರ್ಯ ಅಭಿವೃದ್ಧಿ ಕಂಡರೂ ಗ್ರಾಮದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಮಾಧವಪುರದಿಂದ ಸಾಂತ್ಯ ಮಾರ್ಗವಾಗಿ ಕೇರಳ ಗಡಿಪ್ರದೇಶವಾದ ನೆತ್ತಿಲಪದವು ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯ ಕೃಷಿಕರು ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಟ್ಟು ಕಚ್ಛಾ ರಸ್ತೆ ನಿರ್ಮಾಣ ಮಾಡಿ ಐದು ವರ್ಷಗಳಿಂದ ಸಾಂತ್ಯ ಬಳಿ ಹೊಳೆಗೆ ಸೇತುವೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ ಬೇಡಿಕೆ ಇಟ್ಟರೂ ಈವರೆಗೆ ಈಡೇರಿಲ್ಲ.
ರಸ್ತೆ ನಿರ್ಮಾಣ ಅಗತ್ಯ
ಸಾಂತ್ಯ ಪ್ರದೇಶದ ಸುಮಾರು 250 ಕುಟುಂಬಗಳಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ. ಮಳೆಗಾಲ ದಲ್ಲಿ ವಿದ್ಯಾರ್ಥಿಗಳು, ಆರೋಗ್ಯ, ಪೋಸ್ಟ್ ಆಫೀಸ್ ಸಹಿತ ದೈನಂದಿನ ಕಾರ್ಯಗಳಿಗೆ ವಾಹನ ಇಲ್ಲದವರು ಕೆಸರು ತುಂಬಿದ ನೀರಿನಲ್ಲಿ ಸಂಚರಿಸಿ ಮುಖ್ಯ ರಸ್ತೆ ತಲುಪುವ ಸ್ಥಿತಿಯಿದ್ದರೆ.
ವಾಹನವಿದ್ದವರು ಮೂರು ಕಿ.ಮೀ. ಬದಲು ನೆತ್ತಿಲಪದವು ಮಂಜೇಶ್ವರ ಗೇರುಕಟ್ಟೆ ರಸ್ತೆಯಾಗಿ 15 ಕಿ.ಮೀ. ಕ್ರಮಿಸಿ ಮಂಗಳೂರು ತಲುಪುವ ಸ್ಥಿತಿಯಿದೆ. ಸಾಂತ್ಯ ಭಾಗದ
ಹೆಚ್ಚಿನ ಕೃಷಿಕರು ವಲಸೆ ಹೋಗಿ ಮುಖ್ಯರಸ್ತೆ ಸಂಪರ್ಕಿಸುವ ಪ್ರದೇಶದಲ್ಲಿ ಮನೆ ಕಟ್ಟಿ ವಾಸಮಾ ಡುತ್ತಿದ್ದರೆ, ಬಡ ಕೃಷಿಕರು ಮಾತ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೆತ್ತಿಲಪದವು ಸಂಪರ್ಕಿಸುವ ಪಂಚಾಯತ್ ಹಿಂಭಾಗದ ರಹಮತ್‌ನಗರದಿಂದ ಕುರಿಯ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೂ ಬೇಡಿಕೆಯಿದ್ದು, ನಡುಪಡೆ ಬಳಿ ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದ್ದು, ಈ ವ್ಯಾಪ್ತಿಯಲ್ಲಿ ಒಂದು ಕಿ.ಮೀ. ರಸ್ತೆ ನಿರ್ಮಾಣವಾಗಬೇಕಾಗಿದೆ.
ಇತರ ಸಮಸ್ಯೆಗಳೇನು? :
- ಕಿನ್ಯಾದ ಸಾಂತ್ಯ ಸಹಿತ ಅಷ್ಟೇ ಒಳರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ.
- ಕಿನ್ಯಾದಲ್ಲಿರುವ ಉಪ ಆರೋಗ್ಯ ಕೇಂದ್ರ ವಾರಕ್ಕೊಮ್ಮೆ ಜನರಿಗೆ ಸೇವೆ ನೀಡುತ್ತಿತ್ತು. ಕೋವಿಡ್ ಬಳಿಕ ಸಂಪೂರ್ಣ ಬಾಗಿಲು ಹಾಕಿದ್ದು ಜನರು ದೂರದ ಕೋಟೆಕಾರು ಅಥವಾ ನಾಟೆಕಲ್ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾಗಿದೆ.
- ಗ್ರಾಮದಲ್ಲಿ ಎರಡು ಕಿರಿಯ, ಎರಡು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಪ್ರೌಢಶಾಲೆ, ಪದವಿಪೂರ್ವ ಶಾಲೆಗಳಿಗೆ ಬೇಡಿಕೆಯಿದೆ.
ಜ ಗ್ರಾಮದ ಅರ್ಧದಷ್ಟು ಪ್ರದೇಶದಲ್ಲಿ ಖಾಸಗಿಯಾಗಿ ಕಸ ವಿಲೇವಾರಿ ನಡೆದರೆ, ಉಳಿದ ಪ್ರದೇಶದಲ್ಲಿ ಕಸವಿಲೇವಾರಿ ಸಮಸ್ಯೆಯಿದೆ. ಈಗಾಗಲೇ ಕಸವಿಲೇವಾರಿಗೆ ಉಕ್ಕುಡ ಸಮೀಪದ ವಾದಿತೈಬಾ ಬಳಿ 50 ಸೆಂಟ್ಸ್ ಜಾಗ ಮೀಸಲಿಡಲಾಗದೆ. ಇಲ್ಲಿ ಅಂತಾರಾಜ್ಯ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಕಸ ಎಸೆಯುವ ಸಮಸ್ಯೆ ಇದ್ದರೆ ವಾದಿತೈಬಾ ಬಳಿ ನಿರ್ಜನ ಪ್ರದೇಶದಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಂಡರೂ ರಸ್ತೆ ಬದಿ ತ್ಯಾಜ್ಯ ಎಸೆಯುವವರ ಸಮಸ್ಯೆ ಮುಂದುವರಿದಿದೆ.
ಜ ಈ ಪ್ರದೇಶದಲ್ಲಿ ಭಾಗಶಃ ಕುಡಿಯುವ ನೀರಿನ ಸಮಸ್ಯೆಯಿದ್ದು, ಮುಖ್ಯವಾಗಿ ನೆತ್ತಿಲ, ಮಿತ್ತಡದಲ್ಲಿ ಸಮಸ್ಯೆಯಿದೆ. ಜಲಜೀವನ್ ಮಿಷನ್‌ನಡಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಮೀಸಲಿಟ್ಟಿದ್ದು, ಮಂಗಳೂರು ವಿಧಾನಸಭೆ ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಈ ಗ್ರಾಮದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ.
-ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.