ಅವಸಾನದತ್ತ ಪುರಾತನ ಶಿವನ ದೇಗುಲ

ಮುರಿದಕಂಬಗಳು,ಕುಸಿಯುತ್ತಿರುವ ಚಾವಣಿ; ಸುಮಾರು 860 ವರ್ಷದ ಹಿಂದಿನ ದೇಗುಲ ಜೀರ್ಣೋದ್ಧಾರಕ್ಕೆ ಮನವಿ

Team Udayavani, Aug 20, 2021, 7:19 PM IST

ಅವಸಾನದತ್ತ ಪುರಾತನ ಶಿವನ ದೇಗುಲ

ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ತಾವರೆಕೆ ಗ್ರಾಮದ ಕೆರೆ ಏರಿ ಹಿಂಭಾಗದ ಸುಮಾರು 860 ವರ್ಷಗಳ ಹಿಂದಿನ ಶಿವನ ದೇಗುಲವೊಂದು ಅವಸಾನದತ್ತ ತಲುಪಿದೆ.

ತಾಲೂಕಿನಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಮುತುವರ್ಜಿ ತೋರುವಂತೆಯೇ ನೂರಾರು ವರ್ಷಗಳ ಇತಿಹಾಸ ಹೊಂದಿರುವದೇವಾಲಯ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು, ತಹಶೀಲ್ದಾರ್‌, ಜನಪ್ರತಿನಿಧಿಗಳು ಮುಂದಾಗಬೇಕಿದೆ. ದೇವಾಲಯಲ್ಲಿ ಮೂರಕ್ಕೂ ಹೆಚ್ಚು ಶಿಲಾ ಶಾಸನಗಳಿದ್ದು ಗ್ರಾಮದ ಹಾಗೂ ಸ್ಥಳದ ಮಾಹಿತಿ ಇದರಲ್ಲಿದ್ದು ಪುರಾತತ್ವ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ.

ಚಾವಣಿ ಕಳಚಿದೆ: ಪುರಾತನ ದೇವಾಲಯ ಸೂಕ್ತ ನಿರ್ವಹಣೆ ಇಲ್ಲದೆ ಇರುವುರಿಂದ ದೇವಾಲಯದ ಕಲ್ಲಿನ ಚಾವಣಿ ಕಳಚಿ ಬಿದ್ದಿದೆ. ಉತ್ತಮ ಕೆತ್ತನೆ ಇರುವ ಕಂಬಗಳು ಕುಸಿದಿವೆ. ದೇವಾಲಯದ ಗೋಡೆಗಳು ಮಳೆ ಗಾಳಿಯಿಂದಾಗಿ ಧರೆಗೆ ಉರುಳಿವೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯ ಹಾಳಾಗುತ್ತಿದ್ದರೂ ಜಾಣ ಕುರುಡರಂತಿದ್ದಾರೆ.

ಇದನ್ನೂ ಓದಿ:ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ರಾಜ್ಯದ ಜನರಲ್ಲಿ ಸಿಎಂ ಮನವಿ

ಕ್ರಿವಿ ಕೀಟಗಳ ಆವಾಸ ಸ್ಥಾನ: ಭಕ್ತರಿಗೆ ನೆಮ್ಮದಿ ನೀಡಬೇಕಾಗಿದ ಸ್ಥಳವೀಗ ಕ್ರಿಮಿ ಕೀಟಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ದೇವಾಲಯ
ಉತ್ತಮ ರೀತಿಯಲ್ಲಿ ಇದ್ದಿದ್ದರೆ ನೂರಾರು ಮಂದಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನೆಮ್ಮದಿ ಪಡೆದು ಕೊಳ್ಳುತ್ತಿದ್ದರು. ಆದರೆ, ಗ್ರಾಮಸ್ಥರ ನಿರ್ಲಕ್ಷ್ಯ ದಿಂದ ದೇವಾಲಯ ಶಿಥಿಲವಾಗಿದೆ. ಮರಗಿಡಗಳು ಬೆಳೆದು ನಿಂತಿವೆ, ದೇವಾಲಯದ ಒಳಗೆ ಇರುವ ವಿಗ್ರಹಗಳಿಗೆ ಹಾನಿಯಾಗಿದೆ.

