ಉಗ್ರರಾರು, ಜನಸಾಮಾನ್ಯರಾರು – ತಿಳಿಯುವುದೇ ಕಷ್ಟ
Team Udayavani, Aug 22, 2021, 6:00 AM IST
ಬೆಳ್ತಂಗಡಿ: ಜೀವನ ನಿರ್ವಹಣೆಗೆ ಬೇಕಾದ ಎಲ್ಲವೂ ಅಫ್ಘಾನಿಸ್ಥಾನದಲ್ಲಿದೆ. ಆದರೆ ಮತೀಯ ಚಿಂತನೆ ಯಿಂದ ಹೊರಬರಲಾಗದೆ ಆ ದೇಶ ಬಡವಾಗಿದೆ. ಅಮೆರಿಕದ ಸೇನೆ ಆ ದೇಶವನ್ನು ತೊರೆಯುವ ಮುನ್ನ 3.40 ಲಕ್ಷ ಅಫ್ಘಾನ್ ಸೈನಿಕರನ್ನು ಸಿದ್ಧಪಡಿಸಿ ಮೂಲಸೌಕರ್ಯ, ಶಸ್ತ್ರಾಸ್ತ್ರ ಒದಗಿಸಿದೆ.
ಹೀಗೆಂದು ಅಲ್ಲಿನ ವಾಸ್ತವದ ಚಿತ್ರಣ ಬಿಚ್ಚಿಟ್ಟವರು ಆಮೆರಿಕ ವಾಯು ನೆಲೆಯ ಹಝಮತ್ (Hazmat)) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ಜೂನ್‌ನಲ್ಲಿ ಮರಳಿದ ಬೆಳ್ತಂಗಡಿ ತಾಲೂಕಿನ ಕೊಕ್ಕಡದವರಾದ ಉಮೇಶ್ ಬಾರ್ಯ.
2007 ಕತಾರ್‌ನಲ್ಲಿ ಕ್ಯಾಟರಿಂಗ್ ಸಪೋರ್ಟರ್ ಆಗಿದ್ದ ಉಮೇಶ್ 2011ರಲ್ಲಿ ಅಮೆರಿಕ ವಾಯು ನೆಲೆಯ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಲೇವಾರಿ ಮಾಡುವಂತ ಹಝÕಮತ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅಮೆರಿಕದ ಸೇನೆ ಕಳೆದ ಮೂರು ತಿಂಗಳ ಹಿಂದೆಯೇ ಅಫ್ಘಾನ್ ತೊರೆಯುವ ಮುನ್ಸೂಚನೆ ನೀಡಿದ್ದು, ಅಲ್ಲಿದ ತನ್ನೆಲ್ಲ ಪರಿಕರಗಳನ್ನು ವಿಲೇವಾರಿ ಮಾಡಲು ಮುಂದಾಗಿತ್ತು. ಕಂಪೆನಿಯಲ್ಲಿದ್ದ ಸಾವಿರಾರು ವಿದೇಶೀ ಸಿಬಂದಿಗಳನ್ನು ಅವರ ದೇಶಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿತ್ತು. ಅದರಂತೆ ಉಮೇಶ್ ಜೂ. 2ರಂದು ಮರಳಿದ್ದರು.
ಪಾಕಿಸ್ಥಾನ ವಜಿರಿಸ್ಥಾನ ಮೂಲ :
ಅಫ್ಘಾನ್‌ನ ಬಾಗ್ರಾಂ ಅಂತಾರಾಷ್ಟ್ರೀಯ ವಾಯು ನೆಲೆಯ 35 ಕಿ.ಮೀ. ವ್ಯಾಪ್ತಿಯಲ್ಲಿ 20 ಅಡಿ ಎತ್ತರದ ಕಾಂಕ್ರೀಟ್ ಬೇಲಿ ನಿರ್ಮಿಸಿ ಅಮೆರಿಕ ಸೇನಾ ನೆಲೆಯನ್ನು ಸ್ಥಾಪಿಸಿದ್ದಲ್ಲದೆ ಉಗ್ರರನ್ನು ಸದೆಬಡಿಯುವಲ್ಲಿ ಕಾರ್ಯ ಪ್ರವೃತ್ತವಾಗಿತ್ತು. ಆದರೆ ಅಲ್ಲಿನ ಜನ ಅಮೆರಿಕ ಸೈನಿಕರಿಗೆ ಬೆಂಬಲ ನೀಡುತ್ತಿರಲಿಲ್ಲ. ಪಾಕಿಸ್ಥಾನ ಗಡಿಯ ವಜಿರಿಸ್ಥಾನ್ ಸಹಿತ ಕಂದಹಾರ್, ಗಝಿ°, ಕಾಬೂಲ್‌ನಲ್ಲಿ ಉಗ್ರರ ಚಟುವಟಿಕೆಗಳು ಮಿತಿ ಮೀರಿ ನಡೆಯುತ್ತಿದ್ದವು. ಅಲ್ಲಿ ಉಗ್ರರು ಯಾರು, ಸಾಮಾನ್ಯರು ಯಾರು ಎಂಬುದನ್ನು ಪತ್ತೆಹಚ್ಚುವುದೇ ಸವಾಲಾಗಿತ್ತು.
