ವರ್ಚುವಲ್ ಆನ್ ಲೈನ್ ಮೂಲಕ ಚಿಕ್ಕೋಡಿ ಕೋವಿಡ್ ಟೆಸ್ಟ್ ಸೆಂಟರ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
Team Udayavani, Aug 21, 2021, 6:24 PM IST
ಚಿಕ್ಕೋಡಿ: ಬಹುದಿನಗಳ ಬೇಡಿಕೆಯಾಗಿದ್ದ ಚಿಕ್ಕೋಡಿ ನಗರದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ ಆರಂಭಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ವರ್ಚುವಲ್ ಆನ್ ಲೈನ್ ಮೂಲಕ ಉದ್ಘಾಟಿಸಿ ಲೋಕಾರ್ಪನೆಗೊಳಿಸಿದರು.
ಶನಿವಾರ ಬೆಳಗಾವಿಗೆ ಆಗಮೀಸಿದ ಮುಖ್ಯಮಂತ್ರಿಗಳು ಸುವರ್ಣಸೌಧದಲ್ಲಿ ವರ್ಚುವಲ್ ಮೂಲಕ ಚಿಕ್ಕೋಡಿ ಕೋವಿಡ್ ಆರ್‌ಟಿಪಿಸಿಆರ್ ಸೆಂಟರ್ ಉದ್ಘಾಟಿಸಿದರು. ಚಿಕ್ಕೋಡಿ ಉಪವಿಭಾಗ ನೆರೆಯ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವುದರಿಂದ ಪ್ರತಿದಿನ ನೂರಾರು ಕೋವಿಡ್ ಸೋಂಕಿತರು ಕಂಡು ಬರುತ್ತಿದ್ದರು. ಇಡೀ ರಾಜ್ಯದಲ್ಲಿ ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಟೆಸ್ಟಿಂಗ್ ರಿಪೋರ್ಟ ಬರುವುದು ನಾಲ್ಕೈದು ದಿನದಿಂದ ಒಂದು ವಾರದವರೆಗೆ ತಡವಾಗುತ್ತಿತ್ತು. ಹೀಗಾಗಿ ಸರ್ಕಾರ ಕೋವಿಡ್ ಟೆಸ್ಟಿಂಗ್ ಸೆಂಟರ್ ಚಿಕ್ಕೋಡಿಗೆ ಮಂಜೂರು ಮಾಡಿತ್ತು.
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾದ ಕೋವಿಡ್ ಟೆಸ್ಟಿಂಗ್ ಸೆಂಟರ್ ಉದ್ಘಾಟನೆ ಮುಂಚಿತವಾಗಿ ತಹಶೀಲ್ದಾರ ಪ್ರವೀನ ಜೈನ, ತಾಲೂಕಾ ಆರೋಗ್ಯಾಧಿಕಾರಿ ಡಾ, ವಿಠ್ಠಲ ಶಿಂಧೆ, ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ, ಸಂತೋಷ ಕೊಣ್ಣೂರೆ, ಡಾ, ರವೀಂದ್ರ ಅಂಟಿನ ಅವರು ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1350 ಪ್ರಕರಣ ಪತ್ತೆ|1648 ಸೋಂಕಿತರು ಗುಣಮುಖ
ಈ ಸಂದರ್ಭದಲ್ಲಿ ವೈದ್ಯರಾದ ವಿಶಾಲ ಹಡಪದ, ಡಾ, ಲಕ್ಷ್ಮೀಕಾಂತ ಕಡ್ಲೇಪ್ಪಗೋಳ, ಡಾ, ಬದನಿಕಾಯಿ, ಲಕ್ಕಮಗೌಡ ಪಾಟೀಲ, ಸೋಮನಾಥ ಪೂಜೇರಿ, ರಾಜಶೇಖರ ಹಳೆಮನಿ, ರಮೇಶ ದೊಡಮನಿ, ಶ್ರೀನಿವಾಸ ನಾಯಿಕ, ಸಂಜು ಕುಲಕರ್ಣಿ, ಗೀತಾ ಕಾಮತ, ಅಜೀತ ಕೊಟ್ನಿಸ್, ಜಗದೀಶ ಹುಲಕುಂದ,ಜಹೀರ ಮುಲ್ಲಾ ಮುಂತಾದವರು ಇದ್ದರು.
ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದ ಫಲ: ಚಿಕ್ಕೋಡಿಯಲ್ಲಿ ಕೋವಿಡ್ ಟೆಸ್ಟಿಂಗ್ ಸೆಂಟರ್ ಆರಂಭಿಸಬೇಕೆಂದು ಶಾಸಕ ಗಣೇಶ ಹುಕ್ಕೇರಿ ನಿಕಟಪೂರ್ವ ಸಿಎಂ ಯಡಿಯೂರಪ್ಪ. ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು. ಈಗೀನ ಆರೋಗ್ಯ ಸಚಿವ ಡಾ.ಸುಧಾಕರ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.