ಪೂಜೆ ಕೈಬಿಟ್ಟ ಭಕ್ತರು: ದೇವಾಲಯದ ಸ್ಥಿತಿ ನೋಡಿದರೆ 2-3 ದಶಕದಿಂದ ಪೂಜೆ ಕೈಂಕರ್ಯ ನಡೆಯುತ್ತಿಲ್ಲ ಎನ್ನುವುದು ತಿಳಿಯುತ್ತದೆ.ಗ್ರಾಮದ ಹಿರಿಯರು, ಜನಪ್ರತಿನಿಧಿಗಳ ಗಮನಕ್ಕೆ ತಂದು ಪಾಳು ಬಿದ್ದಿರುವ ದೇವಾಲಯ ಜೀರ್ಣೋದ್ಧಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯುವ ಸಮುದಾಯ ಮನಸ್ಸು ಮಾಡಿದರೆ ಈಗಲೂ ದೇವಾಲಯನ್ನು ಜೀರ್ಣೋದ್ಧಾರ ಮಾಡಬಹುದು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

475 ಹೆಕ್ಟೇರ್‌ ಪ್ರದೇಶವಿದೆ: ತಾವರೆಕೆರೆ ಗ್ರಾಮದಲ್ಲಿ 160ಮನೆಗಳಿದ್ದು1,200ಕ್ಕೂಹೆಚ್ಚುಜನಸಂಖ್ಯೆಯಿದೆ. ಅಂಗನವಾಡಿ ಕೇಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವಿದೆ. ಚಾಕಗವುಡನ ಆಳ್ವಿಕೆ ಕಾಲಘಟ್ಟದಲ್ಲಿ ಕೆರೆ ನಿರ್ಮಾಣ ವಾಗಿದ್ದು 230 ಹೆಕ್ಟೇರ್‌ ವಿಸ್ತೀರ್ಣ ವಿದ್ದು ಸುಮಾರು 475 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ

ವೀರಶಾಸನದಲ್ಲಿ ಗ್ರಾಮದ ಮಾಹಿತಿ
ಕ್ರಿ.ಶ.1226ರ ಕಾಲಘಟ್ಟದ ಮಾಹಿತಿ ಇರುವ ವೀರಶಾಸನವಿದ್ದು ಇದರಲ್ಲಿ ದೇವಾಲಯ ನಿರ್ಮಾಣ, ಇತರೆ ಅಭಿವೃದ್ಧಿ ನಡೆದಿರುವ ಬಗ್ಗೆ ವಿವರ ವಿದೆ. ಗ್ರಾಮಕ್ಕಾಗಿ ಹೋರಾಡಿದ ಹಲವು ವೀರರ ಬಗ್ಗೆಯೂ ಶಾಸನದಲ್ಲಿ ಉಲ್ಲೇಖವಿದೆ. ಇದನ್ನು ಉಳಿಸಿ ಮುಂದಿನ ತಲೆಮಾರಿಗೆ ಮಾಹಿತಿ ನೀಡುವಕೆಲಸವಾದರೂ ಆಗಬೇಕಿದೆ. ಹಾಗೆಯೇ ಹತ್ತಕ್ಕೂ ಹೆಚ್ಚು ಮಾಸ್ತಿಕಲ್ಲುಗಳಿವೆ. ಇನ್ನು ಈಶ್ವರಲಿಂಗ, ಬಸವಣ್ಣ, ಚನ್ನಕೇಶವ, ಭೈರವೇಶ್ವರ ದೊಡ್ಡಮ್ಮದೇವಿ, ಮರಿಯಮ್ಮ ದೇವಿ, ಉಡುಸಲಮ್ಮ, ಯಲ್ಲಮ್ಮದೇವಿ ವಿಗ್ರಹಗಳುಕೆರ ಏರಿ ಹಿಂಭಾಗದಲ್ಲಿ ಇವೆ. ಇವುಗಳನ್ನೂ ಸಮಗ್ರವಾಗಿ ಬಳಕೆ ಮಾಡಿಕೊಂಡು ಸಾವಿರಾರು ಭಕ್ತರನ್ನು ಆಕರ್ಷಣೆ ಮಾಡುವ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಬಹುದಾಗಿದೆ

ತಾವರೆಕೆರೆ ಗ್ರಾಮದಲ್ಲಿ 860 ವರ್ಷದ ಪುರಾತನ ಈಶ್ವರ ದೇವಾಲಯವಿದ್ದು 2 ದಶಕದಿಂದ ಪೂಜೆ ನಡೆಯುತ್ತಿಲ್ಲ. ಈ ಬಗ್ಗೆ ಮುಜರಾಯಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ.ಯುವಕರು ಮನಸ್ಸು ಮಾಡಬೇಕಷ್ಟೇ.
-ಪಾಪಣ್ಣ, ತಾವರೆಕೆರೆ ಗ್ರಾಮಸ್ಥ

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.