ಸಿ.ಟಿ. ಸ್ಕ್ಯಾನ್‌ನಿಂದ 30 ಸೆಕೆಂಡ್‌ನಲ್ಲಿ ಸೋಂಕು ಪತ್ತೆ
ಅತಿ ಕಡಿಮೆ ಬೆಲೆಯಲ್ಲಿ ಜನರಿಗೆ ಸೌಲಭ್ಯ; ಜನರಲ್ ವಾರ್ಡ್ ಸಂಪೂರ್ಣ ಉಚಿತ: ಮಾಜಿ ಡಿಸಿಎಂ ಪರಮೇಶ್ವರ್
Team Udayavani, Aug 19, 2021, 3:22 PM IST
ನೆಲಮಂಗಲ: ಸಿದ್ಧಾರ್ಥ ಸಂಸ್ಥೆ 30 ಸೆಕೆಂಡ್‌ನಲ್ಲಿ ಕೋವಿಡ್ ಸೋಂಕು ಪತ್ತೆ ಮಾಡುವ ವಿಶೇಷ ತಂತ್ರಜ್ಞಾನದ ಸಿ.ಟಿ. ಸ್ಕ್ಯಾನ್ ಆರಂಭಿಸಿದ್ದು, ಅತಿ ಕಡಿಮೆ ಬೆಲೆಯಲ್ಲಿ ಜನರಿಗೆ ಸೌಲಭ್ಯ ನೀಡಲಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ತಿಳಿಸಿದರು
ತಾಲೂಕಿನ ಟಿ.ಬೇಗೂರು ಸಮೀಪದ ಶ್ರೀಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಸಿ.ಟಿ. ಸ್ಕ್ಯಾನ್ ಸೆಂಟರ್, ವೆಲ್ಟಿಲೇಟರ್ ಬೆಡ್ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಕೋವಿಡ್ ಮೂರನೇ ಅಲೆ ಬರುತ್ತಿರುವ ಕಾರಣ ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ಕೋವಿಡ್ ದೃಢವಾಗದೇ ಸಿ.ಟಿ. ಸ್ಕ್ಯಾನ್‌ಗಾಗಿ ಬೆಂಗಳೂರು ಅಥವಾ ತುಮಕೂರಿನ ಭಾಗಗಳಿಗೆ ಜನರು ಹೋಗ ಬೇಕಾಗಿತ್ತು. ಆದರೆ, ಟಿ.ಬೇಗೂರಿನಿಂದ 50 ಕಿ.ಮೀ ವ್ಯಾಪ್ತಿಯಲ್ಲಿರುವ ಏಕೈಕ ಆಧುನಿಕ ಸಿ.ಟಿ. ಸ್ಕ್ಯಾನ್ ಉಪಕರಣವನ್ನು ಸಿದ್ಧಾರ್ಥ ಸಂಸ್ಥೆ ಪರಿಚಯಿಸಿದೆ. ಕೇವಲ 1500 ಸಾವಿರ ಹಣದಲ್ಲಿ ಸೌಲಭ್ಯ ನೀಡಲು ಬದ್ಧವಾಗಿದ್ದೇವೆ. ತುರ್ತು ಸಮಯದಲ್ಲಿ ಸಿ.ಟಿ. ಸ್ಕ್ಯಾನ್ ಇರುವ ಆಸ್ಪತ್ರೆ ಯೊಂದು ಬಹಳಷ್ಟು ಹಣಪಡೆದು ಜನರಿಗೆ ಸಮಸ್ಯೆ ಮಾಡಿರುವುದು ತಿಳಿದಿದೆ. ನಾವು ಹಣ ಮಾಡಲು ಬಂದಿಲ್ಲ, ಸೇವೆ ಮಾಡಲು ಬಂದಿದ್ದೇವೆ. ಜನರಲ್ ವಾರ್ಡ್ ಸಂಪೂರ್ಣ ಉಚಿತವಾಗಿದ್ದು, ಐಸಿಯು ಬೆಡ್ 24 ಗಂಟೆಗೆ ಕೇವಲ 2 ಸಾವಿರ, ವೆಲ್ಟಿಲೇಟರ್ ಇರುವ ಐಸಿ ಯುಗೆ 3250 ರೂ. ಮಾತ್ರ ಪಡೆದುಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ:ಖೂಬಾ ಮೆರವಣಿಗೆಯಲ್ಲಿ ಗಾಳಿಯಲ್ಲಿ ಗುಂಡು ಪ್ರಕರಣ: ಕರ್ತವ್ಯ ಲೋಪ ಎಸಗಿದ 3 ಪೊಲೀಸರ ಅಮಾನತು!
ಕ್ಷೇತ್ರದ ಜನರಿಗೆ ಬಹಳ ಅನುಕೂಲ: ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಉತ್ತಮ ತಂತ್ರಜ್ಞಾನವಿರುವ ಯಂತ್ರೋಪಕರಣಗಳ ಸೆಂಟರ್ ಉದ್ಘಾಟನೆ ಮಾಡಿರುವುದು ಸ್ವಾಗತಾರ್ಹ. ಕ್ಷೇತ್ರದ ಜನರಿಗೆ ಬಹಳಷ್ಟು ಅನುಕೂಲವಾಗಿದ್ದು, ಅತಿ
ಕಡಿಮೆ ಬೆಲೆಯಲ್ಲಿ ಸೌಲಭ್ಯ ನೀಡಲಾಗುತ್ತಿದೆ. ಕೋವಿಡ್ ಮೂರನೇ ಅಲೆಯ ನಿಯಂತ್ರಣ ಹಾಗೂ ನಿರ್ವಹಣೆಗೆ ಸಿದ್ಧಾರ್ಥ ಸಂಸ್ಥೆ ಅನುಕೂಲವಾಗಿದೆ ಎಂದರು.
