ಹಿಂಸೆಯ ನಡುವೆ ಸರಕಾರ ಕಸರತ್ತು
Team Udayavani, Aug 19, 2021, 6:40 AM IST
ಕಾಬೂಲ್: ಅಫ್ಘಾನಿಸ್ಥಾನದಲ್ಲಿ ಉಗ್ರರು ಹಿಂಸಾಚರ ನಡೆಸಲಾರಂಭಿಸಿರುವಂತೆಯೇ ಆ ದೇಶದಲ್ಲಿ ತಮ್ಮ ಸರಕಾರ ರಚನೆ ಮಾಡುವತ್ತ ತಾಲಿಬಾನಿಗಳು ನಿರತರಾಗಿದ್ದಾರೆ. ಅದಕ್ಕಾಗಿ ಅಫ್ಘಾನಿಸ್ಥಾನದ ಮಾಜಿ ಅಧ್ಯಕ್ಷ ಹಮೀದ್ ಕಜೈì ಕತಾರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್‌ನ ರಾಜಕೀಯ ನಿಯೋಗದ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖ ಕಮಾಂಡರ್ ಹಾಗೂ ಹಕ್ಕಾನಿ ಉಗ್ರರ ನೆಟ್‌ವರ್ಕ್ ಗುಂಪಿನ ಹಿರಿಯ ನಾಯಕ ಅನಾಸ್ ಹಕ್ಕಾನಿ ಕೂಡ ಭಾಗಿಯಾಗಿದ್ದರು.
ಕರ್ಜೈ ಜತೆಗೆ ನಿಕಟಪೂರ್ವ ಸರಕಾರದಲ್ಲಿ ತಾಲಿಬಾನಿಗಳ ಜತೆಗೆ ಪ್ರಮುಖ ಸಂಧಾನಕಾರರಾಗಿದ್ದ ಡಾ| ಅಬ್ದುಲ್ಲಾ ಕೂಡ ಉಪಸ್ಥಿತರಿದ್ದರು. ಎರಡರಿಂದ ಮೂರು ದಿನಗಳ ಒಳಗಾಗಿ ಹೊಸ ಸರಕಾರ ರೂಪುರೇಷೆ ಸಿದ್ಧವಾಗಲಿದೆ ಎಂಬ “ಅಸೋಸಿಯೇಟೆಡ್ ಪ್ರಸ್’ ವರದಿ ಮಾಡಿರುವಂತೆಯೇ ತಾಲಿಬಾನಿಗಳ ಸಮಿತಿಯೇ ಸರಕಾರ ನಡೆಸುವ ಸಾಧ್ಯತೆ ಇದೆ. ಅದಕ್ಕೆ ಉಗ್ರರ ಪ್ರಮುಖ ನಾಯಕ ಅಖುಂದ್ಜಾದಾ ಮುಖ್ಯಸ್ಥನಾಗಲಿದ್ದಾರೆ. ಈ ನಡುವೆ, “ಅಫ್ಘಾನಿಸ್ಥಾನದಲ್ಲಿ ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆ ಇರುವುದಿಲ್ಲ ಎಂದು ತಾಲಿಬಾನ್‌ನ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಫ್ಘಾನ್‌ನಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ
ಸರಕಾರ, ಇಸ್ಲಾಂ ತಣ್ತೀಗಳಿಗೆ ಅನುಗುಣವಾಗಿಯೇ ಆಡಳಿತ ನಡೆಸುತ್ತದೆ’ ಎಂದು ಅವರು ತಿಳಿಸಿದ್ದಾರೆ. ಈ ನಡುವೆ, ಅಫ್ಘಾನಿ ಸ್ಥಾನದ ಜೈಲುಗಳಿಂದ ಪರಾರಿಯಾಗಿರುವ ಸಹಸ್ರಾರು ತಾಲಿಬಾನಿ ಕೈದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ಥಾನವನ್ನು ಪ್ರವೇಶಿಸಿದ್ದಾರೆಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಆ. 15ರಂದು ಕಾಬೂಲ್ ತಾಲಿಬಾನಿಗಳು ವಶಕ್ಕೆ ಬಂದ ಬೆನ್ನಲ್ಲಿಯೇ ಕಜೈì ಮತ್ತು ಇತರರು ಸರಕಾರ ರಚನೆಯ ಕಸರತ್ತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರಕಾರದಲ್ಲಿ ತಾಲಿಬಾನೇತರ ವ್ಯಕ್ತಿಗಳಿರಲಿ ಎಂಬ ಕಳಕಳಿಯೂ ಇದೆ. ಹಕ್ಕಾನಿಗೂ ಮುನ್ನವೇ, ತಾಲಿಬಾನ್‌ನ ಹಿರಿಯ ನಾಯಕ ಆಮಿರ್ ಖಾನ್ ಮುತ್ತಾಕಿ, ಕಜೈ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ, ತಾಲಿಬಾನಿಗಳ ಸರಕಾರವಿದ್ದಾಗ ಮುತ್ತಾಕಿ, ಶಿಕ್ಷಣ ಸಚಿವರಾಗಿದ್ದರು. ಪುನಃ ರಚನೆಯಾಗಲಿರುವ ತಾಲಿಬಾನ್ ಸರಕಾರದಲ್ಲಿ ತಮ್ಮ ಸೇರ್ಪಡೆಗಾಗಿ ಅವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅವರಂತೆ, ಹಿಂದಿನ ತಾಲಿಬಾನ್ ಸರಕಾರದಲ್ಲಿ ಸಚಿವರಾಗಿದ್ದ ಅನೇಕರು ಕರ್ಜಾಯ್ ಹಾಗೂ ಇನ್ನಿತರ ಹಿರಿಯ ಅಫ್ಘಾನಿಸ್ಥಾನದ ನಾಯಕರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ.
