ಜಾನುವಾರು ಕೊಟ್ಟಿಗೆಯಾದ ಕ್ರೀಡಾಂಗಣ
ಕೆಕೆಆರ್‌ಡಿಬಿಯಿಂದ 3.98 ಕೋಟಿ ರೂ. ವೆಚ್ಚ ; ಜಿಪಂ ಉಪಾಧ್ಯಕ್ಷರ ತಾಕೀತಿಗೂ ಕೈಗೊಂಡಿಲ್ಲ ಕ್ರಮ
Team Udayavani, Aug 20, 2021, 7:48 PM IST
ಅಫಜಲಪುರ: 2015-16ರಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕಾಮಗಾರಿ ಆರಂಭವಾಗಿ ಆರು ವರ್ಷ ಗತಿಸಿದರೂ ಕ್ರೀಡಾಂಗಣ ಕಾಮಗಾರಿ ಮುಕ್ತಾಯವಾಗಿಲ್ಲ. ಹೀಗಾಗಿ ತಾಲೂಕಿನ ಕ್ರೀಡಾಪಟುಗಳಿಗೆ ತೀವ್ರ ನಿರಾಸೆಯಾಗಿದೆ.
ನಾಲ್ಕು ಕೋಟಿ ವೆಚ್ಚದ ಕ್ರೀಡಾಂಗಣ: 2015-16ರಲ್ಲಿ ಯುವಜನ ಕ್ರೀಡಾ ಇಲಾಖೆ ವತಿಯಿಂದ ನಾಲ್ಕು ಕೋಟಿ ರೂ. ವೆಚ್ಚದ ತಾಲೂಕು
ಮಟ್ಟದ ಕ್ರಿಡಾಂಗಣ ಕಾಮಗಾರಿಗೆ ಆಗಿನ ಶಾಸಕ ಮಾಲೀಕಯ್ಯ ಗುತ್ತೇದಾರ ಅಡಿಗಲ್ಲು ನೆರವೇರಿಸಿದ್ದರು.
ಕ್ರೀಡಾಪಟುಗಳಿಗೆ ತೀವ್ರ ನಿರಾಸೆ: ತಾಲೂಕಿನ ಕ್ರೀಡಾಪಟುಗಳು ಪ್ರತಿ ವರ್ಷ ತಾಲೂಕು ಕ್ರೀಡಾಂಗಣದಲ್ಲಿ ಆಟವಾಡಿ ಖುಷಿ ಪಡಬೇಕೆಂಬ
ಕನಸು ನಾಲ್ಕೈದು ವರ್ಷಗಳಿಂದ ನನಸಾಗುತ್ತಿಲ್ಲ. 2015-16ರಲ್ಲಿ ಕೆಕೆಆರ್‌ಡಿಬಿ ವತಿಯಿಂದ 3.98 ಕೋಟಿ ರೂ. ವೆಚ್ಚದ ತಾಲೂಕು ಕ್ರೀಡಾಂಗಣಕ್ಕೆ ಚಾಲನೆ ನಿಡಲಾಗಿತ್ತು. ಆಗಿನಿಂದ ಈಗಿನ ವರೆಗೆ ತಾಲೂಕು ಕ್ರೀಡಾಂಗಣ ಕಾಮಗಾರಿ ಮುಗಿದಿಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸಿ ಈಗಲೂ ಕ್ರೀಡಾಂಗಣ ಕಾಮಗಾರಿ ಕುಂಟುತ್ತಲೆ ಸಾಗಿದೆ.
ಇದನ್ನೂ ಓದಿ:ಜನನ ಪ್ರಮಾಣ ಭಾರೀ ಇಳಿಕೆ : ಚೀನಾದಲ್ಲಿ ಇನ್ನು ಮೂರು ಮಕ್ಕಳಿಗೆ ಅವಕಾಶ
ಅಧಿಕಾರಿಗಳ ನಿರ್ಲಕ್ಷ್ಯ : ಕ್ರೀಡಾಂಗಣ ಕಾಮಗಾರಿ ಸ್ಥಳಕ್ಕೆ ಜಿ.ಪಂ ಮಾಜಿ ಉಪಾಧ್ಯಕ್ಷೆ ಶೋಭಾ ಶಿರಸಗಿ ಎರಡು ಬಾರಿ ಭೇಟಿ ನೀಡಿ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರೂ ಪ್ರಯೋಜನವಾಗಿಲ್ಲ
ನಾನು ಭೂಸೇನಾ ನಿಗಮದ ಪ್ರಭಾರಿ ಅಧಿಕಾರ ವಹಿಸಿ ಕೆಲ ದಿನಗಳಾಗಿವೆ. ಕ್ರೀಡಾಂಗಣ ಕಾಮಗಾರಿ ದಾಖಲಾತಿ ಪರಿಶೀಲಿಸಿ, ಶೀಘ್ರವೇ ಮುತುವರ್ಜಿ ವಹಿಸಿ ಕಾಮಗಾರಿ ಮುಕ್ತಾಯ ಮಾಡುವತ್ತ ಕ್ರಮ ಕೈಗೊಳ್ಳುತ್ತೇನೆ
-ರಾಜಶೇಖರ, ಲ್ಯಾಂಡ್ ಆರ್ಮಿ, ಪ್ರಭಾರಿ ಅಧಿಕಾರಿ
ಕ್ರೀಡಾಂಗಣಕ್ಕೆ ದಾರಿ ಸಮಸ್ಯೆ ಇತ್ತು. ಅದೀಗ ಬಗೆಹರಿದಿದೆ. ಬಹುತೇಕ ಕಾಮಗಾರಿ ಮುಗಿದಿದೆ. ಕ್ರೀಡಾಂಗಣಕ್ಕೆ ಹೋಗುವ ದಾರಿ ಮತ್ತು
ಇತರೆ ವ್ಯವಸ್ಥೆಗಾಗಿ ಎರಡು ಕೊಟಿ ರೂ. ಅನುದಾನ ಬಂದಿದೆ. ಇದನ್ನು ಕ್ರೀಡಾಂಗಣ ಆರಂಭಿಸಲಾಗುತ್ತದೆ.
-ಎಂ.ವೈ. ಪಾಟೀಲ, ಶಾಸಕ
2015ರಿಂದ ಕ್ರೀಡಾಂಗಣ ಕಾಮಗಾರಿ ಆರಂಭವಾದರೂ ಇಲ್ಲಿಯ ವರೆಗೆ ಮುಗಿದಿಲ್ಲ. ಪ್ರತಿ ಬಾರಿ ಸ್ವಾತಂತ್ರ್ಯದಿನದಂದು ಶಾಸಕರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡುತ್ತೇವೆ ಎಂದು ಹುಸಿ ಭರವಸೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಇದು ತಾಲೂಕಿನ ಕ್ರೀಡಾಪಟುಗಳಿಗೆ ಮಾಡುತ್ತಿರುವ ಮೋಸವಾಗಿದೆ.
-ಸದ್ದಾಂ ನಾಕೇದಾರ, ಸಾಮಾಜಿಕ ಕಾರ್ಯಕರ್ತ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Puttur: ಕುಂಜಾಡಿ; ಸೇತುವೆ ಕಾಮಗಾರಿ ಪುನರಾರಂಭ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.