ನಮ್ದೂಕೆ ಡಿಕೆ ಸಾಬ್ ಸಿಎಂ ಅಂದ್ರಾ ಜಮೀರ್ ಭಾಯ್…
Team Udayavani, Aug 22, 2021, 9:23 AM IST
ಅಮಾಸೆ: ನಮ್‌ಸ್ಕಾರ ಸಾ..
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ
ಅಮಾಸೆ: ಬಸ್ವರಾಜ್ ಬೊಮ್ಮಾಯಣ್ಣೋರ್ ಗೌರ್ನ್ ಮೆಂಟ್‌ನಾಗೆ ಫುಲ್ ಬಿಜಿ ಸಾ…
ಚೇರ್ಮನ್ರು: ನಿಂಕೇನ್ಲಾ ಅಲ್‌ಕೇಮು
ಅಮಾಸೆ: ನ್ಯೂ ಗೌರ್ನ್ ಮೆಂಟ್ ಅಲ್ವೇ ವಸಿ ಮೊದ್ಲೇ ಜಾಕ್ ಹಾಕುದ್ರೆ ಏನಾರಾ ಗಿಟ್‌ತೈದೆ ಅಂತಾ
ಚೇರ್ಮನ್ರು: ಈ ಸಿಎಂತಾವಾ ಏನೂ ಗಿಟ್ಟಾಕಿಲ್ಲ ಬುಡ್ಲಾ. ಎಲ್ಲಾನೂ ಕಟ್ ಮಾಡ್ ಬುಡಿ ಅಂತಾ ಫರ್ಮಾನ್ ಕೊಟ್ಟವ್ನೇ
ಅಮಾಸೆ: ಆದ್ರೂ ಬಿಡಾ ಕಾಯ್ತದಾ ಸಾ… ಏನಾರಾ ಐಡೀರಿಯಾ ಮಾಡ್ಬೇಕಲ್ವೇ
ಚೇರ್ಮನ್ರು: ಇವ್ರು ಜಾಸ್ತಿ ದಿನಾ ಇರಾಕಿಲ್ಲಾ ಅಂತಾ ಇಬ್ರಾಹಿಂ ಸಾಹೇಬ್ರು, ಟಗ್ರು ಸಿದ್ರಾಮಣ್ಣೋರು ಹೇಳವ್ರಂತೆ ಹೌದೇನ್ಲಾ
ಅಮಾಸೆ: ಹೌದೇಳಿ, ನವೆಂಬರ್ ಗಂಟಾ ಅಷ್ಟೇಯಾ ಅಂತಾ ಇಬ್ರಾಹಿಂ ಸಾಹೇಬ್ರು ಹೇಳುದ್ರೆ, ಸಿದ್ರಾಮಣ್ಣೋರು ನೆಕ್ಸ್ಟ್ ಬಡ್ಜೆಟ್ಟು ಡೌಟೇ ಅಂತಾ ಹೇಳವ್ರೆ
ಚೇರ್ಮನ್ರು: ಬಸ್ವರಾಜ್ ಬೊಮ್ಮಾಯಣ್ಣೋರು ಸಿದ್ರಾಮಣ್ಣೋರು ಫ್ರೆಂಡ್ಸ್ ಅಲ್ವೇ ಹೌದೌದು ಡೀಪ್ ಫ್ರೆಂಡ್ಸು. ಆದ್ರೆ ನಾನ್ ಎಲ್ವೂ ಪೊಲಿಕಲ್ ಐನಾಗೆ ನೋಡ್ತೀನಿ, ತಪ್ ಮಾಡುದ್ರೆ ನನ್ ಫ್ರೆಂಡ್ ಆದ್ರೂ ಬಿಡಾಕಿಲ್ಲ ಅಂತಾ ಸಿದ್ರಾಮಣ್ಣೋರು ಹೇಳವ್ರೆ
ಚೇರ್ಮನ್ರು: ಅದ್ಕೆ ಬೊಮ್ಮಾಯಣ್ಣೋರು ಏನ್ ಹೇಳಿದ್ರಂತೆ
ಅಮಾಸೆ: ವತ್ತಾರೇನೆ ಫೋನ್ ಮಾಡ್‌ಬುಟ್ಟು ಏನ್ ಸಾರ್ ನೀವೇ ಇಂಗ್ ಜಾಪಾಳಾ ಕೊಟ್ರೆ ಎಂಗೆ ಅಂತಾ ಕೇಳುದ್ರಂತೆ. ಅದ್ಕೆ ಸಿದ್ರಾಮಣ್ಣೋರು ಅಲ್ ಕಣಯ್ನಾ ನಾನೇನೋ ಮೈ ಬಾಯ್ ಅಂತಿದ್ರೆ, ನೀನ್ ದ್ಯಾವೇ ಗೌಡ್ರು ತಾವಾ ಹೋಗ್ ಬುಟ್ಟು ಹೆಲ್ಪ್ ಮೀ ಅಂತೇಳಿದಿಯಾ ಆಯ್ತು ಬುಡು ಆಂತಾ ಕ್ಯಾಪಾ ಮಾಡ್ಕಂಡ್ರಂತೆ.
