ಎಸ್ ಬಿ ಐ ನೀಡುತ್ತಿದೆ ಭರ್ಜರಿ ಸಾಲ ಸೌಲಭ‍್ಯ : ಇಲ್ಲಿದೆ ಮಾಹಿತಿ
Team Udayavani, Aug 20, 2021, 4:03 PM IST
ನವ ದೆಹಲಿ : ದೇಶದ ಅತ್ಯಂತ ದೊಡ್ಡ ನಾಗರಿಕರ ಬ್ಯಾಂಕ್ ಎಂದೇ ಕರೆಸಿಕೊಳ್ಳುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದಿಗೂ ಗ್ರಾಹಕ ಸ್ನೇಹಿ ಯೋಜನೆಯನ್ನು ನಡುತ್ತಿರುತ್ತದೆ. ಈಗ ಮತ್ತೆ ಗ್ರಾಹಕ ಸ್ನೇಹಿ ಯೋಜನೆಗಳನ್ನು ನೀಡುತ್ತಿದೆ.
ಹೌದು, ಎಸ್ ಬಿ ಐ ತನ್ನ ಗ್ರಾಹಕರಿಗೆ ಸಾಲ ಸೌಲಭ್ಯದಲ್ಲಿ ಹೊಸ ಯೋಜನೆಗಳನ್ನು ನೀಡುತ್ತಿದ್ದು, ರಿಟೇಲ್ ಲೋನ್ ಮತ್ತು ಡೆಪಾಸಿಟ್ ಗಳ ಮೇಲೆ ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ಒದಗಿಸುತ್ತಿದೆ.
ಗ್ರಾಹಕರಿಗೆ ಕಾರಿನ ಲೋನ್ ಮೇಲಿನ ಬಡ್ಡಿದರಗಳ ಮೇಲೆ ರಿಯಾಯಿತಿ ಹಾಗೂ ಶೇಕಡ 100 ರಷ್ಟು ಪ್ರೊಸೆಸಿಂಗ್ ಫೀ ನನ್ನು ಮನ್ನಾ ಮಾಡುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದೆ. ಮಾತ್ರವಲ್ಲದೇ, ಇತರೆ ಬಡ್ಡಿದರ ಕಡಿತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತದೆ ಎನ್ನುವುದು ವಿಶೇಷ.
ಇದನ್ನೂ ಓದಿ : ‘ವೈರಿಗಳು ದೇಶದ ಗಡಿಗಳ ಹೊರಗೆ ಮಾತ್ರವೇ ಇಲ್ಲ ಒಳಗೂ ಇದ್ದಾರೆ’ : ನಟಿ ಪ್ರಣಿತಾ
ಈ ಬಗ್ಗೆ ಮಾಹಿತಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ರಿಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್) ನಿರ್ದೇಶಕ ಸಿ ಎಸ್ ಸೆಟ್ಟಿ, “ಈ ಹಬ್ಬದ ಸೀಸನ್ ನಡುವೆ ನಮ್ಮ ಎಲ್ಲಾ ರಿಟೇಲ್ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಲು ನಾವು ಸಂತಸ ವ್ಯಕ್ತಪಡಿಸುತ್ತೇವೆ,” ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಕ ಸಿ ಎಸ್ ಸೆಟ್ಟಿ, ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿರುವ ಆಫರ್ ಗಳು ಗ್ರಾಹಕರು ತಮ್ಮ ಲೋನ್‌ನಲ್ಲಿ ಹೆಚ್ಚಿನ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಇದು ನಮ್ಮ ಎಲ್ಲಾ ಪ್ರಮುಖ ಗ್ರಾಹಕರಿಗೆ ಉತ್ತಮ ಹಣಕಾಸು ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ. ಇನ್ನು ಈ ಹೊಸ ಆಫರ್‌ಗಳು ಗ್ರಾಹಕರ ಅಗತ್ಯ ಹಾಗೂ ಅವಶ್ಯಕತೆಯನ್ನು ಪೂರೈಸಲು ಸಹಾಯ ಮಾಡಲು ಎಸ್‌ಬಿಐ ನಿರಂತರ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಗೃಹ ಸಾಲದ ಮೇಲಿನ ಸಂಪೂರ್ಣ ಪ್ರೊಸೆಸಿಂಗ್ ಫೀ ಮನ್ನಾ ಮಾಡುವುದಾಗಿ ತಿಳಿಸಿದೆ. ವಿಶೇಷವಾಗಿ ಮಹಿಳಾ ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹ ಸಾಲವನ್ನು 5 ಬಿ ಪಿ ಎಸ್ ಬಡ್ಡಿ ರಿಯಾಯಿತಿಯೊಂದಿಗೆ ಪಡೆಯಬಹುದಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಆಪ್ ಮೂಲಕ ಈ ಎಸ್‌ಬಿಐ ಗೃಹ ಸಾಲಕ್ಕೆ ಮಹಿಳೆಯರು ಮಾತ್ರವಲ್ಲದೇ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು, ಎಸ್ ಬಿ ಐ ತನ್ನ ಎಲ್ಲಾ ಗ್ರಾಹಕರಿಗೆ ಕಾರು ಖರೀದಿ ಸಾಲದ ಮೇಲೆ ಶೇಕಡಾ 100 ಮನ್ನಾವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಇನ್ನು ಇದನ್ನು ಹೊರತು ಪಡಿಸಿ ಎಸ್‌ಬಿಐ ಗ್ರಾಹಕರು ತಮ್ಮ ಕಾರು ಖರೀದಿ ಮೇಲಿನ ಸಾಲಕ್ಕಾಗಿ ಶೇಕಡಾ 90 ರಷ್ಟು ಆನ್-ರೋಡ್ ಫಿನಾನ್ಸ್ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ.
ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಆಪ್ ಮೂಲಕ ಕಾರು ಖರೀದಿ ಸಾಲಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ 25 ಬಿಪಿಎಸ್ ರಿಯಾಯಿತಿ ನೀಡಲು ಎಸ್‌ಬಿಐ ಮುಂದಾಗಿದೆ. ಯುನೋ ಗ್ರಾಹಕರರು ಹೊಸ ಕಾರು ಖರೀದಿ ಮಾಡಲು ಬಯಸುವುದಾದರೇ ವಾರ್ಷಿಕವಾಗಿ ಶೇಕಡಾ .7.5 ರ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ.
ಇದನ್ನೂ ಓದಿ : ಲಾರ್ಡ್ಸ್ ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನಕ್ಕೆ ಬುಮ್ರಾ-ಆ್ಯಂಡರ್ಸನ್ ಕದನವೇ ಕಾರಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.