“ಪ್ರಕೃತಿಯನ್ನು ಪೂಜಿಸುವ ಹಬ್ಬ ನಾಗರ ಪಂಚಮಿ’
ಮೀರಾರೋಡ್ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ನಾಗರ ಪಂಚಮಿ
Team Udayavani, Aug 20, 2021, 2:22 PM IST
ಮುಂಬಯಿ: ಹುತ್ತದ ಮೂಲಕ ಎಚ್ಚರಿಸಿ, ಬಂಜರು ಭೂಮಿಯನ್ನು ಫಲವತ್ತಾಗಿಸಿ, ಹಸುರು ಕ್ರಾಂತಿಯ ಮೂಲಕ ಬಡತನ ನೀಗಿಸಿ ಎಂದು ಸಂದೇಶ ನೀಡುವ ನಾಗ ಕೃಷಿಯ ಆರಾಧಕ. ನಾಗಬನಗಳ ಮೂಲಕ ಅರಣ್ಯ ಸಂರಕ್ಷಿಸಿ, ನೊಗ ಹೋದಲ್ಲಿ ನಾಗಬೀದಿ ಇರದು ಎಂಬ ಅಭಯದಲ್ಲಿ ರೈತರನ್ನು ಕಾಪಾಡುವ ಕಣ್ಣಿಗೆ ಕಾಣುವ ದೇವರು. ನಾಗರ ಪಂಚಮಿ ಪ್ರಕೃತಿಯನ್ನು ಪೂಜಿಸುವ ಹಬ್ಬವಾಗಿದೆ ಎಂದು ಮೀರಾರೋಡ್ ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ತಿಳಿಸಿದರು.
ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಆ. 13ರಂದು ನಾಗರಪಂಚಮಿಯ ವೈದಿಕ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ವಿಶಿಷ್ಟವಾದ ಹಬ್ಬವಾಗಿರುವ ನಾಗರ ಪಂಚಮಿ ಇಂದಿಗೂ ಸಾತ್ವಿಕತೆ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಂಡಿದೆ. ಧಾರ್ಮಿಕ ಆಚರಣೆಗಳನ್ನು ತಥಾಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ಹಸ್ತಾಂತರ ಮಾಡೋಣ ಎಂದರು.
ಇದನ್ನೂ ಓದಿ:ಹಿರಿಯ ಪತ್ರಕರ್ತ ಸಿ.ಎಸ್.ದ್ವಾರಕಾನಾಥ್ ಕಾಂಗ್ರೆಸ್ ಗೆ ಸೇರ್ಪಡೆ
ಮಠದ ಟ್ರಸ್ಟಿ ಮತ್ತು ಪ್ರಬಂಧಕ ವಿದ್ವಾನ್ ವಾಸುದೇವ ಎಸ್. ಉಪಾಧ್ಯಾಯ ಮಾತ ನಾಡಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಇಚ್ಛೆ, ಸಂಕಲ್ಪ ಹಾಗೂ ಮಾರ್ಗ ದರ್ಶನದಂತೆ ಇಂದಿನ ಎಲ್ಲ ಕಾರ್ಯಕ್ರಮಗಳು ಸಾಮಾಜಿಕ ಅಂತರ ಹಾಗೂ ಸರಕಾರದ ಕೋವಿಡ್ ನಿಯಮದಂತೆ ಸರಳವಾಗಿ ನಡೆದಿದೆ ಎಂದು ಹೇಳಿ, ಸಮಸ್ತ ಜನರಿಗೆ ಶುಭ ಹಾರೈಸಿದರು.
ವಿದ್ವಾನ್ ವಾಸುದೇವ ಎಸ್. ಉಪಾಧ್ಯಾಯ, ಗೋಪಾಲ ಭಟ್, ಭಕ್ರೆ ಸಂತೋಷ ಭಟ್, ಕುಮಾರಸ್ವಾಮಿ ಭಟ್, ಪ್ರಶಾಂತ್ ಭಟ್, ಕೃಷ್ಣಮೂರ್ತಿ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪುಣ್ಯಾಹವಾಚನ, ನವಕ ಕಲಶ ಪ್ರತಿಷ್ಠಾಪನೆ, ಸಾಮೂಹಿಕ ಆಶ್ಲೇಷಾ ಬಲಿ, ಕ್ಷೀರಾಭಿಷೇಕ, ಪಂಚಾಮೃತ ಸೀಯಾಳ ಅಭಿಷೇಕ, ಸನ್ನಿಧಿಯ ಪ್ರಧಾನ ಶ್ರೀನಿವಾಸ ದೇವರಿಗೆ ವಿಶೇಷ ಪೂಜೆ, ಶ್ರೀ ಬಾಲಾಜಿ ಸನ್ನಿಧಿ ಭಜನ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮ ನೆರವೇರಿತು. ಕರಮಚಂದ ಗೌಡ, ರಾಮಚಂದ್ರ ಹಿಪ್ಪರಗಿ ಮೊದಲಾದವರು ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.