ಅರಸುರವರಿಗೆ ಅರಸುರವರೇ ಸಾಟಿ, ನಾವೆಲ್ಲಾ ಅವರ ಕಾಲಿನ ದೂಳಿಗೂ ಸಮಾನರಲ್ಲ. ಶಾಸಕ ಮಂಜುನಾಥ್


Team Udayavani, Aug 20, 2021, 8:13 PM IST

hunasuru news

ಹುಣಸೂರು:ದೇವರಾಜ ಅರಸರು ಸಣ್ಣ ಸಮುದಾಯಗಳ ದಾರಿ ದೀಪವಾಗಿದ್ದರು. ಅವರ ಯೋಚನೆ-ಯೋಜನೆ, ಸಿದ್ದಾಂತ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿರುತ್ತಿತ್ತೆಂದು ಶಾಸಕ ಎಚ್.ಪಿ.ಮಂಜುನಾಥ್ ಬಣ್ಣಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಆಯೋಜಿಸಿದ್ದ ದೇವರಾಜ ಅರಸರ 106ನೇ ಜನ್ಮದಿನದ ಅಂಗವಾಗಿ ನಗರದ ಎಪಿಎಂಸಿ ಬಳಿಯ ದೇವರಾಜ ಅರಸರ ಪುತ್ಥಳಿಗೆ ಎಂ.ಎಲ್.ಸಿ. ಅಡಗೂರು ಎಚ್.ವಿಶ್ವನಾಥರೊಂದಿಗೆ ಮಾಲಾರ್ಪಣೆ ಗೈದು, ನೂತನವಾಗಿ ನಿರ್ಮಿಸಿರುವ ಗೋಪುರವನ್ನು ಉದ್ಘಾಟಿಸಿ ಮಾತನಾಡಿದರು.

ಅರಸರು ತಮ್ಮ ಅಧಿಕಾರದ ಅವಧಿಯಲ್ಲಿ ಪ್ರತಿ ಮನೆಗೂ ಸವಲತ್ತು ತಲುಪುವಂತೆ ಯೋಜನೆ ರೂಪಿಸಿದ್ದರು, ಇಡೀ ದೇಶಕ್ಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ನಂತರ ದೇವರಾಜರಸರು ಮಾದರಿ ಆಡಳಿತ ನೀಡಿದವರು, ಅವರ ಹಾದಿಯಲ್ಲಿ ಸಿದ್ದರಾಮಯ್ಯ ಆಡಳಿತ ನೀಡಿದ್ದಾರೆ.

ಅರಸುರವರಿಗೆ ಅರಸುರವರೇ ಸಾಟಿ, ನಾವೆಲ್ಲಾ ಅವರ ಕಾಲಿನ ದೂಳಿಗೂ ಸಮಾನರಲ್ಲ. ಆದರೆ ಅವರು ಬಂದ ದಾರಿಯಲ್ಲಿ, ಅರಸರ ಕನಸನ್ನು ನನಸು ಮಾಡುವ ಕಡೆಗೆ ಹೊರಟಿದ್ದೇವೆ. ಅರಸರ ಹುಟ್ಟೂರು ಕಲ್ಲಹಳ್ಳಿ ಅಭಿವೃದ್ದಿಯನ್ನು ಗ್ರಾಮಸ್ಥರ ಆಶಯದಂತೆ ಕೈಗೊಳ್ಳಲಾಗಿದೆ. ಮತ್ತಷ್ಟು ಅಭಿವೃದ್ದಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ ಎಂದರು. ಅರಸರ ಹೆಸರಿನಲ್ಲಿ ಜಿಲ್ಲೆಯನ್ನಾಗಿಸುವ ಸಂಬಂಧ ಪಕ್ಷಬೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಮನವಿ ಸಲ್ಲಿಸುವ ಹಾಗೂ ರೂಪು ರೇಷೆ ನಿರ್ಮಿಸಲಾಗುವುದೆಂದರು.

ಇದನ್ನೂ ಓದಿ:ತೆರೆ ಮೇಲೆ ಬರಲಿದೆ ಡ್ರೋನ್ ಪ್ರತಾಪ್ ವಂಚನೆ : ಪ್ರತಾಪ್ ಪಾತ್ರದಲ್ಲಿ ಪ್ರಥಮ್

ಆಧುನಿಕ ಸ್ಪರ್ಶ ನೀಡಿದ ರಾಜೀವಗಾಂಧಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರ ಹುಟ್ಟು ಹಬ್ಬವೂ ಇಂದೇ ಆಗಿದ್ದು, ಅವರ ಆಡಳಿತದಲ್ಲಿ ದೇಶಕ್ಕೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ವಿಕೇಂದ್ರೀಕರಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆಂದು ಸ್ಮರಿಸಿದರು.

