ಮಧ್ಯ ರೈಲ್ವೇಯಿಂದ ಡಿಜಿ ಲಾಕರ್ ಸೌಲಭ್ಯ
ಸಿಎಸ್‌ಎಂಟಿ ನಿಲ್ದಾಣದಲ್ಲಿ ದೇಶದ ಮೊದಲ ಡಿಜಿ ಲಾಕರ್
Team Udayavani, Aug 20, 2021, 2:34 PM IST
ಮುಂಬಯಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೇ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ನಿಲ್ದಾಣದಲ್ಲಿ “ಡಿಜಿ’ ಲಾಕರ್ ಸೌಲಭ್ಯವನ್ನು ಆರಂಭಿಸಿದೆ.
ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದ ದೇಶದ ಮೊದಲ ಡಿಜಿ ಲಾಕರ್ ಸೌಲಭ್ಯ ಇದಾಗಿದ್ದು, ಈ ಸೌಲಭ್ಯವನ್ನು ದಾದರ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿಯೂ ಶೀಘ್ರ ಆರಂಭಿಸಲಾಗುವುದು ಎಂದು ಮಧ್ಯ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ, ಪಿಎನ್‌ಆರ್ ಸಂಖ್ಯೆ ಮತ್ತು ಇ-ಮೇಲ್ ಐಡಿ ತುಂಬಿದ ಬಳಿಕ ಬಯಸಿದ ಗಾತ್ರದ ಲಾಕರ್ ಅನ್ನು ಕಾಯ್ದಿರಿ ಸಬಹುದು. ಬಳಿಕ ಪ್ರಯಾಣಿಕರು ಈ ಲಾಕರ್ ಅನ್ನು ಚೀಲದ ವಿವರಗಳನ್ನು ತುಂಬುವ ಮೂಲಕ ಮತ್ತು ಅದನ್ನು ಎಷ್ಟು ಗಂಟೆ ಬಳಸುತ್ತಾರೆ ಎಂಬುದನ್ನು ಬಳಸಬಹುದು.
ಇದನ್ನೂ ಓದಿ:OPPO A15 ಈಗ ಮತ್ತಷ್ಟು ಅಗ್ಗ : ಜಿಯೋ ಬಳಕೆದಾರರಿಗೆ ಸಿಗುತ್ತಿದೆ ಬಾರಿ ರಿಯಾಯಿತಿ..!
ಲಾಕರ್ ಸವಲತ್ತಿನಿಂದ ಆದಾಯ
ಲ್ಯಾಡರ್-2 ರೈಸ್ ಪ್ರೈ. ಲಿ. ಕಂಪೆನಿಯನ್ನು ಲಾಕರ್ ನೋಡಿ ಕೊಳ್ಳಲು ನಿಯೋಜಿಸಲಾಗಿದ್ದು, 24 ಗಂಟೆಗಳ ಕಾಲ ಡಿಜಿ ಲಾಕ್ ಸಿಬಂದಿಯನ್ನು ಹೊಂದಿರುತ್ತದೆ. ಈ ಲಾಕರ್ ಬಳಸುವಾಗ, ಪ್ರಯಾಣಿಕರಿಗೆ ವಿಶಿಷ್ಟ ಬಾರ್‌ಕೋಡ್‌ನೊಂದಿಗೆ ರಸೀದಿ ಒದಗಿಸಲಾಗುವುದು. ಬ್ಯಾಗ್ ಹಿಂದಕ್ಕೆ ಪಡೆಯುವಾಗ ಈ ಬಾರ್‌ಕೋಡ್ ರಸೀದಿ ತೋರಿಸಬೇಕು. ಈ ಲಾಕರ್‌ಗಳನ್ನು ಅಳವಡಿಸುವ ಮತ್ತು ನಿರ್ವಹಿಸುವ ವೆಚ್ಚವನ್ನು ಕಂಪೆನಿ ಮುಂದಿನ ಐದು ವರ್ಷಗಳವರೆಗೆ ಭರಿಸುತ್ತದೆ. ರೈಲ್ವೇಗೆ ಈ ಸೌಲಭ್ಯದಿಂದ ಐದು ವರ್ಷಗಳಿಗೆ 79.65 ಲಕ್ಷ ರೂ. ಆದಾಯ ದೊರೆಯಲಿದೆ.
ಸುಧಾರಿತ ಲಾಕರ್ ಸೌಲಭ್ಯ
ಪ್ರಯಾಣಿಕರಿಗೆ ಸುರಕ್ಷಿತ ಲಾಕರ್‌ಗಳು, ಡಿಜಿಟಲ್ ಪಾವತಿ ಸೌಲಭ್ಯ, ಆರ್‌ಎಫ್‌ಐಡಿ ಟ್ಯಾಗ್‌ಗಳ ಬಳಕೆ ಮತ್ತು ಆನ್‌ಲೈನ್ ಸ್ವೀಕೃತಿಯಂತಹ ಸುಧಾರಿತ ಲಾಕರ್ ರೂಂ ಸೇವೆಗಳನ್ನು ಒದಗಿಸಲಾಗುವುದು.
– ಅನಿಲ್ ಕುಮಾರ್ ಲಾಹೋಟಿ ಪ್ರಧಾನ ವ್ಯವಸ್ಥಾಪಕರು, ಮಧ್ಯ ರೈಲ್ವೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.