ಹಟ್ಟಿಕುದ್ರು ಸೇತುವೆ: 150 ಮೀ. ಸ್ಲ್ಯಾಬ್ ಕಾಮಗಾರಿ ಬಾಕಿ
Team Udayavani, Aug 21, 2021, 5:33 AM IST
ಬಸ್ರೂರು: ಹಲವು ದಶಕಗಳ ಹಟ್ಟಿಕುದ್ರು ದ್ವೀಪ ನಿವಾಸಿಗಳ ಕನಸು ಈಗ ನನಸಾಗುವತ್ತ ಕ್ಷಣಗಣನೆ ಶುರುವಾಗಿದೆ. ಕಳೆದ ಒಂದು ವರ್ಷದ ಹಿಂದೆ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ವಾರಾಹಿ ನೀರಾವರಿ ನಿಗಮ ದಿಂದ 14.59 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಟ್ಟಿಕುದ್ರು ಸೇತುವೆಯ ಕಾಮಗಾರಿಯಲ್ಲಿ ಇನ್ನೂ ಕೇವಲ 150 ಮೀ. ಸ್ಲ್ಯಾಬ್ ಮಾತ್ರ ಬಾಕಿ ಇದೆ.
ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಕಳೆದ ಮಳೆಗಾಲದಲ್ಲಿ ನಿಲ್ಲಿಸಿದ್ದ ಕಾಮಗಾರಿ ಈಗ ಮತ್ತೆ ಆರಂಭಗೊಂಡಿದ್ದು, ಕಾಮಗಾರಿ ವೇಗದಿಂದ ಸಾಗುತ್ತಿದೆ.
ಇದನ್ನೂ ಓದಿ:“ಅವರು ಬದಲಾಗಿಲ್ಲ, ನಮಗೆ ಸಾವೇ ಗತಿ’ : ತಾಲಿಬಾನ್ ಆಡಳಿತದ ಕುರಿತು ಹೆಂಗಳೆಯರ ನೋವಿನ ಮಾತು
180 ಮೀ. ಸ್ಲ್ಯಾಬ್ ಕಾಮಗಾರಿ ಪೂರ್ಣ
ಒಟ್ಟು 330 ಮೀ. ಉದ್ದದ ಈ ಸೇತುವೆಗೆ ಇಪ್ಪತ್ತು ಪಿಲ್ಲರ್‌ಗಳಿದ್ದು ಎರಡು ತುದಿಗಳಲ್ಲಿ ಅಪಾರ್ಟ್‌ಮೆಂಟ್‌ಗಳಿರುತ್ತವೆ. ಈಗಾಗಲೇ ಹಲವು ಪಿಲ್ಲರ್‌ಗಳು ನಿರ್ಮಾಣಗೊಂಡಿದ್ದು ಏಳು ಸ್ಲಾéಬ್‌ಗಳು ಅಂದರೆ ಕೇವಲ 150 ಮೀ. ಉದ್ದದ ಕಾಮಗಾರಿ ಆಗಬೇಕಿದೆ. 180 ಮೀ. ಸ್ಲ್ಯಾಬ್ ಕಾಮಗಾರಿ ಮುಗಿದಿದೆ.
ದೋಣಿ ಸ್ಥಗಿತ
ಪ್ರಸ್ತುತ ಹಟ್ಟಿಕುದ್ರುವಿಗೆ ಹೋಗಲು ಕಳುವಿನಬಾಗಿಲು ದೋಣಿ ಸ್ಥಗಿತಗೊಂಡಿದ್ದು ಸೇತುವೆಯ ಎರಡು ಕಡೆಗಳಲ್ಲಿ ಕಬ್ಬಿಣದ ಮೆಟ್ಟಿಲುಗಳನ್ನು ಇಡಲಾಗಿದೆ. ಇದರ ಮೇಲೆ ಹತ್ತಿ ನಡೆದು ಸಾಗಬಹುದಾಗಿದೆ. ಮುಂದಿನ ಕೆಲವೇ ಸಮಯದಲ್ಲಿ ಸ್ಲ್ಯಾಬ್ ಮತ್ತು ಪಿಲ್ಲರ್‌ಗಳ ಕಾಮಗಾರಿ ಮುಗಿಯುವ ನಿರೀಕ್ಷೆ ಇದರದ್ದಾಗಿದೆ. ಮಳೆ ಬಿಟ್ಟರೆ ಕಾಮಗಾರಿ ವೇಗದಿಂದ ಸಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
By Election: ಮೂರೂ ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.