ಅರಸರ ಹೆಸರೇ ರೋಮಾಂಚನ: ಎಂ.ಎಲ್.ಸಿ.ವಿಶ್ವನಾಥರು ಮಾತನಾಡಿ ನನ್ನ ರಾಜಕೀಯ ಗುರು ದೇವರಾಜ ಅರಸರ ಹೆಸರೇ ಒಂದು ರೋಮಾಂಚನ, ಆವರ ಆಡಳಿತಾವಧಿಯಲ್ಲಿ  ಉಳುವವನೇ ಭೂಮಿ ಒಡೆಯ, ಜೀತವಿಮುಕ್ತಿ- ಮಲಹೊರುವ ಪದ್ದತಿ ನಿಷೇಧದಂತಹ  ಕ್ರಾಂತಿಕಾರಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ಇವರ ಆಡಳಿತ ಅಜರಾಮರವಾಗಿದೆ ಎಂದು ಸ್ಮರಿಸಿದರು.

ರಕ್ತಪಾತವಿಲ್ಲದೆ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದ ಮಹಾನ್ ನಾಯಕ, ಇವರ ಅವಧಿಯಲ್ಲಿ ಭೂಮಿ,ನೀರು, ಉದ್ಯೋಗ,ಶಿಕ್ಷಣಕ್ಕೆ ಆಧ್ಯತೆ ನೀಡಿದ್ದಲ್ಲದೆ ಹಾವನೂರು ವರದಿಯನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳ ಜ್ಯೋತಿಯಾಗಿದ್ದಾರೆ. ಅರಸರ ಶತಮಾನೋತ್ಸವವನ್ನು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಹುಟ್ಟಿದ ಊರು ಬೆಟ್ಟದ ತುಂಗ, ಬೆಳೆದ ಹಳ್ಳಿ ಕಲ್ಲಹಳ್ಳಿಯನ್ನು ತಲಾ 10ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.

ಶಿಕ್ಷಕ ಜೆ.ಮಹದೇವ್ ಅರಸರ  ಹೋರಾಟ, ಬದುಕು, ಕಾರ್ಯಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ನಗಗರಸಭೆ ಉಪಾಧ್ಯಕ್ಷರು, ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಮಾಸ್ಕ್ ಧರಿಸದೆ ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆ ಭಾಗಿಯಾಗಿದ್ದರೂ ಸಹ ಹಿರಿಯ ಅಧಿಕಾರಿಗಳು  ಮೌನಕ್ಕೆ ಶರಣಾಗಿದ್ದರು.

ಕಾರ್ಯಕ್ರಮದಲ್ಲಿ ಎ.ಸಿ.ವರ್ಣಿತ್ ನೇಗಿ, ತಾ.ಪಂ.ಇ.ಓ.ಗಿರೀಶ್, ತಹಸೀಲ್ದಾರ್ ಮೋಹನ್‌ಕುಮಾರ್, ನಗರಸಭೆ ಅಧ್ಯಕ್ಷೆ ಅನುಷಾ, ಉಪಾಧ್ಯಕ್ಷ ದೇವನಾಯ್ಕ ಹಾಗೂ ಸದಸ್ಯರು, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ಹಿಂದುಳಿದವರ್ಗಗಳ ಕಲ್ಯಾಣಾಧಿಕಾರಿ ಸುಜೇಂದ್ರಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಬಿಇಓ ನಾಗರಾಜ್, ಪೌರಾಯುಕ್ತ ರಮೇಶ್,ಎಇಇ ಬೋಜರಾಜ್, ಸಿದ್ದಪ್ಪ, ಕೃಷಿ ಅಧಿಕಾರಿ ವೆಂಕಟೇಶ್, ಮುಖಂಡರಾದ ದೇವರಾಜ್, ನಾರಾಯಣ್, ಕಲ್ಕುಣಿಕೆರಮೇಶ್, ನಾಗರಾಜಮಲ್ಲಾಡಿ, ವಕೀಲ ಶಿವಕುಮಾರ್, ನಿಂಗರಾಜಮಲ್ಲಾಡಿ, ಲೋಕೇಶ್, ರವಿಪ್ರಸನ್ನ, ಗಣಪತಿರಾವ್ ಇಂಡೋಲ್ಕರ್, ಪಾಂಡುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.