ಬಾಗ್ರಾಂ ವಾಯುನೆಲೆಯಲ್ಲಿ ಅಮೆರಿಕದ 12,000 ಸೈನಿಕರಿದ್ದರು. ಅವರೆಲ್ಲ ಮರಳುತ್ತಿದ್ದಂತೆ ಉಗ್ರರು ಪೂರ್ತಿಯಾಗಿ ದೇಶವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವಾಸ್ತವ ತೆರೆದಿಟ್ಟಿದ್ದಾರೆ ಉಮೇಶ್.
ಇಬ್ಬಗೆ ನೀತಿ :
ಅಲ್ಲಿ 2 ರೀತಿಯ ವ್ಯಕ್ತಿಗಳಿದ್ದಾರೆ. ಅವರದೇ ಸರಕಾರ ಬೇಕು ಎನ್ನುವವರು ಕೆಲವರಾದರೆ ಬೇಡ ಎನ್ನುವವರು ಮತ್ತೆ ಕೆಲವರು. ತಾಲಿಬಾನಿಗಳು ಮೂಲ ನಿವಾಸಿಗಳ ಬಡತನವನ್ನೇ ದಾಳವಾಗಿಸಿಕೊಂಡು ಅವರ ಮನಃ ಪರಿವರ್ತಿಸಿ ಅಮೆರಿಕ ಸೈನಿಕರನ್ನು ಹೇಗಾದರೂ ಓಡಿಸಬೇಕೆಂಬ ಚಿಂತನೆ ತುಂಬಿ ಸ್ಥಳೀಯರಿಂದ ದಾಳಿ ಮಾಡಿ ಸುತ್ತಿದ್ದರು. ನಾನು ಬರುವ 15 ದಿನಕ್ಕೆ ಮುನ್ನ ಜಲಲಾಬಾದ್‌ನಲ್ಲಿ ಪತ್ರಿಕಾ ಕಚೇರಿಗೆ ದಾಳಿ ಮಾಡಿ ಮೂವರು ಮಹಿಳಾ ಸಿಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು ಎನ್ನುತ್ತಾರವರು.
ಮಿಲಿಟರಿ ಮೇಲೆ ಮಕ್ಕಳಿಂದ ಬಾಂಬ್! :
ಪ್ರತೀ 10 ಕಿ.ಮೀ. ಅಂತರದಲ್ಲಿ ಅಮೆರಿಕ ಸೇನೆಯ ತುಕಡಿಗಳಿದ್ದವು. ನಾನು ವಾಹನದಲ್ಲಿ ಸುತ್ತಾಡುವಾಗ ಸ್ಥಳೀಯ ಮಕ್ಕಳು ಮಿಲಿಟರಿ ಸಿಬಂದಿಯ ಮೇಲೆ ಬಾಂಬ್ ಎಸೆಯುವುದನ್ನು ಕಂಡಿದ್ದೇನೆ. ಅದೊಂದು ಯುದ್ಧಭೂಮಿ ಇದ್ದಂತೆ; ಯಾವಾಗ ಏನಾಗುತ್ತದೆ ಎನ್ನಲಸಾಧ್ಯ. ಮಹಿಳೆಯರು ಕೇವಲ ವಂಶಾಭಿವೃದ್ಧಿಯ ವಸ್ತುಗಳಷ್ಟೇ, ಅವರ ಭಾವನೆಗಳಿಗೆ ಬೆಲೆಯೇ ಇಲ್ಲ. 2014ರಲ್ಲಿ ಸ್ಥಳೀಯ ಮಹಿಳಾ ಶಾಲೆಯ ನೀರಿನ ಟ್ಯಾಂಕ್ ಒಂದಕ್ಕೆ ವಿಷ ಹಾಕಿ ಅನೇಕ ಮಕ್ಕಳನ್ನು ಕೊಂದು ಹಾಕಿದ ದೃಶ್ಯವನ್ನು ಕಂಡಿದ್ದೇನೆ ಎಂದರು ಉಮೇಶ್.
ಭಾರತವೇ ಸ್ವರ್ಗ :
ಭಾರತವೇ ಸ್ವರ್ಗ; ಅಫ್ಘಾನ್ ನರಕ ಸ್ವರೂಪ. ಅಲ್ಲಿನ ಮಂದಿ ಶಿಸ್ತು ಏನೆಂಬುದೇ ಅರಿವಿಲ್ಲದ ಅನಾಗರಿಕರು. ಅವರನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಅಮೆರಿಕ ಸೈನ್ಯವು ಹಿಂದೆ ಸರಿದಿದೆ. ನನ್ನ ಜತೆಗೆ ಕೆಲಸ ಮಾಡುತ್ತಿದ್ದ ಕೆಲವು ಸ್ನೇಹಿತರು ಈಗಲೂ ಅಲ್ಲಿದ್ದಾರೆ.– ಉಮೇಶ್ ಬಾರ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.