ಚೇರ್ಮನ್ರು: ಕ್ವಾಪಾ ಯಾಕ್ಲಾ
ಅಮಾಸೆ: ಅತ್ಲಾಗ್ ದ್ಯಾವೇಗೌಡ್ರು ಮೋದಿ ಸಾಹೇಬ್ರಿಗೆ ಶೇಕ್ ಹ್ಯಾಂಡ್ ಮಾಡ್‌ಬುಟ್ಟು ಇತ್ಲಾಗ್ ಕುಮಾರಣ್ಣೋರು-ಬಸ್ವ್ ರಾಜ್ ಬೊಮ್ಮಾಯಣ್ಣೋರು ಫ್ರೆಂಡ್ಸ್ ಆಗ್‌ಬುಟ್ಟು ನಿಂಬೆಣ್ಣು ರೇವಣ್ಣೋರು ಡಿಸಿಎಂ ಆಗೋದಂಗೆ ಸಿದ್ರಾಮಣ್ಣೋರೆ ಡ್ರೀಮ್ ಬಿದ್ದೈತಂತೆ
ಚೇರ್ಮನ್ರು: ಅಂಗೆಲ್ಲಾ ಆಗೋ ಸೀನ್ ಐತಾ
ಅಮಾಸೆ: ಕಮ್ಲ ಎಂಎಲ್ಲೇಸ್ ಡೈಲಿ ವರಾತಾ ನೋಡ್ತಿದ್ರೆ ಅಂಗೇ ಅನ್ಸ್‌ತದೆ
ಚೇರ್ಮನ್ರು: ಕುಮಾರಣ್ಣೋರ್ ಏನ್ ಮಾಡ್ತಾವರ್ಲಾ
ಅಮಾಸೆ: ಕುಮಾರಣ್ಣೋರು ತೋಟ್‌ದಾಗೆ ಸಿಟ್ಟಿಂಗ್ ಹಾಕ್‌ಬುಟ್ಟು ಪಿಲಾನ್ ಮಾಡ್ತಾವ್ರೆ. ಕಮ್ಲನಾಗೆ ಶೇಕ್ ಆದ್ರೆ ಎಂಟ್ರಿ ಕೊಡೂಮಾ ಅಂತಾ ಕಾಯ್ತಾವ್ರೆ
ಚೇರ್ಮನ್ರು: ರೇವಣ್ಣೋರು ಯಾಕ್ಲಾ ಡೆಲ್ಲಿ ಗೋಗಿದ್ರಂತೆ
ಅಮಾಸೆ: ಯಡ್ನೂರಪ್ನೋರು ರಿಸೈನ್ ಮಾಡಿದ್ ಮ್ಯಾಗೆ ಏನಾರಾ ವರ್ಕೌಟ್ ಆಯ್ತದೇನೋ ಅಂತಾ ಸಂತೋಸ ಆಗೋಬುಟ್ಟು ಜೀ ಅವ್ರ್ ಗೆ ಮೀಟ್ ಆದ್ರಂತೆ
ಚೇರ್ಮನ್ರು: ಆಟೋ ಸಂಕರ್‌ಗೆ ಯಾಕ್ಲಾ ಮಿನಿಸ್ಟ್ರೆ ಕೊಡ್ಲಿಲ್ಲಾ
ಅಮಾಸೆ: ಅವ್ರುದು ಬ್ಯಾಡ್ ಫರ್ಪಾಮೆನ್ಸ್ ಅಂತಾ ರಿಪೋರ್ಟ್ ಕೊಟ್ಟವ್ರಂತೆ. ಜತ್ಗೆ ಬೆಳ್ಗಾವಿ ಸೀಮಂತಣ್ಣೋರ್ಗೂ ರೆಸ್ಟ್ ತಕಳಿ ಅಂದ್ರಂತೆ. ಅದ್ಕೆ ನಂದೇ ಚಾನ್ಸ್ ಅಂತಾ ಕುಮ್ಟಳ್ಳಿ ಭುಜ ಕುಣ್ಸ್ ತಾವ್ರಂತೆ
