![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 21, 2021, 8:20 PM IST
ಕುಷ್ಟಗಿ:ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಮೂಲಕ ಬಳ್ಳಾರಿ ಜಿಲ್ಲೆ ಕುಡತಿನಿ ಉಷ್ಣ ಸ್ಥಾವರಕ್ಕೆ ಬೃಹತ್ ಪೈಪಲೈನ್ ಸರಬರಾಜಿಗೆ ಕುಷ್ಟಗಿಯಲ್ಲಿ ಕೆಲ ರೈತರಿಂದ ವಿರೋಧ ವ್ಯಕ್ತವಾಗಿದೆ.
ಈಗಾಗಲೇ ಪೈಪಲೈನ್ ಅಳವಡಿಸಲು ರೈತರೊಂದಿಗೆ ಒಪ್ಪಂದದ ಮೇರೆಗೆ ಅವರ ಜಮೀನಿನಲ್ಲಿ ಸುಮಾರು 6 ಅಡಿ ವ್ಯಾಸದ ಪೈಪಲೈನ್ ಅಳವಡಿಸಲಾಗುತ್ತಿದೆ. ವಿರೋಧ ವ್ಯಕ್ತಪಡಿಸಿದ ರೈತರ ಜಮೀನು ಹೊರತು ಪಡಿಸಿ ಒಪ್ಪಂದ ಮಾಡಿಕೊಂಡ ರೈತರ ಜಮೀನಿನಲ್ಲಿ ಪೈಪ್ ಅಳವಡಿಸಲಾಗುತ್ತಿದೆ.ಕೆಲ ರೈತರ ಒಪ್ಪಂದಕ್ಕೆ ಪಕ್ಕದ ಜಮೀನಿನ ರೈತರು ಇಕ್ಕಟ್ಟಿಗೆ ಸಿಲುಕಿಕೊಳ್ಳುವಂತಾಗಿದೆ. ಈಗಾಗಲೇ ರೈತರೊಬ್ಬರ ಅವರ ಜಮೀನಿನಲ್ಲಿ ಪೈಪು ಅಳವಡಿಸಲಾಗಿದ್ದು, ಪಕ್ಕದ ನಂತರದ ಜಮೀನು ಚಂದಪ್ಪ ಕಂದಗಲ್ ತಮ್ಮ ಪಾಲಿಗೆ ಕೇವಲ 3 ಎಕರೆ ಜಮೀನು ಇದ್ದು ಇದರಲ್ಲಿ ಪೈಪಲೈನ್ ಅಳವಡಿಸಿದರೆ ಜಮೀನು ಹಾಳಾಗುತ್ತಿದ್ದು, ಜಮೀನಿನ ಫಲವತ್ತತೆ ನಾಶವಾಗುತ್ತಿದೆ. ಕಂಪನಿವರು ಕೊಡುವ ಬಿಡಿಗಾಸು ಆಸೆ ಇಲ್ಲ ಇದರ ಸಹವಾಸವೇ ಬೇಡವೆಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಸಂಬಂಧಿಸಿದ ಕಂಪನಿ ಸದರಿ ರೈತರ ಮನ ಒಲಿಸಲು ಮುಂದಾಗಿದ್ದು, ತಹಶೀಲ್ದಾರ ಹಾಗೂ ಸಿಪಿಐ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿರುವುದು ಗೊತ್ತಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸದರಿ ಉದ್ದೇಶಿತ ಪೈಪಲೈನ್ ಅಕ್ಕ ಪಕ್ಕದ ರೈತರಿಗೆ ಆತಂಕ ಶುರುವಾಗಿದೆ.
ಸಂಬಂಧಿಸಿದ ಕಂಪನಿಯವರು ರೈತರಿಗೆ ಅಧಿಕಾರಿಗಳ ಮೂಲಕ ಒತ್ತಡ ತರುತ್ತಿದ್ದು, ಸರ್ಕಾರದ ಮೂಲಕ ಭೂಸ್ವಾಧೀನದ ಬಗ್ಗೆ ಹಾಗೂ ಸರ್ಕಾರದ ಆದೇಶ ಎಂದು ಹೆದರಿಸುತ್ತಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸದ್ಯ ರೈತರನ್ನು ಮನ ಒಲಿಸಲಾಗುತ್ತಿದ್ದು ಪೈಪು ಒಡೆದು ಹಾಳಾಗುವಾಗ ಯಾವೊಬ್ಬ ಅಧಿಕಾರಿ ನೆರವಿಗೆ ಬರುವುದಿಲ್ಲ ಎಂದು ಹೆಸರು ಹೇಳಲಿಚ್ಚಸದ ರೈತರು ತಿಳಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.