ಶಾಲೆಗೆ ಹಾಜರಾದ ವಿದ್ಯಾರ್ಥಿನಿಯರು!: ತಾಲಿಬಾನ್ ಹಿಡಿತಕ್ಕೆ ಬಂದಿರುವ ಅಫ^ನ್ ಹೆರಾತ್ ನಗರದಲ್ಲಿ ಶಾಲೆಗಳು ಪುನರಾರಂಭವಾಗಿದ್ದು, ವಿದ್ಯಾರ್ಥಿನಿಯರು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಅವರಿಗೆ ಕಪ್ಪು ಬಣ್ಣದ ಉಡುಗೆ, ಬಿಳಿ ಬಣ್ಣದ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಈ ಕುರಿತಂತೆ ಪ್ರಕಟನೆ ನೀಡಿರುವ ತಾಲಿಬಾನ್‌ನ ವಕ್ತಾರ ಝಬೀವುಲ್ಲಾ ಮುಜಾಹಿದ್, ಇಸ್ಲಾಂನ ತಣ್ತೀಗಳಿಗೆ ಅನುಗುಣವಾಗಿ ಮಹಿಳೆಯರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಅಘ್ಘನ್ ಕುರಿತು ಪ್ರಧಾನಿ ಮಹತ್ವದ ಸಭೆ: ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬುಧವಾರದಂದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಮಂಗಳವಾರದಂದು, ಪ್ರಧಾನಿ ನೇತೃತ್ವದಲ್ಲಿ ಆಂತರಿಕ ಭದ್ರತೆ ಮೇಲಿನ ಸಂಪುಟ ಸ್ಥಾಯೀ ಸಮಿತಿ (ಸಿಸಿಎಸ್) ಸಭೆ ಜರಗಿತ್ತು. ಅಫ್ಘಾನಿಸ್ತಾನದಲ್ಲಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಬೇಕೆಂದು ಅಧಿಕಾರಿಗಳಿಗೆ ಪ್ರಧಾನಿ ಸೂಚಿಸಿದ್ದರು.
ಸಂಸದನ ವಿರುದ್ಧ ದೇಶದ್ರೋಹ ಕೇಸು :
ಲಕ್ನೋ: ಸಮಾಜವಾದಿ ಪಕ್ಷದ ಮುಖಂಡ ಮತ್ತು ಸಂಭಾಲ್ ಕ್ಷೇತ್ರದ ಸಂಸದ ಶಫಿಖರ್ ರಹಮಾನ್ ಬಖ್ì ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ. ತಾಲಿಬಾನ್ ಉಗ್ರರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಕೆ ಮಾಡಿ ಅವರು ಮಂಗಳವಾರ ಹೇಳಿಕೆ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚಂಭಲ್ ಜಿಲ್ಲಾ ಎಸ್‌ಪಿ ಚರ್ಕೇಶ್ ಮಿಶ್ರಾ ಹೇಳಿದ್ದಾರೆ. ಇದರ ಜತೆಗೆ ಇನ್ನೂ ಇಬ್ಬರ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಆದರೆ, ಆ ರೀತಿ ಹೇಳಿಕೆಯನ್ನೇ ನೀಡಿಲ್ಲ ಎಂದು ಸಂಸದ ಶಫಿಕರ್ “ಎಎನ್‌ಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಹಿಳಾ ಗವರ್ನರ್ ಸೆರೆ :
