ವಿನಯ್ ಕುಲಕರ್ಣಿಗೆ ತಿಲಕವಿಟ್ಟು ರಾಖೀ ಕಟ್ಟಿ ಸ್ವಾಗತಿಸಿದ ಶಾಸಕಿ ಹೆಬ್ಬಾಳ್ಕರ್
Team Udayavani, Aug 22, 2021, 1:41 PM IST
ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಜೈಲಿನ ಆವರಣಕ್ಕೆ ಬಂದಿದ್ದರು. ಒಂದು ಗಂಟೆಗಳ ಕಾಲ ಕಾಯುತ್ತ ಹೊರ ಭಾಗದಲ್ಲಿ ನಿಂತಿದ್ದರು. ವಿನಯ ಜೈಲಿನಿಂದ ಹೊರ ಬರುತ್ತಲೇ ಹೂಗುತ್ಛ ನೀಡಿ ಹಣೆಗೆ ತಿಲಕವಿಟ್ಟು ಅವರಿಗೆ ರಾಖೀ ಕಟ್ಟಿ ಸ್ವಾಗತಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, “ನನ್ನ ಹಾಗೂ ವಿನಯಣ್ಣನ ಕುಟುಂಬದ ಸಂಬಂಧ ರಾಜಕೀಯೇತರವಾಗಿದೆ. 25 ವರ್ಷಗಳಿಂದಲೂ ಅಣ್ಣ-ತಂಗಿ ನಂಟಿದೆ. ರಕ್ಷಾ ಬಂಧನ ಮುನ್ನಾ ದಿನವೇ ಅಣ್ಣ ಕಾರಾಗೃಹದಿಂದ ಬಿಡುಗಡೆ ಆಗುತ್ತಿದ್ದಾರೆ. ಹೀಗಾಗಿ ನಮಗೆಲ್ಲ ಇದು ಸಂತಸದ ಸುದ್ದಿ. ಅವರು ಬಿಡುಗಡೆ ಆಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸಂತೋಷದಿಂದ ಸ್ವಾಗತಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ’ ಎಂದರು.
“ವಿನಯಣ್ಣನ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಘಾಸಿಯಾಗಿದ್ದಾರೆ. ಅವರ ಕುಟುಂಬ ವರ್ಗದವರಿಗೂ ಬಹಳ ನೋವಾಗಿದೆ. ಈ ಪ್ರಕರಣದಲ್ಲಿ ಅವರು ಗೆದ್ದು ಬರಲಿ ಎಂಬುದಾಗಿ ಹಾರೈಸುತ್ತೇನೆ. ಕಾಂಗ್ರೆಸ್ ಪಕ್ಷ ವಿನಯಣ್ಣನ ಜೊತೆಗೆ ಇರುತ್ತದೆ. ಇವರ ಬಿಡುಗಡೆಯಿಂದ ಪಕ್ಷಕ್ಕೆ ಬಹಳ ಅನುಕೂಲ ಆಗಲಿದೆ. ಕೇವಲ ಒಂದು ಕ್ಷೇತ್ರದ ನಾಯಕರಲ್ಲದೇ ರಾಜ್ಯ ಮಟ್ಟದ ಪ್ರಭಾವಿ ನಾಯಕರು. ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಆಗಿದ್ದಾರೆ’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.