ಚೇರ್ಮನ್ರು: ರಮೇಶ್ ಜಾರ್ಕಿಹೊಳಿ ಸಾವ್‌ಕಾರ್ರು ಎಲ್ಗೊಗವ್ರೆ
ಅಮಾಸೆ: ವೆರಿ ಶಾರ್ಟ್‌ಲಿ ಎಗೈನ್ ಮಿನಿಸ್ಟರ್ ಆಫ್ ವಾಟರ್ ರಿಸೋರ್ಸಸ್ ಅಂತಾ ಎಂಟ್ರಿ ಕೊಡ್ತಾರೆ ಅಂತಾ ಬಾಲಚಂದ್ರಣ್ಣೋರು ಹೇಳವ್ರೆ.
ಚೇರ್ಮನ್ರು: ರಾಜಾಹುಲಿ ಯಡ್ನೂರಪ್ನೋರು ಯಾಕ್ಲಾ ಫಾರಿನ್ ಒಂಟೋಗೈತೆ
ಅಮಾಸೆ: ಅವ್ರ್ ಅಂದ್‌ಕಂಡಂಗೆ ಏನೂ ಆಯ್ತಿಲ್ ವಂತೆ. ಮೊದ್ಲು ನೀವ್ ಹೇಳ್ದಂಗೆ ಅಂತಿದ್ದ ಬಸಣ್ಣೋರು ಆಮ್ಯಾಕೆ ವರಾತಾ ತೆಗೀತಾವ್ರಂತೆ. ಅದ್ಕೆ, ಇವ್ರನೆಲ್ಲಾ ನಂಬುದ್ರೆ ಆಗಾಕಿಲ್ಲಾ. ಮೈ ಸನ್ ವಿಜಯೇಂದ್ರ ಬಾಹುಬಲಿ ಫ್ಯೂಚರ್‌ಗೆ ಏನಾದ್ರು ಐಡೀರಿಯಾ ಮಾಡ್ಬೇಕು ಅಂತೇಳಿ ಡೀಪ್ ಡಿಸ್‌ಕಸನ್‌ಗೆ ಹೋಗವ್ರಂತೆ. ನೋಡುಮಾ ಏನ್ ಆಯ್ತದೋ, ನನ್ ಹೆಂಡ್ರು ಮೀನ್ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ….
ಎಸ್.ಲಕ್ಷ್ಮಿ ನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Bangladesh: ಹಿಂದೂ ಸನ್ಯಾಸಿ ಚಿನ್ಮಯಿ ದಾಸ್ ಜಾಮೀನು ಅರ್ಜಿ ವಜಾಗೊಳಿಸಿದ ಅರ್ಜಿ!
Delhi: ಕೇಜ್ರಿವಾಲ್ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ
Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.