ತಾಲಿಬಾನ್ ವಿರುದ್ಧ ಅಫ್ಘಾನ್‌ನಲ್ಲಿ ಬಂದೂಕು ಹಿಡಿದು ಹೋರಾಟಕ್ಕೆ ಇಳಿದ ನಾಯಕಿ ಸಲೀಮಾ ವಝರಿ ಅವರನ್ನು ಉಗ್ರರು ಬಂಧಿಸಿದ್ದಾರೆ. ಚಾಹರ್ ಕಿಂಟ್ ಪ್ರಾಂತ್ಯದಲ್ಲಿ 100ಕ್ಕೂ ಅಧಿಕ ಉಗ್ರರಿಗೆ ಶಿಕ್ಷೆ ವಿಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಆ ಪ್ರಾಂತ್ಯದ ಮಹಿಳಾ ಗವರ್ನರ್ ಕೂಡ ಆಗಿದ್ದರು. ಅಫ್ಘಾನ್‌ನಲ್ಲಿದ್ದ ಮೂವರು ಮಹಿಳಾ ಗವರ್ನರ್‌ಗಳ ಪೈಕಿ ಸಲೀಮಾ ಕೂಡ ಒಬ್ಬರು. ಕಾಬೂಲ್ ವಶವಾದ ಮೇಲೂ ತನ್ನ ಪ್ರಾಂತ್ಯವನ್ನು ಸುರಕ್ಷಿತವಾಗಿಸಲು ಸಲೀಮಾ ಶತಾಯಗತಾಯ ಯತ್ನಿಸಿದ್ದರು. ರಾಷ್ಟ್ರಾಧ್ಯಕ್ಷ ಸೇರಿದಂತೆ ಬಹುತೇಕ ನೇತಾರರು ಅಫ್ಘಾನ್‌ನಿಂದ ಕಾಲ್ಕಿತ್ತರೂ ಈಕೆ ಉಗ್ರರ ವಿರುದ್ಧ ದಿಟ್ಟ ಸಮರ ಕೈಗೊಂಡಿದ್ದರು. ಪ್ರಸ್ತುತ ಸಲೀಮಾರನ್ನು ಉಗ್ರರು ಸೆರೆಹಿಡಿದಿದ್ದು, ಅನಂತರದ ಮಾಹಿತಿಗಳು ಮಾಧ್ಯಮಗಳಿಗೆ ಲಭ್ಯವಾಗಿಲ್ಲ.
ಅಬ್ದುಲ್ ಅಲಿ ಪ್ರತಿಮೆ ಧ್ವಂಸ :
ದಶಕಗಳ ಹಿಂದೆ, ತಾಲಿಬಾನಿಗಳ ವಿರುದ್ಧ ಹೋರಾಡಿದ್ದ ಅಬ್ದುಲ್ ಅಲಿ ಮಝಾರಿ ಎಂಬ ಉಗ್ರನ ಪುತ್ಥಳಿಯನ್ನು ತಾಲಿಬಾನಿಗಳು ಧ್ವಂಸಗೊಳಿಸಿ ದ್ದಾರೆ. ಬಾಮ್ಯನ್ ಪ್ರಾಂತ್ಯದಲ್ಲಿ ನಿಲ್ಲಿಸಲಾಗಿದ್ದ ಅವರ ಪ್ರತಿಮೆಯನ್ನು ಬಾಂಬ್‌ಗಳ ಮೂಲಕ ಉಡಾಯಿಸಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. 90ರ ದಶಕದಲ್ಲಿ ನಡೆದಿದ್ದ ಅಫ್ಘಾನಿಸ್ಥಾನ ದಂಗೆಯಲ್ಲಿ ತಾಲಿಬಾನಿಗರ ವಿರುದ್ಧ ಮಝಾರಿ ಅವರ ಪಡೆ ಹೋರಾಟ ನಡೆಸಿತ್ತು. ಆದರೆ, 1996ರಲ್ಲಿ ತಾಲಿಬಾನಿಗಳು, ಮಝಾರಿಯನ್ನು ಹತ್ಯೆ ಮಾಡಿದ್ದರು.
ಕಾಮಗಾರಿ ಪೂರ್ತಿಗೊಳಿಸಲು ತಾಲಿಬಾನ್ ಅವಕಾಶ :
ಅಫ್ಘಾನ್‌ನಲ್ಲಿ ಭಾರತ ಕೈಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಿಕೊಡುವಂತೆ ತಾಲಿಬಾನ್ ಬಯಕೆ ಮುಂದಿಟ್ಟಿದೆ. “ಭಾರತ ಸರಕಾರ ಕೈಗೊಂಡಿರುವ ಯೋಜನೆಗಳು ಜನಪರವಾಗಿದೆ. ಅವರು ಅಪೂರ್ಣಗೊಂಡ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮಿಂದ ಯಾವುದೇ ಅಭ್ಯಂತರವಿಲ್ಲ’ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಪಾಕಿಸ್ಥಾನದ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾನೆ. ಅಫ್ಘಾನ್‌ನಲ್ಲಿ ಸಂಸತ್ ಭವನ ನಿರ್ಮಾಣ ಸೇರಿದಂತೆ 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ಭಾರತ ವಿವಿಧ ಅಭಿವೃದ್ಧಿ ಯೋಜನೆ ಕೈಗೊಂಡಿತ್ತು. ಚಾಲ್ತಿಯಲ್ಲಿರುವ ಸಲ್ಮಾ, ಶತೂತ್ ಅಣೆಕಟ್ಟು, ರಸ್ತೆ ನಿರ್ಮಾಣಗಳು ಅರ್ಧಕ್ಕೇ ನಿಂತಿವೆ. ಅವುಗಳನ್ನು ಪೂರೈಸಿಕೊಡುವಂತೆ ತಾಲಿಬಾನಿ ಸಂಘಟನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.