ಮಕ್ಕಳ ಐಸಿಯು ವ್ಯವಸ್ಥೆ: ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಎಂಬ ಆತಂಕ ಇರುವುದರಿಂದ ಮಕ್ಕಳಿಗಾಗಿ ವಿಶೇಷ ಐಸಿಯು ಬೆಡ್ ವ್ಯವಸ್ಥೆ ಹಾಗೂ ವೆಂಟಿಲೇಟರ್ ಬೆಡ್ ವ್ಯವಸ್ಥೆ ಸೇರಿದಂತೆ ಸಣ್ಣ ಮಕ್ಕಳಿಗೂ ವಿಶೇಷ ಸೌಲಭ್ಯ ಮಾಡಲಾಗಿದೆ ಎಂದರು.
120 ಸಂಸ್ಥೆಗಳ ಮೂಲಕ ಶಿಕ್ಷಣ ನೀಡುತ್ತಿರುವ, ಗೃಹ ಇಲಾಖೆ ಸೇರಿದಂತೆ ಅನೇಕ ಇಲಾಖೆ ಸಚಿವ ಸ್ಥಾನ ಪಡೆದು ಉಪಮುಖ್ಯಮಂತ್ರಿಯಾಗಿ ಅನುಭವವಿರುವ ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಬಯಕೆ ನನಗಿದೆ. ಪಕ್ಷಾತೀತವಾಗಿ ಸಿಎಂ ಆಗ ಬೇಕಾಗಿದ್ದು, ದಲಿತ ಸಿಎಂ ಎಂಬ ವಿಚಾರಗಳು ಬರಬಾರದು.ಅವರ ಸೇವೆ ನೋಡಿ ಸ್ಥಾನ ನೀಡಬೇಕು. ಪರಮೇ ಶ್ವರ್ ಸಿಎಂ ಆಗಬೇಕು ಎನ್ನುವ ವಿಚಾರ ನನ್ನ ವೈಯಕ್ತಿಕ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.
ಬೇರೆ ಅರ್ಥ ಕಲ್ಪಿಸುವುದು ಬೇಡ: ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ, ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರ ಅಭಿಮಾನದ ಮಾತನ್ನು ಹೇಳಿದ್ದಾರೆ. ಅವರು ಜೆಡಿಎಸ್ ಶಾಸಕರಾಗಿರುವುದರಿಂದ ಬೇರೆ ಅರ್ಥ ಕಲ್ಪಿಸುವುದು ಬೇಡ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಸಿಎಂ ಸ್ಥಾನದ ವಿಚಾರ ಸಿಎಲ್‌ಪಿ ಸಭೆಯಲ್ಲಿ ತೀರ್ಮಾನವಾಗಿ ಹೈಕಮಾಂಡ್‌ನ ಹಿರಿಯರ ಚರ್ಚೆಯ ನಂತರ ಘೋಷಣೆಯಾಗುತ್ತದೆ. ಅದರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜತೆ ನಿಂತು ಕೆಲಸ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂದರು. ಸಿದ್ಧಾರ್ಥ ವಿವಿ ಕುಲಪತಿ ಡಾ.ಬಾಲಕೃಷ್ಣಪ್ಪ, ತುಮಕೂರು ಸಿದ್ಧಾರ್ಥ ಕಾಲೇಜಿನ ಪ್ರಾಂಶುಪಾಲ ಎಸ್.ಸಿ ಮಹಾಪಾತ್ರ, ಉಪಪ್ರಾಂಶುಪಾಲ ಶ್ರೀನಿವಾಸ್, ಸಿದ್ಧಾರ್ಥ ಸಂಸ್ಥೆಯ ಪ್ರಾಂಶುಪಾಲ ವಾಸುದೇವ್, ಮುಖ್ಯಸ್ಥ ದೇವದಾಸ್, ಡಾ.ಮನೋಹರ್, ಸುದೀಪ್ ಹಾಜರಿದ್ದರು.
ತುರ್ತು ಸಮಯದಲ್ಲಿಯೂ ಸಹ ಆಸ್ಪತ್ರೆಯೊಂದರಲ್ಲಿ ಸಿ.ಟಿ.ಸ್ಕ್ಯಾನ್‌ಗೆ 6 ಸಾವಿರಕ್ಕೂ ಹೆಚ್ಚು ಹಣ ಪಡೆದು ಜನರನ್ನು ಸುಲಿಗೆ ಮಾಡಿರುವುದು ದುರಂತವೇ ಸರಿ. ಇಂತಹ ಆಸ್ಪತ್ರೆಗಳು ಜನರ ಹಣದ ಮೇಲೆ ಸುಖಪಡೆಯಲು ಮುಂದಾಗುವುದು ಸರಿಯಲ್ಲ. ಮೂರನೇ ಅಲೆಯ ಮೊದಲೇ
ಸಿ.ಟಿ. ಸ್ಕ್ಯಾನ್ ಸೆಂಟರ್ ತಂದಿರುವುದು ಬಹಳಷ್ಟು ಪ್ರಯೋಜನವಾಗಿದೆ.
– ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.