ಸತ್ಕಾರ್ಯದಿಂದ ಮನುಷ್ಯ ಜನ್ಮ ಸಾರ್ಥಕ: ವಿಧುಶೇಖರ ಭಾರತಿ ಸ್ವಾಮೀಜಿ
Team Udayavani, Aug 20, 2021, 6:50 PM IST
ಶೃಂಗೇರಿ: ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡ ಸಂಸ್ಕಾರ, ಪುಣ್ಯ ಕರ್ಮದ ಫಲವನ್ನು ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಬಾರತೀ ಸ್ವಾಮಿಗಳು ಹೇಳಿದರು.
ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣ ಮಹಾಸಭಾದಿಂದ ಗುರುವಾರ ಏರ್ಪಡಿಸಿದ್ದ ಗುರುದರ್ಶನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ನಾವು ಸತ್ಕಾರ್ಯ ಮಾಡಬೇಕು. ನಿತ್ಯ ಜೀವನದಲ್ಲಿ ಕರ್ಮಾನುಷ್ಠಾನ ಮಾಡುವುದರ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಭಗವಂತನ ಆರಾಧನೆಗೆ ಹಲವಾರು ಮಾರ್ಗವಿದೆ. ಅದರಲ್ಲಿ ನಮಗೆ ಸಾಧ್ಯವಿರುವ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಅದರಂತೆ ದೇವರನ್ನು ಸ್ಮರಿಸಬೇಕು.
ಮನುಷ್ಯ ಜನ್ಮವಿರುವುದೇ ಅನುಭವಿಸುವುದಕ್ಕೆ ಎಂದು ತಿಳಿಯಬಾರದು. ಸಮಯವನ್ನು ವ್ಯರ್ಥ ಮಾಡದೆ ಕಾಲಹರಣ ಮಾಡದೆ ನಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ಧರ್ಮಾಚರಣೆ ಮಾಡುವುದರ ಮೂಲಕ ಪ್ರತಿಯೊಬ್ಬರೂ ಉನ್ನತ ಸ್ಥಾನ ಪಡೆಯಬಹುದು ಎಂದರು.
ಮಹಾಸಭಾದ ಅಧ್ಯಕ್ಷ ಜಿ.ಸಿ. ಗೋಪಾಲಕೃಷ್ಣ ಮಾತನಾಡಿ, ಜಗದ್ಗುರುಗಳ ಆದೇಶದಂತೆ ಸಮಾಜ ಬಾಂಧವರು ಕಳೆದ ವರ್ಷ ಕೋಟಿ ಗಾಯತ್ರಿ ಜಪ ಕೈಗೊಂಡಿದ್ದು,ಈ ವರ್ಷವೂ ಅದನ್ನು ಮುಂದುವರಿಸಲಾಗುತ್ತದೆ. ಮಹಿಳೆಯರು ಲಲಿತಾ ಸಹಸ್ರನಾಮ ಪಾರಾಯಣ ನಡೆಸಲು ಶ್ರೀಗಳು ಸೂಚಿಸಿದ್ದು,ಅದರಂತೆ ಲಲಿತಾ ಸಹಸ್ರನಾಮ ಮಾಡಲಿದ್ದಾರೆ ಎಂದರು. ಮಹಾಸಭಾದಿಂದ ಜಗದ್ಗುರುಗಳಿಗೆ ಸಮಷ್ಠಿ ಬಿ ವಂದನೆ, ಫಲ- ಪುಷ್ಪ ಸಮರ್ಪಿಸಲಾಯಿತು. ಮಹಾಸಭಾದ ಪದಾ ಧಿಕಾರಿಗಳಾದ ಗೋಳಾರ್ ನಾಗೇಂದ್ರರಾವ್, ಹುಲ್ಕುಳಿ ದೀಪಕ್, ಕೋಟೇತೋಟ ವಿಜಯರಂಗ, ಪ್ರವೀಣ್ ಕೆಸವೆ, ಹೆಬ್ಬಿಗೆ ಗಣೇಶ್, ಮೇಗೂರು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ತಲವಾನೆ ಪ್ರಕಾಶ್, ಶ್ರೀ ಶಾರದಾ ಸೌಹಾರ್ದ ಸಹಕಾರ ಸಂಘದ ನಿರ್ದೇಶಕರು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.