ನನ್ನ ಸಚಿವ ಖಾತೆಯ ಬಗ್ಗೆ ನೂರಕ್ಕೆ ನೂರರಷ್ಟು ಸಂತೃಪ್ತಿ: ಸಚಿವ ಉಮೇಶ್ ಕತ್ತಿ
Team Udayavani, Aug 21, 2021, 6:23 PM IST
ಗೌರಿಬಿದನೂರು: ನನ್ನ ಸಚಿವ ಖಾತೆಯ ಬಗ್ಗೆ ನೂರಕ್ಕೆ ನೂರರಷ್ಟು ಸಂತೃಪ್ತಿ ಇದೆ ಎಂದು ಸಚಿವ ಉಮೇಶ್‌ಕತ್ತಿ ತಿಳಿಸಿದರು.
ನಗರದ ಅರಣ್ಯ ಇಲಾಖೆಯಿಂದ ನಿರ್ವಹಿಸುತ್ತಿರುವ ನರ್ಸರಿ ಹಾಗೂ ಕುರೂಡಿ ಅರಣ್ಯ ಕ್ಷೇತ್ರದಲ್ಲಿ ಬೆಳೆದಿರುವ ಬಿದಿರು ಅರಣ್ಯಕ್ಕೆ ಭೇಟಿ ನೀಡಿ, ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಸುಭದ್ರ ಸರ್ಕಾರವಿದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಹೊಸದಾಗಿ ಸರ್ಕಾರ ರಚನೆಯಾಗಿ ಅರಣ್ಯ ಖಾತೆ ಪಡೆದ ನಂತರ ಪ್ರಥಮವಾಗಿ ಗೌರಿಬಿದನೂರು ತಾಲೂಕಿಗೆ ಭೇಟಿ ನೀಡಿದ್ದೇನೆ. ನನ್ನ ಖಾತೆಗಳು ನನಗೆ ತೃಪ್ತಿ ತಂದಿದೆ.
ನಾನು ಈಗಾಗಲೇ ಹಲವು ಖಾತೆಗಳನ್ನು ನಿರ್ವಹಿಸಿರುವ ಅನುಭವವಿದೆ. ಇನ್ನೂ ಮುಂದಿನ 15 ವರ್ಷಗಳ ಕಾಲ ನನಗೆ ವಯಸ್ಸಿದೆ. ಅಷ್ಟರಲ್ಲಿ ನಾನು ಮುಖ್ಯ ಮಂತ್ರಿಯಾಗುತ್ತೇನೆ ಎಂದರು.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1350 ಪ್ರಕರಣ ಪತ್ತೆ|1648 ಸೋಂಕಿತರು ಗುಣಮುಖ
ಬಿದಿರು ಗಿಡ ನೆಡಲು ಚಿಂತನೆ: ಬಾಗಲಕೋಟೆ, ಬೆಳಗಾಂ, ಬಿಜಾಪುರ, ಕೃಷ್ಣಾ ನದಿಯಲ್ಲಿ ಮಣ್ಣಿನ ಗುಣಮಟ್ಟ ಹಾಳಾಗಿದ್ದು, ಅಲ್ಲಿ ಬಿದಿರು ಗಿಡಗಳನ್ನು ನೆಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಬಿದಿರು ಬೆಳೆದಿರುವ ಸ್ಥಳಗಳನ್ನು ವೀಕ್ಷಿಸ ಲಾಗುವುದು ಎಂದರು.
ಗೌರಿಬಿದನೂರು ಸಮೀಪದಸಾಗಾನ ಹಳ್ಳಿಯಲ್ಲಿ ರೈತರೊಬ್ಬರು ಬೆಳೆದ ಖರ್ಜೂರದ ಬೆಳೆಯನ್ನು ವೀಕ್ಷಣೆ, ಕುರೂಡಿ ಅರಣ್ಯದ ಬಳಿಯ ವಿಜ್ಞಾನ
ಪಾರ್ಕ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ದರು. ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್‌ಗೌಡ ಹಾಗೂ ಪದಾಧಿಕಾರಿಗಳು ಅವರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿದೆ. ಕಾರ್ಖಾನೆಗಳಲ್ಲಿ ಸೌದೆಯನ್ನು ಬಳಸುವುದುನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಶಿವಶಂಕರ ರೆಡ್ಡಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜಕುಮಾರ್ ಶ್ರೀವಾತ್ಸವಾ,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್, ಜಿಲ್ಲಾ ಅರಣ್ಯಾಧಿಕಾರಿ ಅರಸಲಾನ್,ತಹಶೀಲ್ದಾರ್ ಶ್ರೀನಿವಾಸ್, ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.