ವ್ಯಾಕ್ಸಿನೇಶನ್: ಉಡುಪಿ ಜಿಲ್ಲೆಯ 10 ಲಕ್ಷ ಜನರ ಗುರಿ
1ನೇ ಡೋಸ್ 5.64 ಲಕ್ಷ, 2ನೇ ಡೋಸ್ 1.95 ಲಕ್ಷ ಜನರಿಗೆ ವಿತರಣೆ
Team Udayavani, Aug 21, 2021, 6:15 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಕೋವಿಡ್ ವಾರ್ ರೂಂ ಬಿಡುಗಡೆ ಮಾಡಿದ ರಾಜ್ಯವಾರು ಅತೀ ಹೆಚ್ಚು ಕೋವಿಡ್ ಲಸಿಕೆ ವಿತರಣೆ ಮಾಡಿರುವ ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಶೀಘ್ರದಲ್ಲಿ ಆರೋಗ್ಯ ಇಲಾಖೆ ನೀಡಿರುವ ಲಸಿಕೆ ವಿತರಣೆ ಗುರಿಯನ್ನು ತಲುಪಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಲ್ಲಿನ ಜನಸಂಖ್ಯೆ ಆಧಾರ ಮೇಲೆ ಲಸಿಕೆ ವಿತರಣೆಯ ಗುರಿಯನ್ನು ನೀಡಲಾಗಿದೆ. ಅದರ ಅನ್ವಯ ಆ. 18ರ ವರದಿಯಂತೆ ಬೆಂಗಳೂರು ನಗರ ಪ್ರದೇಶದಲ್ಲಿ ಶೇ. 99, ಉಡುಪಿಯಲ್ಲಿ ಶೇ. 73.47, ಮೈಸೂರು ಶೇ. 66.54, ದ.ಕ. ಶೇ. 65.07, ಕೊಡಗು ಶೇ.61.23ರಷ್ಟು ಲಸಿಕೆ ವಿತರಿಸಿದೆ.
ಈ ಹಿಂದಿನ ವರದಿಯಲ್ಲಿ ಉಡುಪಿ ಜಿಲ್ಲೆಯು ಲಸಿಕೆ ವಿತರಣೆಯಲ್ಲಿ ಅಗ್ರ 5 ಸ್ಥಾನದಲ್ಲಿ ಒಂದು ಸ್ಥಾನ ಗಳಿಸಿತ್ತು.
ಇದನ್ನೂ ಓದಿ:12 ವಯಸ್ಸಿಗಿಂತ ಮೇಲ್ಪಟ್ಟ ಮಕ್ಕಳಿಗೆ ಸಿದ್ಧವಾದ ಮೊದಲ ಕೋವಿಡ್ ಲಸಿಕೆಗೆ ಭಾರತದಲ್ಲಿ ಅನುಮೋದನೆ
10 ಲಕ್ಷ ಜನರಿಗೆ ಲಸಿಕೆ ಗುರಿ
ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 18-44 ವರ್ಷದೊಳಗಿನ ಒಟ್ಟು 5.88 ಲಕ್ಷ ಜನರಿಗೆ ಹಾಗೂ 45 ವರ್ಷದ ಮೇಲಿನ (ಆರೋಗ್ಯ, ಮುಂಚೂಣಿ) 4.13 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ.
1.95 ಮಂದಿಗೆ ಲಸಿಕೆ ಪೂರ್ಣ
ಜಿಲ್ಲೆಯಲ್ಲಿ 19,608 ಆರೋಗ್ಯ ಕಾರ್ಯಕರ್ತರು, 4,062 ಮುಂಚೂಣಿ ಕಾರ್ಯಕರ್ತರು, 26,808 ಮಂದಿ 18ರಿಂದ 44 ವರ್ಷದೊಳಗಿನ ಸಾರ್ವಜನಿಕರು, 45 ವರ್ಷ ಮೇಲ್ಪಟ್ಟ 1.69 ಲಕ್ಷ ಮಂದಿ ಕೊರೊನಾ 2ನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಒಟ್ಟು 1.95 ಲಕ್ಷ ಮಂದಿ ಎರಡನೇ ಡೋಸ್ ಕೋವಿ ಡ್ ಲಸಿಕೆ ಪಡೆದುಕೊಂಡಿದ್ದಾರೆ.
2.41 ಲ. ಜನರು ಬಾಕಿ
ಜಿಲ್ಲೆಯಲ್ಲಿ ಪ್ರಥಮ 5.64 ಲಕ್ಷ ಹಾಗೂ ದ್ವಿತೀಯ ಡೋಸ್ 1.95 ಲಕ್ಷ ಜನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಒಟ್ಟು 10 ಲಕ್ಷ ಜನರಲ್ಲಿ ಈಗಾಗಲೇ 7.59 ಲಕ್ಷ ಜನರು ಕೋವಿಡ್ ಲಸಿಕೆಯ ಮೊದಲ ಹಾಗೂ ಎರಡನೇ ಲಸಿಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2.41 ಲಕ್ಷ ಜನರು ಪ್ರಥಮ ಡೋಸ್ ಲಸಿಕೆ ಪಡೆದುಕೊಳ್ಳಲು ಬಾಕಿ ಇದೆ.
5.64 ಲ. ಮಂದಿಗೆ ಪ್ರಥಮ ಡೋಸ್
ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿದಂತೆ 18ರಿಂದ 44 ವರ್ಷ ದೊಳಗಿನ ಒಟ್ಟು 2,33,126 ಮಂದಿ, 45 ವರ್ಷ ಮೇಲ್ಪಟ್ಟವರಲ್ಲಿ 3,31,927 ಮಂದಿ ಒಂದನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು ಜಿಲ್ಲೆಯಲ್ಲಿ 5.64 ಮಂದಿ ಮೊದಲನೇ ಡೋಸ್ ಪಡೆದುಕೊಂಡಿದ್ದಾರೆ.
ಉತ್ತಮ ಸಾಧನೆ
ಲಸಿಕೆ ವಿತರಣೆಯಲ್ಲಿ ಉಡುಪಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೆ 9,000 ಮಂದಿ ಗರ್ಭಿಣಿ ಹಾಗೂ ಬಾಣಂತಿಯರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.
-ಡಾ| ಎಂ.ಜಿ.ರಾಮ,
ಕೋವಿಡ್ ವ್ಯಾಕ್ಸಿನ್ ಅಧಿಕಾರಿ
4,000 ಗರ್ಭಿಣಿಯರಿಗೆ ವ್ಯಾಕ್ಸಿನ್
ಜಿಲ್ಲೆಯಲ್ಲಿ 14,000 ಗರ್ಭಿಣಿಯರು ಹಾಗೂ 15,000 ಬಾಣಂತಿಯರು ಇದ್ದಾರೆ. ಅವರಲ್ಲಿ ಈಗಾಗಲೇ 4000 ಗರ್ಭಿಣಿಯರು ಹಾಗೂ 5,000 ಬಾಣಂತಿಯರು ಇದುವರೆಗೆ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ 2ನೇ ಡೋಸ್ ಲಸಿಕೆ ಪಡೆದವರು
ಗುಂಪು ಲಸಿಕೆ ಪಡೆದವರು ಶೇಕಡಾವಾರು
ಆ. ಕಾರ್ಯಕರ್ತರು 19,608 ಶೇ.99
ಮು. ಕಾರ್ಯಕರ್ತರು 4,062 ಶೇ.50
45 ವರ್ಷ ಮೇಲ್ಪಟ್ಟವರು 1,69,167 ಶೇ.41
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.